Video: ಸಂಪ್ರದಾಯವೆಂದು ಏಕಾಏಕಿ ನವ ದಂಪತಿಯ ತಲೆ ಡಿಚ್ಚಿ ಹೊಡೆಸಿದ ಸಂಬಂಧಿ: ಕೇಸ್ ದಾಖಲು
ಗಂಡನ ಮನೆಗೆ ಕಾಲಿಡುವಾಗ ಆಕೆ ಅಳುತ್ತಾ ಮನೆಯೊಳಗೆ ಕಾಲಿಡಬೇಕು
Team Udayavani, Jul 2, 2023, 5:10 PM IST
ಕೊಚ್ಚಿ: ನಮ್ಮಲ್ಲಿ ಅನೇಕ ನಂಬಿಕೆಗಳಿವೆ. ಅವುಗಳಲ್ಲಿ ಕೆಲವೊಂದು ಮೂಢನಂಬಿಕೆಗಳಾಗಿ ಸಂಪ್ರದಾಯವಾಗಿ ಬೆಳೆದು ಬಂದಿದೆ. ಕೇರಳದಲ್ಲಿ ಇತ್ತೀಚೆಗೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೇ ಇದೀಗ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಕೇರಳದ ಪಲ್ಲಸ್ಸನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯಾಗಿ ಗಂಡನ ಮನೆಯೊಳಗೆ ನವ ವಧು ಕಾಲಿಡುವ ಸಮಯದಲ್ಲಿ, ಆಕೆಗೆ ಆರತಿ ಬೆಳಗಿ ವರನ ಮನೆಯವರು ಮನೆಯೊಳಗೆ ಬರಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಈ ವೇಳೆ ವರನ ಕುಟುಂಬದ ವ್ಯಕ್ತಿಯೊಬ್ಬ ಹಿಂದಿನಿಂದ ನವದಂಪತಿಯ ತಲೆಯನ್ನು ಪರಸ್ಪರ ಡಿಚ್ಚಿ ಹೊಡೆಸಿದ್ದಾನೆ. ಇದರಿಂದ ನೋವಿನಿಂದ ವಧುವಿನ ಕಣ್ಣಿನಲ್ಲಿ ನೀರು ಹರಿದಿದೆ. ವರ ವಧುವಿನ ತಲೆಯನ್ನು ಸವರಿದ್ದಾನೆ.
ಇದು ಆ ಗ್ರಾಮದಲ್ಲಿ ಅನುಸರಿಸಿಕೊಂಡಿ ಬಂದ ಸಂಪ್ರದಾಯ. ವಧು ಮೊದಲು ಬಾರಿಗೆ ಗಂಡನ ಮನೆಗೆ ಕಾಲಿಡುವಾಗ ಆಕೆ ಅಳುತ್ತಾ ಮನೆಯೊಳಗೆ ಕಾಲಿಡಬೇಕು ಎನ್ನುವುದಕ್ಕಾಗಿ ಈ ರೀತಿ ಮಾಡುತ್ತಾರೆ ಎಂದು ವರದಿ ತಿಳಿಸಿದೆ. ಕೆಲವರು ಈ ಸಂಪ್ರದಾಯವನ್ನು ಬೆಂಬಲಿಸಿದ್ದಾರೆ.
ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಪಲ್ಲಸ್ಸನ ಮೂಲದ ಕೆಲ ಜನರು ನಮ್ಮ ಪೂರ್ವಜರು ಈ ರೀತಿಯ ಯಾವ ಸಂಪ್ರದಾಯವನ್ನು ಅನುಸರಿಸಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದ್ದಾರೆ.
ವಿಡಿಯೋ ವೈರಲ್ ಆದ ವಾರದ ಬಳಿಕ, ಕೇರಳ ಮಹಿಳಾ ಆಯೋಗದ ಸೂಚನೆಯಂತೆ ಪೊಲೀಸರು ವರನ ಸಂಬಂಧಿ ಸುಭಾಷ್ ಅವರ ಮೇಲೆ ದೂರು ದಾಖಲಿಸಿದ್ದಾರೆ. ದೈಹಿಕ ಹಲ್ಲೆಯ ಆರೋಪದ ಮೇಲೆ ಸುಭಾಷ್ ಶೀಘ್ರದಲ್ಲಿ ಬಂಧನವಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ನವ ದಂಪತಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ನಾದಿನಿ ಮೊದಲೇ ಎಲ್ಲರ ಮುಂದೆಯೇ ಆ ರೀತಿ ಮಾಡಬೇಡಿ ಎಂದಿದ್ದರು. ನಾನು ನನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅದೇ ಯೋಚನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ನನ್ನ ನಾದಿನಿಯ ಮಾತನ್ನು ಅವರು ಕೇಳುತ್ತಾರೆ ಅಂದುಕೊಂಡಿದ್ದೆ. ನಾನು ಸಾಮಾನ್ಯವಾಗಿ ನೋವು ತೋರಿಸಿಕೊಳ್ಳುವುದಿಲ್ಲ ಆದರೆ ಇದು ನನಗೆ ತುಂಬಾ ಏಟಾಯಿತು” ಎಂದು ನವ ವಧು ಸಜಿಲಾ ಘಟನೆ ಬಗ್ಗೆ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.