ಮದುವೆ ಮುನ್ನ ವರನಿಗೆ ಡೆಂಗ್ಯೂ: ಆಸ್ಪತ್ರೆಯನ್ನೇ ಮಂಟಪವಾಗಿಸಿ ವಿವಾಹ ಮಾಡಿಸಿದ ಕುಟುಂಬಸ್ಥರು
Team Udayavani, Nov 30, 2023, 1:40 PM IST
ಲಕ್ನೋ: ಪ್ರತಿಯೊಬ್ಬರಿಗೂ ತನ್ನ ಮದುವೆಯ ಬಗ್ಗೆ ಕನಸಿರುತ್ತದೆ. ಅದ್ಧೂರಿಯಾಗಿ ಮದುವೆ ಅಲ್ಲದಿದ್ರು ಸರಳವಾಗಿ ಸಂಭ್ರಮದಲ್ಲಿ ಮದುವೆ ಆಗಬೇಕೆನ್ನುವ ಕನಸಿರುತ್ತದೆ. ಸಾಮಾನ್ಯವಾಗಿ ಮದುವೆ ಸಮಾರಂಭ ಹಾಲ್ ಅಥವಾ ಮನೆಗಳಲ್ಲಿ ಶಾಮಿಯಾನ, ಅಲಂಕಾರದಿಂದ ಶೃಂಗಾರಗೊಂಡ ಮಂಟಪದಲ್ಲಿ ಜರಗುತ್ತದೆ. ಆದರೆ ಇಲ್ಲೊಂದು ಮದುವೆ ಆಸ್ಪತ್ರೆಯಲ್ಲೇ ನಡೆದಿದೆ.!
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಜೋಡಿಯೊಂದರ ವಿವಾಹ ಅಂದುಕೊಂಡ ದಿನಕ್ಕೆ ನಡೆಯಬೇಕಿತ್ತು. ಆದರೆ ಇನ್ನೇನು ಮದುವೆ ವಿವಾಹ ಮುಹೂರ್ತದಲ್ಲಿ ತಾಳಿ ಕಟ್ಟಲು ದಿನಗಣನೆ ಇರುವಾಗ ವರನಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಈ ಕಾರಣದಿಂದ ವರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಆಗ ಅವರಿಗೆ ಡೆಂಗ್ಯೂ ಇರುವುದು ಗೊತ್ತಾಗಿದೆ. ಇದರಿಂದ ವರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನ.27 ರಂದು ವಿವಾಹ ನಡೆಯಬೇಕಿತ್ತು. ಆದರೆ ವರ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಧು – ವರನ ಕುಟುಂಬಸ್ಥರು ನಿಗದಿಪಡಿಸಿದ ದಿನವೇ ವಿವಾಹ ಮಾಡಿಸುವ ಸಲುವಾಗಿ. ಅಸ್ಪತ್ರೆಯನ್ನೇ ಮದುವೆ ಮಂಟಪವನ್ನಾಗಿ ಮಾಡಲು ಹೊರಟಿದ್ದಾರೆ. ಆಸ್ಪತ್ರೆಗೆ ದಾಖಲಾದ ಎರಡು ದಿನದ ಬಳಿಕ ಎರಡೂ ಮನೆಯವರು ಆಸ್ಪತ್ರೆಯಲ್ಲಿ ಮಾತನಾಡಿಕೊಂಡು ವರ ದಾಖಲಾಗಿರುವ ಕೋಣೆಯನ್ನು ಮದುವೆ ಮಂಟಪದಂತೆ ಶೃಂಗರಿಸಿ, ವಧುವನ್ನು ಕರೆತಂದು ಕುಟುಂಬದವರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ನಿಗದಿಪಡಿಸಿದ ಮಹೂರ್ತದಲ್ಲೇ ವಿವಾಹ ಮಾಡಿಸಿದ್ದಾರೆ.
ಗಾಜಿಯಾಬಾದ್‌ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ವಿಶೇಷ ವಿವಾಹ ನೆರವೇರಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋ ವೈರಲ್ ಆಗಿದೆ.
A couple got married at Max hospital in Vaishali, Ghaziabad. The groom was suffering from dengue and was admitted to the hospital on November 25 with his wedding due on Nov 27. The wedding took place as scheduled, but in the hospital. pic.twitter.com/8yEruMHyxB
— Piyush Rai (@Benarasiyaa) November 30, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.