Viral: ಕೇರಳದಲ್ಲಿ ಧ್ವಜಾರೋಹಣಕ್ಕೆ ಸಹಾಯ ಮಾಡಿದ ಹಕ್ಕಿ… ಅಸಲಿಗೆ ನಡೆದಿದ್ದೇನು?
Team Udayavani, Aug 17, 2024, 1:30 PM IST
ತಿರುವನಂತಪುರಂ: ಸ್ವಾತಂತ್ರ್ಯ ದಿನದಂದು ಕೇರಳದ ಶಾಲೆಯೊಂದರಲ್ಲಿ ವಿಸ್ಮಯವೊಂದು ನಡೆದಿದೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಇದೀಗ ಇದರ ಅಸಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಮೊದಲು ವೈರಲ್ ಆಗಿದ್ದ ವಿಡಿಯೋದಲ್ಲಿ ಹಕ್ಕಿಯೊಂದು ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರ ಧ್ವಜವನ್ನು ತಪ್ಪಿಸಿ ಬಳಿಕ ಅಲ್ಲಿಂದ ಹರಿ ಹೋಗುವ ವಿಡಿಯೋ ವೈರಲ್ ಆಗಿತ್ತು ಇದಾದ ಬಳಿಕ ಇದರ ನಿಜ ವಿಡಿಯೋ ಇದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದರೆ ಮೊದಲಿನ ವಿಡಿಯೋ ಮತ್ತು ಈಗಿನ ವಿಡಿಯೋ ಎರಡು ಒಂದೇ ಆಗಿದ್ದು ವಿಡಿಯೋ ಸೆರೆ ಹಿಡಿದ ಸ್ಥಳ ಮಾತ್ರ ಕೊಂಚ ಆಚೆ ಈಚೆ ಆಗಿರುವ ಕಾರಣ ಹಕ್ಕಿಯೇ ಬಂದು ರಾಷ್ಟ್ರ ಧ್ವಜವನ್ನು ಸರಿಪಡಿಸಿದ ರೀತಿಯಲ್ಲಿ ಕಂಡುಬಂದಿತ್ತು ಆದರೆ ಇದೀಗ ಇದರ ಹೊಸ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಧ್ವಜಾರೋಹಣ ನಡೆಯುವ ವೇಳೆ ರಾಷ್ಟ್ರಧ್ವಜ ತೆರೆಯಲು ಸ್ವಲ್ಪ ಹೊತ್ತು ತೆಗೆದುಕೊಂಡಿದೆ ಈ ನಡುವೆ ಹಕ್ಕಿಯೊಂದು ಹಾರಿ ಬಂದು ಅಲ್ಲೇ ಇರುವ ತೆಂಗಿನ ಮರದ ಮೇಲೆ ಕೂರುತ್ತದೆ ಅದೇ ಹೊತ್ತಿಗೆ ರಾಷ್ಟ್ರಧ್ವಜ ಓಪನ್ ಆಗಿ ಅದರೊಳಗಿದ್ದ ಹೂಗಳು ಹೊರಬೀಳುತ್ತಿದ್ದಂತೆ ಮರದಲ್ಲಿರುವ ಹಕ್ಕಿ ಹಾರಿ ಹೋಗುತ್ತೆ ಇದು ಇನ್ನೋರ್ವರು ತೆಗೆದ ವಿಡಿಯೋದಲ್ಲಿ ಸೆರೆಯಾಗಿದೆ ಹಾಗಾಗಿ ಮೊದಲು ವೈರಲ್ ಆಗಿದ್ದ ವಿಡಿಯೋ ನೋಡಿ ಹಕ್ಕಿಯೇ ರಾಷ್ಟ್ರಧ್ವಜವನ್ನು ಬಿಡಿಸಿ ಹಾರಿ ಹೋಗಿದೆ ಎನ್ನಲಾಗಿತ್ತು ಆದರೆ ಇದು ಸುಳ್ಳು ಅಸಲಿಗೆ ಹಕ್ಕಿ ದೂರದಲ್ಲಿ ಕುಳಿತ್ತಿತ್ತು ಎನ್ನುವುದು ಸತ್ಯ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎರಡೂ ವಿಡಿಯೋ ಹರಿದಾಡುತ್ತಿದ್ದು ಜನರೇ ಗೊಂದಲವಾಗುವಂತಾಗಿದೆ.
Kerala – National Flag got stuck at the top while hoisting. A bird came from nowhere and unfurled it!! ✨ pic.twitter.com/lRFR2TeShK
— Shilpa (@shilpa_cn) August 16, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.