Video: ಕಾಡಾನೆ ಜೊತೆ ಯುವಕರ ಹುಚ್ಚಾಟ… ಭಯ ಹುಟ್ಟಿಸುವ ವಿಡಿಯೋ ವೈರಲ್
Team Udayavani, Dec 8, 2023, 12:48 PM IST
ದೇಶಾದ್ಯಂತ ಕಾಡಾನೆ ಹಾವಳಿ ಮಿತಿ ಮೀರಿದೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಆನೆಗಳು ಸಿಕ್ಕ ಸಿಕ್ಕ ತೋಟಗಳಿಗೆ ನುಗ್ಗಿ ದಾಂದಲೆ ನಡೆಸುತ್ತವೆ ಅದೇ ರೀತಿ ಎದುರಿಗೆ ಯಾರಾದರು ಸಿಕ್ಕರೆ ಅವರ ಜೇವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಅದೇ ರೀತಿ ಇಲ್ಲೊಂದು ಯುವಕರ ಗುಂಪು ಕಾಡಾನೆಯ ಎದುರು ಹುಚ್ಚಾಟ ಮೆರೆದಿದ್ದಾರೆ ಅಲ್ಲದೆ ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆಯನ್ನು ಓಡಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಆದರೆ ಕಾಡಾನೆ ಮದವೇರಿ ಯುವಕರ ಮೇಲೆ ಎರಗಲು ಮುಂದಾಗುತ್ತದೆ ಆದರೆ ಅಷ್ಟರಲ್ಲಿ ಯುವಕರು ಅಲ್ಲೇ ಇರುವ ಕಂದಕಕ್ಕೆ ಹಾರುತ್ತಾರೆ, ಆದರೆ ಆನೆ ಕಂದಕದ ಬದಿಗೆ ಬಂದು ಗರ್ಜಿಸಿ ಹಿಂತಿರುಗುತ್ತದೆ ಆದರೆ ಈ ಪುಂಡ ಯುವಕರು ಮತ್ತೆ ಆನೆಯನ್ನು ಓಡಿಸಲು ಮುಂದಾಗುತ್ತಾರೆ ಈ ವೇಳೆ ಆನೆ ಮತ್ತೆ ಈ ಯುವಕರ ಮೇಲೆರಗಲು ಮುಂದಾಗುತ್ತದೆ ಆಗ ಯುವಕರು ಮತ್ತೆ ಓಡಿ ಬಂದು ಕಂದಕಕ್ಕೆ ಇಳಿದು ಜೀವ ಉಳಿಸಿಕೊಳ್ಳುತ್ತಾರೆ. ಒಂದು ವೇಳೆ ಸಿಟ್ಟಿಗೆದ್ದ ಆನೆ ಕಂದಕಕ್ಕೆ ಇಳಿದಿದ್ದರೆ ಕೆಲ ಜೀವಗಳೇ ಹೋಗುತಿತ್ತು ನಿಜಕ್ಕೂ ಈ ವಿಡಿಯೋ ನೋಡುವಾಗ ಒಮ್ಮೆ ಜೀವ ನಡುಗುತ್ತದೆ.
ಸದ್ಯ ಅರಣ್ಯ ಅಧಿಕಾರಿಯೊಬ್ಬರು ಟ್ವಿಟರ್ ‘X’ ನಲ್ಲಿ ವಿಡಿಯೋ ಹಂಚಿಕೊಂಡಿದ್ದು ಇಲ್ಲಿ ನಿಜವಾಗಿಯೂ ಪ್ರಾಣಿ ಯಾರು ಎಂಬ ಶರ್ಶಿಕೆಯಡಿ ವಿಡಿಯೋ ಹಂಚಿಕೊಂಡಿದ್ದು ಯುವಕರ ಹುಚ್ಚಾಟ ನಿಜಕ್ಕೂ ಅಪಾಯದ ಮಟ್ಟಕ್ಕೆ ಹೋಗಿತ್ತು ಎಂಬುದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಕೆಲವರು ಆನೆಯೊಂದಿಗೆ ಯುವಕರು ನಡೆಸಿದ ಹುಚ್ಚಾಟಕ್ಕೆ ಕಿಡಿಕಾರಿದ್ದಾರೆ, ಅಲ್ಲದೆ ಅವರನ್ನು ಬಂಧಿಸಿ ಎಂದು ಕಾಮೆಂಟ್ ಮಾಡಿದ್ದಾರೆ, ಇನ್ನೂ ಕೆಲವರು ಯುವಕರು ಮಾಡಿದ ಕೆಲಸದ ಹಿಂದೆ ಅವರು ಬೆಳೆದ ಬೆಳಗಳನ್ನು ರಕ್ಷಣೆ ಮಾಡುವ ಉದ್ದೇಶವೂ ಇರಬಹುದು ಎಂದು ಬರೆದುಕೊಂಡಿದ್ದಾರೆ.
ಯಾವುದು ಸರಿ ಯಾವುದು ತಪ್ಪು ಎಂಬುದು ತೀರ್ಮಾನಕ್ಕೆ ಬರುವುದು ಕಷ್ಟ ಆದರೆ ವಿಡಿಯೋ ನೋಡಿದಾಗ ಯುವಕರು ಆನೆಯ ಜೊತೆ ಸ್ವಲ್ಪ ಯಾಮಾರಿದರೂ ಜೇವಕ್ಕೆ ಅಪಾಯ ಇರುವುದಂತೂ ಸತ್ಯ.
Identify the real animal here. Then these giants charge & we call them killers. Dont ever do this, it’s life threatening. Video is from Assam. pic.twitter.com/e1yltV4RQP
— Parveen Kaswan, IFS (@ParveenKaswan) December 7, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.