Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Team Udayavani, Oct 18, 2024, 3:27 PM IST
ಕಾರಿಗೆ ಪೆಟ್ರೋಲ್ ಹಾಕಲು ಬಂದ ಬಿಜೆಪಿ ಶಾಸಕರ ಬಳಿ ಪೆಟ್ರೋಲ್ ಬಂಕ್ ನೌಕರನೋರ್ವ ತನಗೆ ಮದುವೆ ಮಾಡಿಸಿಕೊಡುವಂತೆ ದುಂಬಾಲು ಬಿದ್ದರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದ್ದು ಸ್ವತಃ ಶಾಸಕರೇ ಈ ವಿಡಿಯೋ ಅನ್ನು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಚರಖಾರಿ ಶಾಸಕ ಬ್ರಿಜ್‌ಭೂಷಣ್ ರಜಪೂತ್ ತಮ್ಮ ಕಾರಿನಲ್ಲಿ ಪೆಟ್ರೋಲ್ ತುಂಬಿಸಲು ತಮ್ಮ ಬೆಂಗಾವಲು ಪಡೆಯೊಂದಿಗೆ ಚರಖಾರಿ ಪಟ್ಟಣದಲ್ಲಿರುವ ಮೌರ್ಯ ಪೆಟ್ರೋಲ್ ಪಂಪ್‌ಗೆ ಬಂದಿದ್ದರು. ಈ ವೇಳೆ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಖಿಲೇಂದ್ರ ಖರೆ ಎಂಬ ವ್ಯಕ್ತಿ ಶಾಸಕರ ಬಳಿ ತೆರಳಿ ನಿಮಗೆ ನಾನು ಮತ ಹಾಕಿದ್ದೇನೆ ದಯವಿಟ್ಟು ನನಗೊಂದು ಮದುವೆ ಮಾಡಿಸಿ ಎಂದು ತನ್ನ ಕಷ್ಟ ಹೇಳಿಕೊಂಡಿದ್ದಾನೆ ಅಲ್ಲದೆ ಈಗಾಗಲೇ ಹಲವು ಹುಡುಗಿಯರನ್ನು ನೋಡಿದ್ದು ಯಾವುದು ಸರಿಹೊಂದಲಿಲ್ಲ ಹಾಗಾಗಿ ನೀವೇ ಮುಂದೆ ನಿಂತು ನನಗೆ ಮದುವೆ ಮಾಡಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಸ್ಪಂದಿಸಿದ ಶಾಸಕ ರಾಜಪೂತ್ ನಿನಗೆ ಯಾವ ರೀತಿಯ ಹುಡುಗಿ ಬೇಕು, ಮನೆಯಲ್ಲಿ ಯಾರೆಲ್ಲಾ ಇದ್ದೀರಿ, ನಿನ್ನ ಸಂಬಳ ಎಷ್ಟು ಎಂದೆಲ್ಲಾ ಶಾಸಕರು ಕೇಳಿದ್ದು ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ.
विधायक जी हमने चुनाव जितया है…अब आप हमारी शादी कराओ। वीडियो महोबा जिले का है। चरखरी विधायक बृजभूषण राजपूत जीप में डीजल डलवाने पहुंचे तो पेट्रोल पंप कर्मचारी की यह फरियाद सुन दंग रह गए। pic.twitter.com/O3ZNn2K6qc
— sonelal.kushwaha (@KushwahaK45286) October 16, 2024
ಶಾಸಕರ ಜೊತೆ ಪೆಟ್ರೋಲ್ ಬಂಕ್ ನೌಕರನ ಸಂಭಾಷಣೆಯನ್ನು ಅಲ್ಲಿದ್ದ ಉಳಿದ ನೌಕರರು ವಿಡಿಯೋ ಮಾಡಿದ್ದು ಅದೇ ವಿಡಿಯೋವನ್ನು ಶಾಸಕರು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.