Bengal panchayat polls : 21 ಕಿ.ಮೀ ಓಡಿಕೊಂಡು ಬಂದೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ
Team Udayavani, Jun 15, 2023, 9:15 AM IST
ಕೋಲ್ಕತ್ತಾ: ಚುನಾವಣೆ ಎಂದರೆ ಸಾಕು ಪ್ರಚಾರದ ಭರಾಟೆಯಲ್ಲಿ ಅಭ್ಯರ್ಥಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಾರೆ. ನಾಮಪತ್ರ ಸಲ್ಲಿಕೆಯಿಂದ ಹಿಡಿದು ಎಲೆಕ್ಷನ್ ಫಲಿತಾಂಶದ ದಿನದವರೆಗೂ ಅಭ್ಯರ್ಥಿಗಳು ಕೂತಲಿ ಕೂರುವುದಿಲ್ಲ ಎನ್ನುವ ಹಾಗೆ ನಾನಾ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ.
ಇಲ್ಲೊಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಹೋಗಿ ಸುದ್ದಿಯಾಗಿದ್ದಾರೆ. ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಡಾರ್ಜಿಲಿಂಗ್ ಹಿಲ್ಸ್ ನ ಶರಣ್ ಸುಬ್ಬ ಎನ್ನುವವರು ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕ್ರಮದಂತೆ ಚುನಾವಣೆಗೆ ಸ್ಪರ್ಧಿಸಲು ಅವರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರು ನಾಮಪತ್ರ ಸಲ್ಲಿಸಲು ಹೋದ ವಿಧಾನವೇ ಸುದ್ದಿಯಾಗಿದೆ.
ಉಳಿದ ಅಭ್ಯರ್ಥಿಗಳಂತೆ ಕಾರಿನಲ್ಲಿಅಪಾರ ಬೆಂಬಲಿಗರ ದಂಡಿನೊಂದಿಗೆ ಅವರು ನಾಮಪತ್ರ ಸಲ್ಲಿಸುವ ಕಚೇರಿಗೆ ಹೋಗಿಲ್ಲ ಬದಲಾಗಿ. 21 ಕಿ.ಮೀ ಓಡಿಕೊಂಡು ಹೋಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.!
ಹೌದು, ಬೆಳಗ್ಗೆ 4 ಗಂಟೆಗೆ ನಾಮಪತ್ರವನ್ನು ಹಿಡಿದುಕೊಂಡು ಸೋನಾಡದಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಸುಖಿಯಾಪೋಖ್ರಿ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿಗೆ ಓಡಿಕೊಂಡು ಹೋಗಿದ್ದಾರೆ. 4 ಗಂಟೆಯಲ್ಲಿ ತನ್ನ ಓಟವನ್ನು ಪೂರ್ಣಗೊಳಿಸಿ, ನಾಮಪತ್ರ ಸಲ್ಲಿಸುವ ಕಚೇರಿಗೆ ಬಂದಿದ್ದಾರೆ. ಆದರೆ ಅವರು ತಲುಪುವ ವೇಳೆಗೆ ಕಚೇರಿ ಇನ್ನೂ ತೆರೆದಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಕೂತು ಕಾದ ಬಳಿಕ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಈ ರೀತಿಯಾಗಿ ನಾಮಪತ್ರ ಸಲ್ಲಿಸಿದರ ಹಿಂದಿನ ಉದ್ದೇಶದ ಕುರಿತು ಮಾತನಾಡಿದ ಅವರು, ಮುಖ್ಯವಾಗಿ ಊರಿನ ಸಂಚಾರ ದಟ್ಟಣೆಯನ್ನು ಉಲ್ಲೇಖಿಸಿದರು. ಜನ ಕಡಿಮೆ ದೂರದ ಸಂಚಾರಕ್ಕೂ ವಾಹನವನ್ನು ಬಳಸುತ್ತಿದ್ದಾರೆ. ಹೆಚ್ಚಿನ ವಾಹನ ದಟ್ಟಣೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಸಂಚಾರ ದಟ್ಟಣೆ ಮತ್ತು ಪರಿಸರದ ಮೇಲಿನ ಪ್ರಭಾವ ಎರಡನ್ನೂ ಕಡಿಮೆ ಮಾಡಲು ಪರ್ಯಾಯ ಸಾರಿಗೆ ಸಾಧನವಾಗಿ ನಡೆದುಕೊಂಡು ಹೋಗುವ ವಿಧಾನ ಮುಖ್ಯ. ಅದನ್ನು ಮಾಡಿದರೆ ಪರಿಸರ ಹಾಗೂ ಆರೋಗ್ಯ ಎರಡಕ್ಕೂ ಉತ್ತಮ ಎಂದರು.
ಪಶ್ಚಿಮ ಬಂಗಾಳದಲ್ಲಿ ಜುಲೈ 8 ರಂದು ಒಂದೇ ಹಂತದಲ್ಲಿ ಪಂಚಾಯತ್ ಚುನಾವಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.