Red Wine: ರಸ್ತೆಯಲ್ಲಿ ಹೊಳೆಯಂತೆ ಹರಿದ ರೆಡ್ ವೈನ್… ವಿಡಿಯೋ ವೈರಲ್
Team Udayavani, Sep 12, 2023, 10:04 AM IST
ಪೋರ್ಚುಗಲ್: ಭಾನುವಾರದಂದು ಪೋರ್ಚುಗಲ್‌ನ ಸಾವೊ ಲೌರೆಂಕೊ ಡಿ ಬಾರೊ ಸಣ್ಣ ಪಟ್ಟಣದ ಜನ ಕೆಲ ಹೊತ್ತು ಭೀತಿಗೆ ಒಳಗಾಗಿದ್ದರು ಜೊತೆಗೆ ಆಶ್ಚರ್ಯವೂ ಕಾದಿತ್ತು.
ಹೌದು ನಗರದ ರಸ್ತೆ ತುಂಬೆಲ್ಲಾ ರಕ್ತದ ಬಣ್ಣವನ್ನು ಹೋಲುವ ಹೊಳೆಯೇ ಹರಿದಂತೆ ಭಾಸವಾಗಿತ್ತು ಇದನ್ನು ಕಂಡ ಅಲ್ಲಿಯ ಜನ ಒಂದು ಕ್ಷಣ ಭೀತಿಗೊಳಗಾಗಿದ್ದೂ ಹೌದು ಬಳಿಕ ಗೊತ್ತಯಿತು ಇದು ರಕ್ತವಲ್ಲ ರೆಡ್ ವೈನ್ ಎಂದು.
20 ಲಕ್ಷ ಲೀಟರ್ ರೆಡ್ ವೈನ್ ಸಾಗಿಸುವ ಬ್ಯಾರೆಲ್ ಏಕಾಏಕಿ ಸ್ಪೋಟಗೊಂಡ ಪರಿಣಾಮ ನಗರದ ಪ್ರಮುಖ ರಸ್ತೆಗಳ ತುಂಬೆಲ್ಲಾ ರೆಡ್ ವೈನ್ ಹೊಳೆಯಂತೆ ಹರಿದಿದೆ ಹಾಗಾಗಿ ಮೊದಲು ಜನರಿಗೆ ಕೆಂಪು ಬಣ್ಣದ ನೀರು ಕಂಡು ಗಾಬರಿಗೊಂಡ ಜನಕ್ಕೆ ಬಳಿಕ ಇದು ರೆಡ್ ವೈನ್ ಎಂದು ಗೊತ್ತಾದಾಗ ನಿಟ್ಟುಸಿರು ಬಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಹರಿದಾಡುತ್ತಿದ್ದು ಲಕ್ಷಾಂತರ ಲೀಟರ್ ವೈನ್ ಪೋಲಾಗಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಇದರ ಪ್ರಮಾಣ ಎಷ್ಟಿತೆಂದರೆ ಒಂದು ಒಲಂಪಿಕ್ ನ ಈಜುಕೊಳ ತುಂಬಲು ಎಷ್ಟು ನೀರು ಬೇಕಿತ್ತೋ ಅಷ್ಟು ಪ್ರಮಾಣದ ವೈನ್ ರಸ್ತೆ ಪಾಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಬ್ಯಾರೆಲ್ ಸ್ಪೋಟಗೊಂಡ ಕೂಡಲೇ ಲೆವಿರಾ ಡಿಸ್ಟಿಲರಿ ಕಂಪೆನಿ ಕ್ಷಮೆ ಯಾಚಿಸಿದ್ದು ಯಾವುದೇ ಕಾರಣಕ್ಕೂ ರೆಡ್ ವೈನ್ ನದಿಗೆ ಹರಿಯದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದ್ದಾರೆ ಅದರಂತೆ ನದಿಗೆ ಹರಿಯುತಿದ್ದ ರೆಡ್ ವೈನ್ ಮಾರ್ಗವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಹೇಳಿದ್ದಾರೆ ಅಲ್ಲದೆ ವೈನ್ ನಗರದ ಕೆಲವು ಮನೆಗಳಿಗೆ ನುಗ್ಗಿದ್ದು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗಿ ಸಾಕಷ್ಟು ನಷ್ಟ ಉಂಟು ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಕಂಪೆನಿ ಎಲ್ಲ ನಷ್ಟ ಭರಿಸುವ ಭರವಸೆ ನೀಡಿದೆ.
The citizens of Levira, Portugal were in for a shock when 2.2 million liters of red wine came roaring down their streets on Sunday. The liquid originated from the Levira Distillery, also located in the Anadia region, where it had been resting in wine tanks awaiting bottling. pic.twitter.com/lTUNUOPh9B
— Boyz Bot (@Boyzbot1) September 12, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.