Watch: ಇನ್ಮುಂದೆ ಮೊಬೈಲ್ ಹಿಂದೆ ನೋಟುಗಳನ್ನು ಇಡುವ ಮುನ್ನ ಎಚ್ಚರ.. ಯಾಕೆಂದರೆ
ಪ್ರಾಣಕ್ಕೆ ಕುತ್ತು ತರಬಹುದು ಈ ಅಭ್ಯಾಸ
Team Udayavani, Oct 5, 2023, 12:12 PM IST
ನವದೆಹಲಿ: ನಮ್ಮ ದಿನನಿತ್ಯದ ಜೀವನದಲ್ಲಿ ಮೊಬೈಲ್ ಫೋನ್ ಬಳಕೆ ಅನಿವಾರ್ಯವಾಗಿದೆ. ನಾವು ದಿನಕ್ಕೆ ಗಂಟೆಗಟ್ಟಲೇ ಮೊಬೈಲ್ ಬಳಸುತ್ತೇವೆ. ಇದರಿಂದ ಎಷ್ಟೋ ಬಾರಿ ಸಮಯ ಹೋದದ್ದೇ ಗೊತ್ತಾಗುವುದಿಲ್ಲ.
ನಮ್ಮಲ್ಲಿ ಬಹುತೇಕರಿಗೆ ಮೊಬೈಲ್ ಕವರ್ ನಲ್ಲಿ ಅಂದರೆ ಮೊಬೈಲ್ ಹಿಂದೆ ನೋಟುಗಳನ್ನು ಇಡುವ ಅಭ್ಯಾಸವಿದೆ. ತೀರ ಅಗತ್ಯಕ್ಕೆ ಬೇಕಾದಾಗ ಆ ಹಣವನನ್ನು ಬಳಸುತ್ತೇವೆ. ಆದರೆ ಈ ಅಗತ್ಯಕ್ಕಿರುವ ಮೊಬೈಲ್ ಕವರ್ ಹಿಂದಿನ ನೋಟಿನಿಂದ ಪ್ರಾಣಕ್ಕೆ ಅಪಾಯ ಕೂಡ ಇದೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ? ಹೌದು ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋ ಈ ಯೋಚನೆ ಬರುವಂತೆ ಮಾಡಿದೆ.
ನಮ್ಮಲ್ಲಿ ಎಷ್ಟೇ ದುಬಾರಿ ಫೋನ್ ಬೇಕಾದರೂ ಇರಲಿ, ಕೆಲವೊಮ್ಮೆ ಅತಿಯಾದ ಬಳಕೆಯಿಂದ ನಮ್ಮ ಫೋನಿನ ತಾಪಮಾನ ಅಂದರೆ ಮೊಬೈಲ್ ಹೀಟ್ ಆಗುತ್ತದೆ. ಮೊಬೈಲ್ ಅತಿಯಾಗಿ ಹೀಟ್ ಆದರೆ ಅದು ಸ್ಫೋಟಿಸುವ ಸಾಧ್ಯತೆ ಕೂಡ ಇರುತ್ತದೆ.
ಇನ್ಸ್ಟಾಗ್ರಾಮ್ ನಲ್ಲಿ ಅನಾಮಿಕ ವರ್ಸಟೈಲ್ (Anamika versatile) ಎನ್ನುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮೊಬೈಲ್ ಬ್ಯಾಕ್ ಸೈಡ್ ನಲ್ಲಿ ನೋಟು ಇಡುವುದರಿಂದ ಉಂಟಾಗುವ ಅಪಾಯದ ಬಗ್ಗೆ ಹೇಳಿದ್ದಾರೆ.
“ನಿಮಗೆ ಮೊಬೈಲ್ ಹಿಂದೆ ನೋಟುಗಳನ್ನು ಇಡುವ ಅಭ್ಯಾಸವಿದ್ದರೆ ಎಚ್ಚರದಿಂದಿರಿ. ಮೊಬೈಲ್ ನ ಪ್ರೊಸೆಸರ್ ವೇಗವಾಗಿ ಕೆಲಸ ಮಾಡಿದರೆ ಹೀಟ್ ಆಗುತ್ತದೆ. ಆಗ ನೀವು ಒಂದು ವೇಳೆ ನೋಟು ಇಟ್ಟಿದ್ದರೆ ಬೆಂಕಿ ಆಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಾರಣ ನೋಟಿನಲ್ಲಿ ಪೇಪರ್ ಜತೆಗೆ ಕೆಲ ಕೆಮಿಕಲ್ ಗಳನ್ನು ಬಳಸುತ್ತಾರೆ. ಇದರಿಂದ ಬೆಂಕಿ ಆಗುವ ಸಾಧ್ಯತೆ ಇರುತ್ತದೆ” ಎಂದು ನೋಟು ಇಡುವ ವಿಡಿಯೋವನ್ನು ಹಂಚಿಕೊಂಡು ಮಾಹಿತಿಯನ್ನು ನೀಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, 17 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದು, 2.50 ಲಕ್ಷ ಜನ ಲೈಕ್ ಮಾಡಿದ್ದಾರೆ. ಹಲವರು ಈ ವಿಡಿಯೋದಿಂದ ತುಂಬಾ ಉಪಕಾರವಾಯಿತೆಂದು ಕಮೆಂಟ್ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಪತ್ನಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Kerala: ಸರಣಿ ಅಪಘಾತ… ಅಪಾಯದಿಂದ ಪಾರಾದ ಕೇರಳ ಸಿಎಂ: ವಿಡಿಯೋ ವೈರಲ್
Challenge; ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.