Video: ದೇವಸ್ಥಾನದ ಉತ್ಸವದ ವೇಳೆ ದೇವರನ್ನು ಹೊತ್ತ ಆನೆಯ ರಂಪಾಟ… ಹಲವು ಮಂದಿಗೆ ಗಾಯ
Team Udayavani, Mar 24, 2024, 8:58 AM IST
ತಿರುವನಂತಪುರಂ: ದೇವಸ್ಥಾನದ ಉತ್ಸವದ ಮೆರವಣಿಗೆ ನಡೆಯುತ್ತಿರುವ ವೇಳೆ ದೇವರನ್ನು ಹೊತ್ತ ಆನೆಯೊಂದು ಯೂಚಿಗೆದ್ದು ಜೊತೆಗಿದ್ದ ಇನ್ನೊಂದು ಆನೆಯ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರ ತ್ರಿಶೂರ್‌ನ ತರಕ್ಕಲ್ ದೇವಸ್ಥಾನದ ಉತ್ಸವದ ನಡೆಯುತ್ತಿದ್ದ ವೇಳೆ, ‘ಅಮ್ಮತಿರುವಾಡಿ’ ದೇವರ ಮೆರವಣಿಗೆಯಲ್ಲಿ ಗುರುವಾಯೂರ್ ರವಿಕೃಷ್ಣನ್ ಎಂಬ ಆನೆ ಇನ್ನೊಂದು ಆನೆ ಪುತ್ತುಪ್ಪಲ್ಲಿ ಅರ್ಜುನನ್ ನಡುವೆ ಕಾದಾಟ ನಡೆದಿದೆ. ಈ ವೇಳೆ ಆನೆಯ ಮಾವುತ ಶ್ರೀಕುಮಾರ್ (53) ಮೂರು ಬಾರಿ ದಾಳಿಯಿಂದ ಪಾರಾಗಿದ್ದರೂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಕೂರ್ಕೆಂಚೇರಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು ಎಂದು ಹೇಳಲಾಗಿದೆ. ಅಷ್ಟುಮಾತ್ರವಲ್ಲದೆ. ಮೆರವಣಿಗೆ ಮೊದಲು ನೆರೆದಿದ್ದ ಜನರು ಭಯದಿಂದ ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಕಾದಾಟ ನಡೆಸುತ್ತಿದ್ದ ಆನೆಗಳನ್ನು ಶಾಂತಗೊಳಿಸಲು ಸುಮಾರು ಒಂದುಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.
ಸುರಕ್ಷತಾ ಕ್ರಮ:
ಆನೆಗಳ ದಾಳಿಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದೇವಳದ ಉತ್ಸವ ಕಾರ್ಯಕ್ರಮ ನಡೆಸುವ ವೇಳೆ ಆನೆಗಳನ್ನು ಬಳಸುವುದಾದರೆ ಹೆಚ್ಚಿನ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ, ಅಲ್ಲದೆ ಭಕ್ತರ ಹಿತದೃಷ್ಟಿಯಿಂದ ಮುಂಜಾಗ್ರತಾ ವಹಿಸುವುದು ಸೂಕ್ತ ಎಂದು ಆಡಳಿತ ಮಂಡಳಿ ನಿರ್ಧಾರಕ್ಕೆ ಬಂದಿದೆ.
A captive #elephant runs amok during the Arattupuzha pooram in #Kerala‘s Thrissur. The elephant attacked an elephant and also injured several humans.
It is peak summer and also peak of temple festivals in Kerala. pic.twitter.com/QHvDLTPgOP— Bobins Abraham Vayalil (@BobinsAbraham) March 23, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.