Viral: ಸೆಮಿಫೈನಲ್ ನಲ್ಲಿ ಶಮಿ 7 ವಿಕೆಟ್ ಪಡೆಯುವ ಕನಸು ಕಂಡಿದ್ದನಂತೆ ಈತ.!
Team Udayavani, Nov 16, 2023, 6:24 PM IST
ಮುಂಬಯಿ: ಭಾರತ ವಿಶ್ವಕಪ್ ಸೆಮಿಪೈನಲ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ, ರೋಚಕ ಪಂದ್ಯದಲ್ಲಿ ಆಲ್ ರೌಂಡ್ ಆಟವನ್ನು ಪ್ರದರ್ಶಿಸಿ ಫೈನಲ್ ಗೇರಿದೆ. ಭಾರತದ ಅಮೋಘ ಪ್ರದರ್ಶನಕ್ಕೆ ಕ್ರೀಡಾಭಿಮಾನಿಗಳು ಶಹಬ್ಬಾಸ್ ಎಂದಿದ್ದಾರೆ.
70 ರನ್ ಗಳ ಅಂತರದಿಂದ ಟೀಮ್ ಇಂಡಿಯಾ ಮಹತ್ವದ ಪಂದ್ಯವನ್ನು ಗೆದ್ದಿದೆ. 398 ದಾಖಲಿಸಿದ್ದರೂ ನ್ಯೂಜಿಲೆಂಡ್ ಸುಲಭವಾಗಿ ಪಂದ್ಯವನ್ನು ಬಿಟ್ಟು ಕೊಟ್ಟಿಲ್ಲ. ಭಾರತ ಪಂದ್ಯವನ್ನು ಗೆಲ್ಲಲು ಕೊಹ್ಲಿ, ಗಿಲ್, ಅಯ್ಯರ್ ಬ್ಯಾಟಿಂಗ್ ಒಂದು ಕಾರಣವಾದರೆ, ಇನ್ನೊಂದೆಡೆ ಶಮಿ ಅವರ ಶ್ರೇಷ್ಠ ಮಟ್ಟದ ಬೌಲಿಂಗ್ ಕೂಡ ಕಾರಣವೆಂದರೆ ತಪ್ಪಾಗದು.
ಶಮಿ 9.5 ಓವರ್ ನಲ್ಲಿ 57 ರನ್ 7 ವಿಕೆಟ್ ಗಳನ್ನು ಪಡೆದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಶಮಿ 7 ವಿಕೆಟ್ ತೆಗೆಯುತ್ತಾರೆ ಎನ್ನುವ ಕನಸೊಂದು ತನಗೆ ಬಿದ್ದಿತ್ತು ಎಂದು ಟ್ವಿಟರ್ ಬಳಕೆದಾರನೊಬ್ಬ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಇದನ್ನೂ ಓದಿ: BOLLYWOOD: ಯಶ್ ಜೊತೆ ನಟಿಸೋಕೆ ಇಷ್ಟವೆಂದ ಕರೀನಾ ಕಪೂರ್; ಮತ್ತೆ ಟ್ರೆಂಡಾಯಿತು ʼYash19ʼ
ಡಾನ್ ಮಾಟಿಯೊ ಎಂಬಾತ, “ಸೆಮಿಫೈನಲ್‌ನಲ್ಲಿ ಶಮಿ 7 ವಿಕೆಟ್‌ಗಳನ್ನು ಕಬಳಿಸುವ ಕನಸನ್ನು ಕಂಡಿದ್ದೆ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನ.14 ರಂದು ಮಾಡಿದ್ದು, ಇದುವರೆಗೆ 1.9 ಮಿಲಿಯನ್ ಗೂ ಅಧಿಕ ಮಂದಿ ಇದನ್ನು ನೋಡಿದ್ದಾರೆ.
ಈ ಟ್ವೀಟ್ ಬಳಿಕ ಅನೇಕರು, ಫೈನಲ್ ಪಂದ್ಯದ ಫಲಿತಾಂಶವನ್ನು ಊಹಿಸಿ ಎಂದು ಒತ್ತಾಯಿಸಿದ್ದಾರೆ. ನ.18 ರಂದು ಚೆನ್ನಾಗಿ ನಿದ್ದೆ ಮಾಡಿ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಯಾವಾಗಲೂ ಕನಸು ಕಾಣುತ್ತಿರಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಪತ್ನಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Kerala: ಸರಣಿ ಅಪಘಾತ… ಅಪಾಯದಿಂದ ಪಾರಾದ ಕೇರಳ ಸಿಎಂ: ವಿಡಿಯೋ ವೈರಲ್
Challenge; ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.