Uttar Pradesh: ಸಾಲ ತೀರಿಸಲು ಬೀದಿಯಲ್ಲಿ ಕೂತು ಮಗನನ್ನು ಮಾರಾಟ ಮಾಡಲು ಹೊರಟ ತಂದೆ.!
Team Udayavani, Oct 28, 2023, 4:59 PM IST
ಲಕ್ನೋ: ಸಾಲ ತೀರಿಸಲು ತಂದೆಯೊಬ್ಬ ತನ್ನ ಮಗನನ್ನೇ ಮಾರಾಟ ಮಾಡಲು ಬೀದಿಗೆ ಇಳಿದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿರುವುದು ವರದಿಯಾಗಿದೆ.
ಅಲಿಗಢ್‌ನ ರಾಡ್‌ವೇಸ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕುತ್ತಿಗೆಗೆ ಬೋರ್ಡ್ ವೊಂದನ್ನು ನೇತುಹಾಕಿ ಮಗನನ್ನು ಮಾರಾಟ ಮಾಡಲಿದ್ದೇನೆ ಎಂದಿದ್ದಾರೆ.
“ನನ್ನ ಮಗ ಮಾರಾಟಕ್ಕಿದ್ದಾನೆ. ನಾನು ಅವನನ್ನು ಮಾರಾಟ ಮಾಡಲು ಬಯಸಿದ್ದೇನೆ” ಎಂದು ಕುತ್ತಿಗೆಗೆ ಬೋರ್ಡ್ ವೊಂದನ್ನು ಹಾಕಿ ರಸ್ತೆ ಬದಿ ಕುಟುಂಬದ ಜೊತೆ ಕೂತಿದ್ದಾರೆ. ಮಗನನ್ನು 6 ರಿಂದ 8 ಲಕ್ಷ ರೂ.ಗೆ ಮಾರಾಟ ಮಾಡುತ್ತೇನೆ ಎಂದು ವ್ಯಕ್ತಿ ಹೇಳಿದ್ದಾರೆ.ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವ್ಯಕ್ತಿ ಕುಟುಂಬದವರಿಂದ 50 ಸಾವಿರ ರೂಪಾಯಿಯನ್ನು ಸಾಲವಾಗಿ ತೆಗೆದುಕೊಂಡಿದ್ದರು. ಸಾಲ ವಾಪಾಸ್ ಕೊಡದ ಕಾರಣ ಕುಟುಂಬದ ನಡುವೆ ಜಗಳವಾಗಿತ್ತು. ಸಾಲವನ್ನು ವಾಪಾಸ್ ನೀಡಲು ಸಾಧ್ಯವಾಗದೆ ಇದ್ದಾಗ, ಅಂತಿಮವಾಗಿ ವ್ಯಕ್ತಿ ತನ್ನ ಮಗನನ್ನು ಮಾರಾಟ ಮಾಡುವ ಸ್ಥಿತಿಗೆ ಬಂದು ಬೀದಿಯಲ್ಲಿ ಕೂತಿದ್ದಾರೆ.
ಈ ಬಗ್ಗೆ ವರದಿಯಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದಾರೆ. ಎರಡೂ ಕಡೆಯವರನ್ನು ಕರೆದು ಮಾತನಾಡಿಸಿದ್ದು, ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.
अलीगढ़: के रोडवेज बस स्टैंड चौराहे पर एक ऐसी तस्वीर सामने आई कि देखकर हर कोई हैरान और दंग रह गया। दरअसल एक मजबूर पिता कर्ज में डूबने के कारण अपने दिल के टुकड़े, बेटे को 6 से 8 लाख रुपए में बेचने को मजबूर हो गया है। जो कि अब अपनी पत्नी, एक बेटी और बेटे के साथ चौराहे पर cant.. pic.twitter.com/6W3mBfoFzf
— Subhi Yadav (@ManojYaSp) October 27, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.