![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 24, 2023, 12:12 PM IST
ದೆಹಲಿ: ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಏನಾದರೂ ಆರ್ಡರ್ ಮಾಡಿದರೆ ಆ ಪ್ರಾಡೆಕ್ಟ್ ಡೆಲಿವರಿ ಆಗಲು ಹೆಚ್ಚೆಂದರೆ 4-5 ದಿನಗಳಾಗುತ್ತವೆ. ಅದಕ್ಕಿಂತ ತಡವಾಗುವುದು ಅಪರೂಪ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಆರ್ಡರ್ ಮಾಡಿದ ಪ್ರಾಡೆಕ್ಟ್ 4 ವರ್ಷಗಳ ಬಳಿಕ ಡೆಲಿವರಿ ಆಗಿದೆ.!
ಆನ್‌ಲೈನ್ ಮಾರುಕಟ್ಟೆಯಲ್ಲಿ ಅಗ್ಗದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಅಲಿ ಎಕ್ಸ್‌ಪ್ರೆಸ್ ಸದ್ಯ ಭಾರತದಲ್ಲಿ ಬ್ಯಾನ್ ಆಗಿದೆ. ಚೀನಾ ಮೂಲದ ಈ ಕಂಪೆನಿಯನ್ನು 2020 ರಲ್ಲಿ ಭಾರತ ಸರ್ಕಾರ 58 ಇತರ ಆ್ಯಪ್ ಗಳೊಂದಿಗೆ ಬ್ಯಾನ್ ಮಾಡಿದೆ. ಆದರೆ ಬ್ಯಾನ್ ಆಗುವುದುಕ್ಕಿಂತ ಮೊದಲೇ ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಈ ಸೈಟ್ ನಲ್ಲಿ ಪ್ರಾಡೆಕ್ಟ್ ವೊಂದನ್ನು ಆರ್ಡರ್ ಮಾಡಿದ್ದಾರೆ. ಅದು 2023 ಅಂದರೆ ನಾಲ್ಕು ವರ್ಷದ ಬಳಿಕ ಡೆಲಿವರಿ ಆಗಿದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಳಿನ್ ಕುಮಾರ್ ಕಟೀಲ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿತಿನ್ ಅಗರ್ವಾಲ್ ಅವರು ಬರೆದುಕೊಂಡಿದ್ದಾರೆ. “ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ ಎಂದು ಪೋಸ್ಟ್ ಹಾಕಿರುವ ಅವರು “ಆಲಿಬಾಬಾ ಒಡೆತನದ ಅಲಿ ಎಕ್ಸ್‌ಪ್ರೆಸ್ ನಲ್ಲಿ (ಈಗ ಭಾರತದಲ್ಲಿ ಬ್ಯಾನ್ ಆಗಿದೆ) ನಾನು 2019 ರಲ್ಲಿ ಆರ್ಡರ್ ಮಾಡಿದ್ದ ಪ್ರಾಡಕ್ಟ್ ಅಂತೂ ನನ್ನ ಕೈ ಸೇರಿದೆ” ಎಂದು ಬರೆದುಕೊಂಡಿದ್ದಾರೆ.
ಪ್ರಾಡಕ್ಟ್ ಡೆಲಿವರಿ ಆಗಲು ತಡವಾದ ಕಾರಣ ಯಾವ ಪ್ರಾಡಕ್ಟ್ ಎನ್ನುವುದನ್ನು ಅವರು ಹೇಳಿಲ್ಲ.
ನಿತಿನ್ ಅಗರ್ವಾಲ್ ಅವರ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ನಾನು 2019 ಡಿಸೆಂಬರ್‌ನಲ್ಲಿ 2 ಉತ್ಪನ್ನಗಳನ್ನು ಆರ್ಡರ್ ಮಾಡಿದ್ದೇನೆ. ಹಾಗಾಗಿ ಇದು ಒಂದು ದಿನ ಡೆಲಿವರಿಯಾಗಬಹುದೆಂದು ನಾನು ಭಾವಿಸುತ್ತೇನೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಇದು ಹೇಗೆ ಸಾಧ್ಯ? ನಾನು 2017-19 ರ ಸುಮಾರಿಗೆ ನಾನು ಆರ್ಡರ್ ಮಾಡಿದ ಪ್ರಾಡೆಕ್ಟ್ ಗಳು ಬಂದಿಲ್ಲ. ಅದಕ್ಕಾಗಿ ನಾನು ಈಗಾಗಲೇ ಪಾವತಿಸಿದ್ದೇನೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಭಾರತದಲ್ಲಿ ಅಲಿ ಎಕ್ಸ್‌ಪ್ರೆಸ್ ಬ್ಯಾನ್ ಆದರೂ ಥರ್ಡ್ ಪಾರ್ಟಿ ಆ್ಯಪ್ ಹಾಗೂ ವಿಪಿಎನ್ ಮೂಲಕ ಕೆಲವರು ಇದನ್ನು ಬಳಸುತ್ತಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.