Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್ ವಿಶ್ವ ದಾಖಲೆ ಬರೆದ ಯುವಕ
Team Udayavani, May 8, 2024, 4:56 PM IST
ನವದೆಹಲಿ: ʼಅಪ್ಪಿಕೋ ಚಳವಳಿʼ ಬಗ್ಗೆ ನೀವು ಕೇಳಿರಬಹುದು. ವರ್ಷಾನುಗಟ್ಟಲೇ ನಡೆದ ಈ ಚಳವಳಿಯಲ್ಲಿ ಸಾವಿರಾರು ಮರಗಳು ಕೊಡಲಿ ಏಟಿನಿಂದ ಬಚಾವ್ ಆಗಿವೆ. ಇಲ್ಲೊಬ್ಬ ಯುವಕ ಮರಗಳನ್ನು ತಬ್ಬಿಕೊಂಡು ವಿಶ್ವ ದಾಖಲೆ ಬರೆದು ಸುದ್ದಿಯಾಗಿದ್ದಾನೆ.
ಘಾನಾ ದೇಶದ 29 ವರ್ಷದ ಫಾರೆಸ್ಟ್ರಿ ಕಲಿಕೆಯ (forestry student) ವಿದ್ಯಾರ್ಥಿ ಅಬೂಬಕರ್ ತಾಹಿರು ಒಂದು ಗಂಟೆಯೊಳಗೆ 1,123 ಮರಗಳನ್ನು ತಬ್ಬಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಸುದ್ದಿಯಾಗಿದ್ದಾರೆ.
ಇವರ ದಾಖಲೆಯ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದೆ.
ಅಮೆರಿಕದ ಅಲಬಾಮಾದಲ್ಲಿರುವ ಟುಸ್ಕೆಗೀ ನ್ಯಾಷನಲ್ ಫಾರೆಸ್ಟ್‌ನಲ್ಲಿ ಈ ದಾಖಲೆಯನ್ನು ಮಾಡಲಾಗಿದೆ. ಅಬುಬಕರ್ ಪ್ರತಿ ನಿಮಿಷಕ್ಕೆ ಸುಮಾರು 19 ಮರಗಳನ್ನು ಅಪ್ಪಿಕೊಂಡಿದ್ದಾರೆ. ಪ್ರತಿ ಅಪ್ಪುಗೆಯು ಕಟ್ಟುನಿಟ್ಟಾದ ಮಾನದಂಡಗಳನ್ನು ಒಳಗೊಂಡಿತ್ತು. ಎರಡೂ ತೋಳುಗಳು ಮರದ ಸುತ್ತಲೂ ಸುತ್ತುವರಿದಿರಬೇಕಿತ್ತು. ಯಾವುದೇ ಮರವನ್ನು ಒಂದಕ್ಕಿಂತ ಹೆಚ್ಚು ಬಾರಿ ತಬ್ಬಿಕೊಳ್ಳುವಂತಿರಲಿಲ್ಲ. ಯಾವುದೇ ರೀತಿಯಲ್ಲಿ ಮರಕ್ಕೆ ಹಾನಿಯಾಗುವಂತಿರಲಿಲ್ಲ.
“ಈ ವಿಶ್ವ ದಾಖಲೆಯನ್ನು ಸಾಧಿಸಿರುವುದಕ್ಕೆ ತುಂಬಾ ಖುಷಿಯಾಗಿದೆ. ಇದು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಮರಗಳ ಪ್ರಾಮುಖ್ಯತೆ ಮತ್ತು ಪರಿಸರ ಸಂರಕ್ಷಣೆಯ ಅಗತ್ಯತೆ ಯನ್ನು ಎತ್ತಿ ತೋರಿಸಲು ಒಂದು ಅರ್ಥಪೂರ್ಣವಾದ ಸೂಚಕವಾಗಿದೆ” ಎಂದು ತಾಹಿರು ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವಿಡಿಯೋ ವೈರಲ್ ಆಗಿದೆ. ಅಬೂಬಕರ್ ಅವರ ಸಾಧನೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ಶ್ಲಾಘಿಸಿದ್ದಾರೆ.
ಘಾನಾದ ತೆಪಾದಲ್ಲಿನ ರೈತ ಸಮುದಾಯದಿಂದ ಬಂದ ಅಬೂಬಕರ್‌ಗೆ ಪ್ರಕೃತಿ ಸಂರಕ್ಷಣೆಯ ಆಸಕ್ತಿ ಚಿಕ್ಕ ವಯಸ್ಸಿನಿಂದಲೇ ಬಂದಿದೆ. ಘಾನಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಅರಣ್ಯಶಾಸ್ತ್ರದಲ್ಲಿ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಆಬರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಕಳೆದ ವರ್ಷ ಅಲಬಾಮಾಗೆ ತೆರಳಿದ್ದರು.
ಈ ವಿಶ್ವ ದಾಖಲೆಯನ್ನು ಮಾಡಿದ ಬಳಿಕ, ಅಬುಬಕರ್ ತಾಹಿರು ಪರಿಸರ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ಅರಣ್ಯ ರಕ್ಷಣೆಯಲ್ಲಿ ತನ್ನನು ತಾನು ತೊಡಗಿಸಿಕೊಳ್ಳಲಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.