ಉಡುಪಿಯಲ್ಲಿ ಮುಂದುವರಿದ ಕೋವಿಡ್ ಕಾಟ! ಇಂದು ಮತ್ತೆ 16 ಮಂದಿಗೆ ಸೋಂಕು ಪತ್ತೆ
Team Udayavani, May 25, 2020, 3:01 PM IST
ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-19 ಸಂಕಷ್ಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅನ್ಯರಾಜ್ಯಗಳಿಂದ ಬಂದ ಜನರು ಗಂಟಲು ದ್ರವ ಪರೀಕ್ಷೆ ಪ್ರಮಾಣ ಹೆಚ್ಚುತ್ತಿದ್ದಂತೆ ಸೋಂಕು ದೃಢವಾಗುತ್ತಿರುವ ಸಂಖ್ಯೆಯೂ ಏರಿಕೆ ಕ್ರಮದಲ್ಲಿದೆ. ಜಿಲ್ಲೆಯಲ್ಲಿ ಇಂದು 16 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 92 ಕ್ಕೆ ಏರಿಕೆಯಾಗಿದೆ.