Viral: ಅಯೋಧ್ಯೆ ರಾಮಮಂದಿರ ಭೇಟಿ ಮಾಡುವ ಸೆಕ್ಯೂರಿಟಿ ಗಾರ್ಡ್ ಕನಸನ್ನು ನನಸಾಗಿಸಿದ ಯುವಕ
Team Udayavani, Jun 5, 2024, 5:36 PM IST
ನವದೆಹಲಿ: ವ್ಯಕ್ತಿಯೊಬ್ಬನ ʼರಾಮ ಮಂದಿರʼ ಭೇಟಿಯ ಕನಸನ್ನು ಸೋಶಿಯಲ್ ಮೀಡಿಯಾ ಪ್ರಭಾವಿ ಯುವಕನೊಬ್ಬ ನನಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನೀಶ್ ಭಗತ್ ಎನ್ನುವ ಸೋಶಿಯಲ್ ಮೀಡಿಯಾ ಪ್ರಭಾವಿ 65 ವರ್ಷದ ವ್ಯಕ್ತಿಯ ಕನಸನ್ನು ನನಸಾಗಿಸಿದ್ದಾರೆ.
ಸೆಕ್ಯೂರಿಟ್ ಗಾರ್ಡ್ ಆಗಿ ಕೆಲಸ ಮಾಡುವ ಬಯಾಸ್ ಜಿ ಅವರ ಬಳಿ ಮೊಬೈಲ್(ವ್ಲಾಗ್) ಹಿಡಿದುಕೊಂಡು ಹೋದ ಅನೀಶ್ “ಈ ವಯಸ್ಸಿನಲ್ಲಿ ನೀವ್ಯಾಕೆ ಕೆಲಸ ಮಾಡುತ್ತಿದ್ದೀರಿ?” ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಬಯಾಸ್ ಅವರು, “ನನಗೆ ಒಬ್ಬನೇ ಮಗನಿದ್ದಾನೆ ಅವನು ನನ್ನನು ದೂರ ಮಾಡಿದ್ದಾನೆ” ಎಂದಿದ್ದಾರೆ.
“ಒಂದು ದಿನದ ಮಟ್ಟಿಗೆ ನೀವು ನನ್ನನ್ನೇ ಮಗನೆಂದು ತಿಳಿದುಕೊಂಡು ನಿಮ್ಮ ಆಸೆಗಳೇನು ಎನ್ನುವುದನ್ನು ನನ್ನ ಬಳಿ ಹೇಳಿಕೊಳ್ಳಿ” ಎಂದು ಅನೀಶ್ ಕೇಳಿದ್ದಾರೆ.
ಅನೀಶ್ ಮಾತಿಗೆ ಮೊದಲು ಹಿಂಜರಿದ ಬಯಾಸ್ ಆ ಬಳಿಕ “ನನ್ನ ಮಗನ ಜೊತೆ ನನಗೆ ರಾಮ ಮಂದಿರ ಭೇಟಿ ನೀಡುವ ಕನಸಿದೆ” ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.
ಇದನ್ನು ಕೇಳಿದ ಬಳಿಕ ಅದೇ ದಿನ ರಾತ್ರಿ ಅನೀಶ್ ಟಿಕೆಟ್ ಬುಕ್ ಮಾಡಿ ಬಯಾಸ್ ಅವರಿಗೆ ಕರೆ ಮಾಡಿದ್ದಾರೆ. “ನಾವು ಅಯೋಧ್ಯೆಗೆ ತಡವಾಗುತ್ತಿದ್ದೇವೆ” ಎಂದಿದ್ದಾರೆ. ಖುಷಿಯಿಂದ ಅನೀಶ್ ತನ್ನ ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿ ಅನೀಶ್ ಅವರೊಂದಿಗೆ ʼರಾಮಲಲ್ಲಾʼನ ದರ್ಶನಕ್ಕೆ ತೆರೆಳಿದ್ದಾರೆ.
ಪುಣೆಯಿಂದ ಲಕ್ನೋಗೆ ಜೀವನದಲ್ಲಿ ಮೊದಲ ಬಾರಿಗೆ ಅವರು ವಿಮಾನವನ್ನು ಹತ್ತಿದ್ದಾರೆ. ಪಯಣದ ಸಂದರ್ಭದಲ್ಲಿನ ಬಯಾಸ್ ಜೀ ಅವರ ಸಂತಸವನ್ನು, ರಾಮಲಲ್ಲಾನನ್ನು ನೋಡುವಾಗಿನ ಉಲ್ಲಾಸವನ್ನು, ಹುಮ್ಮಸ್ಸನ್ನು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ಆಗಿದ್ದು, ವೈರಲ್ ಆಗಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.