Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Team Udayavani, Nov 22, 2024, 9:28 AM IST
ಆಂಧ್ರಪ್ರದೇಶ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅದಕ್ಕೆ ನಿದರ್ಶನ ಎಂಬಂತೆ ಇತ್ತೀಚಿಗೆ ತನ್ನ ಸ್ನೇಹಿತನ ಮದುವೆ ಸಮಾರಂಭಕ್ಕೆ ತೆರಳಿದ್ದ ಗೆಳೆಯನೋರ್ವ ಮದುವೆ ಸಮಾರಂಭದ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನ ಅಮೆಜಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ವಂಶಿಕುಮಾರ್ ಮೃತ ದುರ್ದೈವಿ.
ಇತ್ತೀಚಿಗೆ ವಂಶಿ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೃಷ್ಣಗಿರಿ ಮಂಡಲದ ಪೆನುಮಾಡದಲ್ಲಿ ತನ್ನ ಸ್ನೇಹಿತನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಈ ವೇಳೆ ತನ್ನ ಸಹ ಸ್ನೇಹಿತರ ಜೊತೆ ವೇದಿಕೆಗೆ ತೆರಳಿ ನವ ದಂಪತಿಗಳಿಗೆ ಉಡುಗೊರೆ ನೀಡಿದ್ದಾರೆ, ನವದಂಪತಿಗಳು ಸಂಭ್ರಮದಿಂದ ಉಡುಗೊರೆಯ ಕವರ್ ತೆರೆಯುತ್ತಿದ್ದ ವೇಳೆ ವೇದಿಕೆ ಮೇಲಿದ್ದ ವಂಶಿಕುಮಾರ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ ಇದನ್ನು ಗಮನಿಸಿದ ಸ್ನೇಹಿತರು ತಕ್ಷಣ ಆತನನ್ನು ಹಿಡಿದಿದ್ದಾರೆ ಬಳಿಕ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ದುರಾದೃಷ್ಟವಶಾತ್ ತಪಾಸಣೆ ನಡೆಸಿದ ವೈದ್ಯರು ವಂಶಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
స్నేహితుడి వివాహా వేడుకలో గుండెపోటుతో యువకుడు మృతి
కర్నూల్ జిల్లా కృష్ణగిరి మండలం పెనుమడ గ్రామంలో స్నేహితుడి వివాహ వేడుకలో గిఫ్ట్ ఇస్తూ స్టేజ్ పైనే గుండెపోటుకు గురైన వంశీ అనే యువకుడు.
వంశీని డోన్ ప్రభుత్వ ఆసుపత్రికి తరలించిన తోటి స్నేహితులు.. కానీ అప్పటికే గుండెపోటుతో… pic.twitter.com/Ve1Epmf1fI
— Telugu Scribe (@TeluguScribe) November 21, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.