Record; ಸಂಗಾತಿ ಹುಡುಕಾಟಕ್ಕಾಗಿ ಸಿಂಹಗಳ ಈಜು
1.3 ಕಿ.ಮೀ. ಈಜಿ ನದಿ ದಾಟಿದ ಲಯನ್ ಬದ್ರರ್ಸ್!
Team Udayavani, Jul 12, 2024, 6:40 AM IST
ಹೊಸದಿಲ್ಲಿ: ಪ್ರೇಯಸಿಯನ್ನು ಕಾಣಲು ಪ್ರೇಮಿಯೊಬ್ಬ ಸಪ್ತ ಸಾಗರವನ್ನೂ ದಾಟಿದ್ದನೆಂಬ ಕಥೆ ಕೇಳಿದ್ದೆವಲ್ಲಾ? ಆ ಕಥೆಯನ್ನು ದಕ್ಷಿಣ ಆಫ್ರಿಕಾದ ಸಿಂಹಗಳು ಎರಡು ನಿಜಗಾಥೆಯನ್ನಾಗಿಸಿವೆ. ಪ್ರೇಯಸಿ ಸಿಂಹಿಣಿಯ ಹುಡುಕುತ್ತಾ ನದಿಯಲ್ಲಿ ಬರೋಬ್ಬರಿ 1.3 ಕಿ.ಮೀ. ಈಜಿವೆ. ಈ ಮೂಲಕ ದ.ಆಫ್ರಿಕಾ ಸಿಂಹಗಳು ನಡೆಸಿದ ಸುದೀರ್ಘ ಈಜು ಎಂಬ ದಾಖಲೆ ಸೃಷ್ಟಿಯಾಗಿದೆ.
ಉಗಾಂಡಾದ ಕ್ವೀನ್ ಎಲಿಜಬೆತ್ ನ್ಯಾಷನಲ್ ಪಾರ್ಕ್‌ನಲ್ಲಿದ್ದ ಜಾಕೋಬ್ ಮತ್ತು ಟಿಬು ಎಂಬ ಸಿಂಹಗಳು ಪ್ರೇಯ ಸಿ ಹುಡುಕಾಟದಲ್ಲಿ ಮೊಸಳೆಗಳು ತುಂಬಿದ್ದ ಕಾಜಿಂಗಾ ನದಿ ದಾಟಿ ಇನ್ನೊಂದು ದಂಡೆ ತಲುಪಿವೆ. ಒಂದು ಕಾಲು ಊನವಾಗಿದ್ದರೂ ಜಾಕೋಬ್ ಕೂಡ ಈ ಸಾಹಸ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಲಯನ್ ಬ್ರದರ್ಸ್‌ಗಳ ಸಾಹಸವನ್ನು ಡ್ರೋನ್‌ಮೂಲಕ ಸಂಶೋಧಕರು ಚಿತ್ರೀಕರಿಸಿ ದ್ದಾರೆ. 3 ಪ್ರಯತ್ನಗಳ ಬಳಿಕ 4ನೇ ಪ್ರಯತ್ನದಲ್ಲಿ ಸಿಂಹಗಳು ಈಜುತ್ತಾ ತಮ್ಮ ಗಮ್ಯ ತಲುಪಿವೆ. ಪ್ರಾಣಿಗಳ ಕಳ್ಳಸಾಗಣೆ ಸೇರಿದಂತೆ ಮನುಷ್ಯರಿಂದ ಸಮಸ್ಯೆಗಳು ಎದುರಾಗುತ್ತಿರುವ ಕಾರಣ ಸಿಂಹಿಣಿ ಸಂತತಿ ಕ್ಷೀಣಿಸುತ್ತಿದೆ. ಈ ಕಾರಣ ಬೇರೆ ದಂಡೆಗೆ ಸಂಗಾತಿಯನ್ನು ಅರಸಿ ಸಿಂಹಗಳು ಪಯಣಿಸಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.