Viral Video: ಪ್ರವಾಹದಲ್ಲಿ ಸಿಲುಕಿದ್ದ ನಾಯಿ ಮರಿಗಳನ್ನು ರಕ್ಷಿಸಿದ ಆಂಧ್ರ ಪೊಲೀಸರು
ಸಹಾಯಕ್ಕಾಗಿ ಅಂಗಲಾಚಿದ ತಾಯಿ..
Team Udayavani, Jul 30, 2023, 5:26 PM IST
ವಿಜಯವಾಡ: ಭಾರೀ ಮಳೆಯಿಂದಾಗಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ತನ್ನ ಮರಿಗಳನ್ನು ರಕ್ಷಿಸುವಂತೆ ಸಹಾಯ ಕೋರಿ ಪೊಲೀಸರನ್ನು ಹಿಂಬಾಲಿಸಿದ ತಾಯಿ ನಾಯಿಯ ಅಸಹಾಯಕತೆಗೆ ಕರಗಿದ ಆಂಧ್ರಪ್ರದೇಶ ಪೊಲೀಸರು ಹೃದಯಸ್ಪರ್ಶಿ ರೀತಿಯಲ್ಲಿ ಮರಿಗಳನ್ನು ರಕ್ಷಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ.
ನಾಯಿಮರಿಗಳು ಪ್ರವಾಹದ ಮನೆಯಲ್ಲಿ ಸಿಲುಕಿಕೊಂಡಿದ್ದವು, ತಾಯಿ ನಾಯಿ ಹತಾಶವಾಗಿ ಸಹಾಯಕ್ಕಾಗಿ ಹುಡುಕುತ್ತಿತ್ತು. ವಿಜಯವಾಡ ನಗರ ಪೊಲೀಸ್ ಪಡೆಯ ಪೊಲೀಸರು ಜನರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾಗ ನಾಯಿಯೊಂದು ಅವರನ್ನು ನಿರಂತರವಾಗಿ ಹಿಂಬಾಲಿಸುತ್ತಿತ್ತು. ತಾಯಿಯು ಸಿಕ್ಕಿಬಿದ್ದ ನಾಯಿಮರಿಗಳ ಬಳಿಗೆ ಪೊಲೀಸರನ್ನು ಕರೆದೊಯ್ಯುತ್ತದೆ.
#APPolice rescued puppies stranded in flood water: In #NTR(D) due to massive floods loomed the puppies were trapped in a house. Cops realized the distress of mother #dog for her children. They immediately rescued them&safely brought them to their mother&showed humanity.(1/2) pic.twitter.com/UdA8KD99XD
— Andhra Pradesh Police (@APPOLICE100) July 30, 2023
ಪೊಲೀಸರಿಗೆ ಕಾರಣ ತಿಳಿಯುವ ಕುತೂಹಲವಿತ್ತು. ನೊಂದ ತಾಯಿ ನಾಯಿ ನೀರಿನಲ್ಲಿ ಮುಳುಗಿದ್ದ ಮನೆಯೊಂದರ ಬಳಿ ಕರೆದುಕೊಂಡು ಹೋಗಿತ್ತು. ಪೊಲೀಸರು ಮನೆಯಲ್ಲಿ ಅದರ ನಾಯಿಮರಿಗಳನ್ನು ಕಂಡುಕೊಂಡರು. ಕೂಡಲೇ ಪೊಲೀಸ್ ಸಿಬ್ಬಂದಿ ಎರಡೂ ನಾಯಿ ಮರಿಗಳನ್ನು ರಕ್ಷಿಸಿ ಶುದ್ಧ ನೀರಿನಿಂದ ತೊಳೆದು ತಾಯಿ ಬಳಿ ಬಿಟ್ಟರು. ಆಂಧ್ರಪ್ರದೇಶ ಪೊಲೀಸರು ಭಾನುವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.