ಮೊಘಲರು ದುಷ್ಟರಲ್ಲ : ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಹೇಳಿಕೆ
Team Udayavani, Aug 26, 2021, 5:15 PM IST
ಕಳೆದ 24 ಗಂಟೆಗಳಲ್ಲಿ 46,164 ಸೋಂಕಿನ ಪ್ರಕರಣಗಳು ಪತ್ತೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 46,164 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಬುಧವಾರಕ್ಕಿಂತ ಶೇ.22ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಳವಾದಂತಾಗಿದೆ. ಇನ್ನು ಸೋಂಕಿನಿಂದ ಕಳೆದೊಂದು ದಿನದಲ್ಲಿ 607 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಬಿ.ವಿ.ನಾಗರತ್ನ ಸುಪ್ರೀಂ ನ ಮುಖ್ಯ ನ್ಯಾಯಾದೀಶೆ..?
ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಶಿಫಾರಸು ಮಾಡಲಾದ ಎಲ್ಲಾ ಒಂಬತ್ತು ಹೆಸರುಗಳನ್ನು ಕೇಂದ್ರ ಅನುಮೋದಿಸಿದೆ. ಮೂವರು ಮಹಿಳಾ ನ್ಯಾಯಾಧೀಶರನ್ನು ಒಳಗೊಂಡ ಒಂಬತ್ತು ಮಂದಿಯ ಪಟ್ಟಿಯನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗಿದೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಸೇರಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 9 ನ್ಯಾಯಮೂರ್ತಿಗಳ ಹೆಸರಿಗೆ ಕೇಂದ್ರದ ಅನುಮೋದನೆ ಸಿಕ್ಕಿದೆ ಎಂದು ವರದಿಯಾಗಿದೆ.
ಮನೆಯಿಂದಲೇ ಕೆಲಸ ಮಾಡಬೇಕು : ಮಹಿಳೆಯರಿಗೆ ತಾಲಿಬಾನ್ ತಾಕೀತು
ತಾಲಿಬಾನ್ ಉಗ್ರ ಸಂಘಟನೆ ಅಫ್ಗಾನಿಸ್ತಾನದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲಎಂದು ಒಪ್ಪಿಕೊಂಡಿದ್ದು, ಮಹಿಳೆಯರು ಮನೆಯಿಂದಲೇ ಕೆಲಸ ಮಾಡುವಂತೆ ತಾಲಿಬಾನ್ ನಿರ್ದೇಶಿಸಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ತಾಲಿಬಾನ್ ಈಗಾಗಲೇ ಮಹಿಳೆಯರಿಗೆ ಸಾಕಷ್ಟು ಫತ್ವ ಹೊರಡಿಸಿದ್ದು, ಈಗ ಮಹಿಳೆಯರು ಹೊರಗಡೆ ಕಾಲಿಡದಂತೆ ಕಟ್ಟಪ್ಪಣೆ ಹೊರಡಿಸದೆ ಎನ್ನಲಾಗಿದೆ.
ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರಿ : ಅಮೆರಿಕಾ
ವಿದೇಶಿಗರು ಅಫ್ಗಾನ್ ನನ್ನು ತೊರೆಯಲು ಹಾತೊರೆಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದತ್ತ ಜನರು ಜಮಾಯಿಸಿದ್ದಾರೆ. ಈ ನಡುವೆ ಅಮೆರಿಕಾ ಅಪಾಯದ ಎಚ್ಚರಿಕೆಯನ್ನು ನೀಡಿದ್ದು, ತಾಲಿಬಾನ್ ಉಗ್ರರು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದು, ಅಲ್ಲಿಂದ ದೂರವಿರಲು ತನ್ನ ನಾಗರಿಕರಿಗೆ ಸೂಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕೇಂದ್ರ ಆಸ್ತಿ ಮಾರಾಟದಲ್ಲಿ ಬ್ಯುಸಿ ಆಗಿದೆ : ರಾಹುಲ್ ಕಿಡಿ
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ವಿರುದ್ಧ ಪರೋಕ್ಷವಾಗಿ ರಾಹುಲ್ ಗಾಂಧಿ ಟ್ವೀಟ್ದಾಳಿ ಮಾಡಿದ್ದಾರೆ. ದೇಶದಲಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಸೋಂಕಿನಿಂದ ನಿಮ್ಮ ಬಗ್ಗೆ ನೀವೇ ಜಾಗೃತೆ ವಹಿಸಿಕೊಳ್ಳಿ, ಯಾಕೆಂದರೇ, ಕೇಂದ್ರ ಸರ್ಕಾರ ಆಸ್ತ ಮಾರಾಟದಲ್ಲಿ ನಿರತವಾಗಿದೆ ಎಂದು ಕಿಡಿ ಕಾರಿದ್ದಾರೆ.
ಆಸ್ತಿ ಮಾರಾಟ ಮಾಡಿ ಹಣ ಗಳಿಸಿದವರು ನೀವು : ನಿರ್ಮಲಾ
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ವಿರುದ್ಧ ರಾಹುಲ್ ಗಾಂಧಿ ಟೀಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. ದೇಶದ ಆಸ್ತಿ ಮಾರಾಟ ಮಾಡಿ ಹಣ ಗಳಿಸಿದವರು ನೀವು. 2008ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮುಂಬೈ ಪುಣೆ ಹೆದ್ದಾರಿ ನಗದೀಕರಣದ ಮೂಲಕ 8 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು. ಆಗ ರಾಹುಲ್ ಗಾಂಧಿ ಏಕೆ ಸುಮ್ಮನಿದ್ದರು ಎಂದು ಸೀತಾರಾಮನ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಎಲ್ಲವೂ ಸುಖವಾಗಿತ್ತಾ? : ಆರಗ ಜ್ಞಾನೇಂದ್ರ
ಮೈಸೂರು ಘಟನೆಯಂತಹ ವಿಚಾರಗಳಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು. ಇದು ರಾಜಕೀಯ ಮಾಡುವ ಘಟನೆಯೂ ಅಲ್ಲ. ಕಾಂಗ್ರೆಸ್ ಅವಧಿಯಲ್ಲಿ ಎಲ್ಲವೂ ಸುಖವಾಗಿತ್ತಾ? ಇಂತಹ ಘಟನೆಗಳು ಆಗಿರಲಿಲ್ವಾ? ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ಮಾಡಿದ್ದಾರೆ.
ಮೊಘಲರು ದುಷ್ಟರಲ್ಲ : ಬಾಲಿವುಡ್ ನಿರ್ದೇಶಕ ಕಬೀರ್ ಖಾನ್
ಭಾರತವನ್ನು ನೂರಾರು ವರ್ಷಗಳ ಕಾಲ ಆಳಿದ್ದ ಮೊಘಲರನ್ನು ದುಷ್ಟರಂತೆ ಬಿಂಬಿಸಿರುವ ಸಿನಿಮಾಗಳನ್ನು ವೀಕ್ಷಿಸಲು ತುಂಬಾ ಗೊಂದಲಕಾರಿಯಾಗುತ್ತದೆ. ಯಾಕೆಂದರೆ ಕೇವಲ ಜನಪ್ರಿಯತೆಗಾಗಿ ಸಿನಿಮಾ ಕಥೆಯನ್ನು ಹೆಣೆದಿರುತ್ತಾರೆಯೇ ಹೊರತು, ಐತಿಹಾಸಿಕ ಪುರಾವೆಗಳನ್ನು ಆಧರಿಸಿದ ಸಿನಿಮಾ ಕಥೆ ಆಗಿರುವುದಿಲ್ಲ ಎಂದು ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ