ಉಡುಪಿಯಲ್ಲಿ ಮತ್ತೆ 5 ಕೋವಿಡ್ ಪ್ರಕರಣ ಪತ್ತೆ: ಜಿಲ್ಲಾಧಿಕಾರಿ ಮಾಹಿತಿ
Team Udayavani, May 19, 2020, 2:51 PM IST
ಉಡುಪಿ : ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು ಐದು ಕೋವಿಡ್ ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸೋಂಕಿತರಲ್ಲಿ ನಾಲ್ಕು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು ಇನ್ನೋರ್ವ ಸೋಂಕಿತೆ ಚಿತ್ರದುರ್ಗ ಮೂಲದ 17 ವರ್ಷದ ಬಾಲಕಿ ಕ್ಯಾನ್ಸರ್ ರೋಗದ ಕಾರಣ ಉಡುಪಿ ಜಿಲ್ಲೆ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇದೀಗ ಆಕೆಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದ್ದು ಇವರೆಲ್ಲರಿಗೂ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.