ಲೋಕಾಯುಕ್ತ ಪೊಲೀಸರು ದಾಳಿ ಮಾಡುತ್ತಿದ್ದಂತೆ ಲಂಚದ ಹಣವನ್ನೇ ನುಂಗಿದ ಕಂದಾಯ ಅಧಿಕಾರಿ!
Team Udayavani, Jul 25, 2023, 10:26 AM IST
ಜಬಲ್ಪುರ: ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿಯುವ ವೇಳೆ ಕಂದಾಯ ಅಧಿಕಾರಿಯೊಬ್ಬ ಲಂಚದ ಹಣವನ್ನೇ ನುಂಗಿ ನೀರು ಕುಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಕಟ್ನಿಯಲ್ಲಿ ಕಂದಾಯ ಅಧಿಕಾರಿಯಾಗಿರುವ ಪಟ್ವಾರಿ ಗಜೇಂದ್ರ ಸಿಂಗ್ ವ್ಯಕ್ತಿಯೊಬ್ಬರ ಜಮೀನು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ವ್ಯಕ್ತಿಯಿಂದ 5000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಈ ವಿಚಾರವಾಗಿ ವ್ಯಕ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ ಅದರಂತೆ ಸೋಮವಾರ ಕಂದಾಯ ಅಧಿಕಾರಿ ಗಜೇಂದ್ರ ಸಿಂಗ್ ಅವರ ಕಚೇರಿಗೆ ವ್ಯಕ್ತಿ ತೆರಳಿದ್ದಾನೆ ಈ ವೇಳೆ ಅಧಿಕಾರಿಗೆ ಲಂಚದ ಹಣವನ್ನು ಕೈಗೆ ನೀಡಿದ್ದಾನೆ ದುಡ್ಡು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಇದನ್ನು ಕಂಡ ಕಂದಾಯ ಅಧಿಕಾರಿ ಇನ್ನೇನು ತಾನು ಸಿಕ್ಕಿ ಬೀಳುತ್ತೇನೆ ಎನ್ನುವಷ್ಟರಲ್ಲಿ ಕೂಡಲೇ ತನ್ನ ಕೈಯಲ್ಲಿದ್ದ 500 ರೂಗಳ ಹತ್ತು ನೋಟುಗಳನ್ನು ಮುದ್ದೆ ಮಾಡಿ ಬಾಯಿಯೊಳಗೆ ಹಾಕಿ ನೀರು ಕುಡಿದು ಬಿಟ್ಟಿದ್ದಾನೆ.
ಕೂಡಲೇ ಲೋಕಾಯುಕ್ತ ಪೊಲೀಸರ ತಂಡ ಹಣ ನುಂಗಿದ ಅಧಿಕಾರಿಯನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿ ಬಳಿಕ ನುಂಗಿದ ಹಣವನ್ನು ಹೊರತೆಗೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಂದಾಯ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಕಂದಾಯ ಅಧಿಕಾರಿ ಹಣ ನುಂಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಯುವತಿ ವಿವಾಹ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ
A patwari in Katni, allegedly swallowed money he had accepted as a bribe after noticing a team of the Lokayukta’s Special Police Establishment pic.twitter.com/AgsOyDsnGM
— Anurag Dwary (@Anurag_Dwary) July 24, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼRamayanaʼ ಪಾತ್ರದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿಯ ಹೊಟ್ಟೆ ಬಗೆದು ಮಾಂಸ ಸೇವಿಸಿದ ಕಲಾವಿದ
Varanasi: ಕಾಲ ಭೈರವ ದೇವಾಲಯದ ಗರ್ಭಗುಡಿಯಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಮಹಿಳೆ
Video: ಫೆಂಗಲ್ ಚಂಡಮಾರುತದ ನಡುವೆ ಲ್ಯಾಂಡ್ ಆಗಲು ಬಂದ ವಿಮಾನ… ಭಯಾನಕ ವಿಡಿಯೋ ವೈರಲ್
Gold; ಜಗತ್ತಿನ ಅತಿದೊಡ್ಡ ಚಿನ್ನ ನಿಕ್ಷೇಪ ಚೀನದಲ್ಲಿ ಪತ್ತೆ!
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.