Viral Video: ಆಸ್ಪತ್ರೆ ಆವರಣದಲ್ಲಿ ಬೆತ್ತಲಾಗಿ ಸುತ್ತಾಡಿದ ಸರಕಾರಿ ಆಸ್ಪತ್ರೆ ವೈದ್ಯ…
Team Udayavani, Mar 13, 2024, 12:49 PM IST
ನಾಸಿಕ್: ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಆಸ್ಪತ್ರೆಯ ಆವರಣದಲ್ಲಿ ಬೆತ್ತಲಾಗಿ ಸುತ್ತಾಡುತ್ತಿರುವ ದೃಶ್ಯವೊಂದು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸೆರೆಯಾಗಿದ್ದು ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘಟನೆಗೆ ಸಂಬಂಧಿಸಿ ವೈದ್ಯರನ್ನು ಪರಿಶೀಲಿಸಿದಾಗ ಸರಕಾರಿ ಆಸ್ಪತ್ರೆಯ ವೈದ್ಯರು ಮದ್ಯದ ಅಮಲಿನಲ್ಲಿರುವುದು ಬೆಳಕಿಗೆ ಬಂದಿದೆ. ಸಾಂಬಾಜಿನಗರದಲ್ಲಿರುವ ಬಿಡ್ಕಿನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಈ ರೀತಿಯಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಆರೋಗ್ಯ ಸೇವೆಗಳ ಮುಖ್ಯಸ್ಥ ಡಾ. ದಯಾನಂದ ಮೋತಿಪಾವ್ಲೆ, ವೈದ್ಯರು ಬೆತ್ತಲಾಗಿ ಆಸ್ಪತ್ರೆಯ ಆವರಣದಲ್ಲಿ ಸುತ್ತಾಡುವ ವಿಚಾರಕ್ಕೆ ಸಂಬಂಧಿಸಿ ವೈದ್ಯರನ್ನು ತನಿಖೆ ನಡೆಸಲಾಗುತ್ತಿದ್ದು, ಅಲ್ಲದೆ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ.
सीसीटीवी में कैद : महाराष्ट्र के अस्पताल में नग्न घूम रहा ‘नशेड़ी’ डॉक्टर! #maharastra #dr #hospital pic.twitter.com/iLZIpZNZzO
— Newsbpbharat (@newsbpbharat) March 10, 2024
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.