Video: ಕ್ಯಾಬ್ ಚಾಲಕನ ಆ ಒಂದು ಸಣ್ಣ ತಪ್ಪಿಗೆ ದರ್ಪ ಮೆರೆದ ಆಡಿ ಕಾರಿನ ಮಾಲೀಕ…
Team Udayavani, Aug 30, 2024, 4:11 PM IST
ಮುಂಬೈ: ಆಡಿ ಕಾರಿನ ಮಾಲೀಕನೋರ್ವ 24 ವರ್ಷದ ಕ್ಯಾಬ್ ಚಾಲಕನಿಗೆ ಮನಬಂದಂತೆ ಥಳಿಸಿ ಬಳಿಕ ರಸ್ತೆಯ ಮೇಲೆ ಎತ್ತಿ ಬಿಸಾಡಿ ಅಮಾನುಷವಾಗಿ ವರ್ತಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿದ ಮಂದಿ ಐಷಾರಾಮಿ ಕಾರಿನ ಮಾಲೀಕನ ವರ್ತನೆ ವಿರುದ್ಧ ಕೆಂಡಕಾರಿದ್ದಾರೆ.
ಅಸಲಿಗೆ ನಡೆದಿದ್ದೇನು?:
ಕಳೆದ ಆಗಸ್ಟ್ 18 ರಂದು ಘಟನೆ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ವೈರಲ್ ಆಗಿರುವ ವಿಡಿಯೋ ದಲ್ಲಿ ಐಷಾರಾಮಿ ಕಾರಿಗೆ ಓಲಾ ಕಾರು ಚಾಲಕನೋರ್ವ ಡಿಕ್ಕಿ ಹೊಡಿದಿದ್ದಾನೆ ಅದು ಸಣ್ಣ ಮಟ್ಟಿಗೆ ಡಿಕ್ಕಿ ಹೊಡೆದ ಕೂಡಲೇ ಕಾರಿನಿಂದ ಇಳಿದು ಬಂದ ಮಾಲೀಕ ಕಾರಿನ ಹಿಂಬದಿ ನೋಡಿ ಸಿಟ್ಟಿಗೆದ್ದು ಓಲಾ ಕಾರು ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಇದಾದ ಬಳಿಕ ಆತನನ್ನು ಎತ್ತಿ ನೆಲಕ್ಕೆ ಬಿಸಾಡಿದ್ದಾನೆ ಈ ವೇಳೆ ಆತ ನೆಲದ ಮೇಲೆ ಬಿದ್ದು ಒದ್ದಾಡುತ್ತಾನೆ ಆದರೆ ಅಲ್ಲಿದ್ದ ಯಾರೂ ಆತನ ಸಹಾಯಕ್ಕೆ ಹೋಗುವುದಿಲ್ಲ, ಅಲ್ಲದೆ ಆ ಪ್ರದೇಶದಲ್ಲಿ ನಾಲ್ಕೈದು ಸೆಕ್ಯೂರಿಟಿ ಇದ್ದರೂ ಯಾರೂ ಸಹಾಯಕ್ಕೆ ಬರುವುದಿಲ್ಲ.
ಕೊನೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ವ್ಯಕ್ತಿ ಎದ್ದು ಕಾರಿನ ಬಳಿ ಬರುವುದು ಸಿಸಿ ಕ್ಯಾಮೆರಾದಲ್ಲಿ ಕಾಣುತ್ತದೆ. ಇದಕ್ಕೂ ಮೊದಲು ಹಲ್ಲೆ ನಡೆಸಿದ ವ್ಯಕ್ತಿ ಹಾಗೂ ಆತನ ಜೊತೆಗಿದ್ದ ಇತರರು ಅಲ್ಲಿಂದ ಹೊರನಡೆದಿದ್ದಾರೆ.
#WATCH: Mumbai road rage incident – man slaps Ola driver and throws him to the ground after a minor brush with his Audi in Ghatkopar. 🚗👊 #Mumbai #RoadRage #Mumbai #RoadRage pic.twitter.com/Ouikr4Jq50
— Pune Pulse (@pulse_pune) August 30, 2024
ಇದಾದ ಬಳಿಕ ಆತನನ್ನು ಅಲ್ಲಿದ್ದ ಜನರೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಲ್ಲದೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಬಳಿ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಐಷಾರಾಮಿ ಕಾರು ಚಾಲಕ ಹಾಗೂ ಆತನ ಜೊತೆಗಿದ್ದವರಿಗೂ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Gujarat Floods: ಪ್ರವಾಹದಿಂದ ಮನೆಯ ಮೇಲೆ ರಕ್ಷಣೆ ಪಡೆದ ಮೊಸಳೆ… ಜೀವ ಭಯದಲ್ಲಿ ಜನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Childhood Days: ಮರಳಿ ಬಾರದ ಬಾಲ್ಯ ಜೀವನ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.