Viral Video: ಖ್ಯಾತ ಟಿಕ್ ಟಾಕರ್‌ನ ಖಾಸಗಿ ವಿಡಿಯೋ ಲೀಕ್: ಇದಕ್ಕೆ ಆತನೇ ಜವಾಬ್ದಾರಿ…
Team Udayavani, Nov 5, 2023, 6:08 PM IST
ಕರಾಚಿ: ಯೂಟ್ಯೂಬರ್ ಗಳಾದ ಕುಲ್ಹಾದ್ ಪಿಜ್ಜಾ ದಂಪತಿ ಗುರುಪ್ರೀತ್ ಮತ್ತು ಸಹಜ್ ಅವರ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಐರಲ್ ಆದ ಬಳಿಕ ಇದೀಗ ಮತ್ತ್ತೊಬ್ಬ ಖ್ಯಾತ ಟಿಕ್ ಟಾಕರ್ ಯೊಬ್ಬರ ಖಾಸಗಿ ವಿಡಿಯೋ ಲೀಕ್ ಆಗಿದ್ದು, ಈ ಬಗ್ಗೆ ಟಿಕ್ ಟಾಕರ್ ಭಾವುಕರಾಗಿದ್ದಾರೆ.
ಪಾಕಿಸ್ತಾನಿ ಟಿಕ್‌ಟಾಕ್ ತಾರೆ ಅಲಿಜಾ ಸೆಹೆರ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಖಾಸಗಿ ವಿಡಿಯೋವೊಂದು ಲೀಕ್ ಆಗಿರುವುದು. ತನ್ನ ವಿಡಿಯೋ ಲೀಕ್ ಆಗಿರುವುದಕ್ಕೆ ಹಾಗೂ ಅದನ್ನು ಮಾಡಿರುವವರ ವಿರುದ್ದ ಟಿಕ್ ಟಾಕರ್ ಗರಂ ಆಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕತಾರ್‌ನಲ್ಲಿರುವ ಆ ನಾಯಿ(( ವ್ಯಕ್ತಿಯ ಬಗ್ಗೆ) ನನ್ನ ವಿಡಿಯೋ ವೈರಲ್ ಮಾಡಲು ಕಾರಣ. ಇದಕ್ಕೆ ಆತನೇ ಜವಾಬ್ದಾರಿ. ರಾತ್ರಿ 11 ಗಂಟೆಗೆ ವಿಚಾರ ಗೊತ್ತಾದ ಬಳಿಕ ನಾನು ಮುಂಜಾನೆ ಮುಲ್ತಾನ್ ಸೈಬರ್ ಕ್ರೈಮ್ ಇಲಾಖೆಗೆ ಹೋದೆ. ನನಗೆ ಸೈಬರ್ ಕ್ರೈಮ್ ಇಲಾಖೆಯಿಂದ ಬೆಂಬಲ ಸಿಕ್ಕಿತು. ನಾನು ಇಡೀ ದಿನ ಅಲ್ಲೇ ಇದ್ದೆ, ಆ ವ್ಯಕ್ತಿಯ ಬಗ್ಗೆ ಎಲ್ಲ ಮಾಹಿತಿ ಹೇಳಿದೆ ಆದರೂ ಈ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ನಾನು ತುಂಬಾ ಪರಿಶ್ರಮಪಟ್ಟು ಮೇಲೆ ಬಂದಿದ್ದೇನೆ ಎಂದು ನಿಮ್ಮಗೆಲ್ಲ ಗೊತ್ತಿದೆ. ನಾನು ಯೂಟ್ಯೂಬ್ ಚಾನೆಲ್‌ನ ಆರಂಭಿಸಿದ ವೇಳೆಯೂ ಪ್ರಾರಂಭದಲ್ಲಿ ಬೆದರಿಕೆಗಳನ್ನು ಎದುರಿಸಿದೆ. ಆದರೂ ನಾನು ಸವಾಲಿನಿಂದ ಅದನ್ನು ಮುಂದುವರೆಸಿದೆ ಎಂದು ವಿಡಿಯೋವೊಂದನ್ನು ಮಾಡಿ ಕಟುವಾಗಿ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಅಲಿಜಾ ಅವರು ತುಂಬಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ದಿನನಿತ್ಯದ ಅವರು ಮಾಡುವ ವಿಡಿಯೋಗಳಿಗೆ ಅಪಾರ ನೋಡುಗರ ವರ್ಗವಿದೆ. ಕುಟುಂಬಕ್ಕೆ ಕೃಷಿ ಕೆಲಸದಲ್ಲಿ ಸಹಾಯ ಮಾಡುವುದಿರಲಿ ಅಥವಾ ಮನೆಯ ಹೊರಗಿನ ಕೆಲಸವಿರಲಿ ಮುಂತಾದ ಸಂದರ್ಭದ ವಿಡಿಯೋಗಳನ್ನು ಅವರು ಮಾಡುತ್ತಿದ್ದರು.
kindly Support Her.#Alizasehar pic.twitter.com/eCxLa2T4Gd
— Abid Ashraf🍁 (@AbidAshraRajput) October 26, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ
US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್!
MUST WATCH
ಹೊಸ ಸೇರ್ಪಡೆ
High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.