Yadagiri : ಭಾರಿ ಮಳೆಗೆ ಕೊಯಿಲೂರ – ಪಗಲಾಪುರ ಸೇತುವೆಯ ರಸ್ತೆ ಕುಸಿದು ಸಂಚಾರ ಕಡಿತ
Team Udayavani, Jul 23, 2020, 10:23 PM IST
ಯಾದಗಿರಿ : ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ತಾಲೂಕಿನ ಕೊಯಿಲೂರ – ಪಗಲಾಪುರ ಸೇತುವೆಯ ರಸ್ತೆ ಕುಸಿತದಿಂದ ಸಂಪರ್ಕ ಕಡಿತವಾಗಿದೆ. ಯಾದಗಿರಿಯಲ್ಲಿ 74 ಮಿ. ಮೀ ಮಳೆಯಾಗಿದ್ದು, ಗ್ರಾಮೀಣ ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ. ಇದರಿಂದಾಗಿ ಕೊಯಿಲೂರ ಬಳಿಯ ಹಳ್ಳ ಉಕ್ಕಿ ಹರಿಯುತ್ತಿದ್ದು ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ.