Vellore: ವೈದ್ಯ ವಿದ್ಯಾರ್ಥಿ ಹೇಳಿದ ಆ ಒಂದು ಮಾತಿಗೆ ಸಿಟ್ಟಾದ ಮಹಿಳಾ ರೋಗಿ ಮತ್ತು ಸ್ನೇಹಿತ
Team Udayavani, Mar 5, 2024, 6:11 PM IST
ತಮಿಳುನಾಡು: ತಮಿಳುನಾಡಿನ ವೆಲ್ಲೂರಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಮೇಲೆ ಮಹಿಳಾ ರೋಗಿ ಮತ್ತು ಆಕೆಯ ಸ್ನೇಹಿತ ಹಲ್ಲೆ ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮಹಿಳಾ ರೋಗಿಯಾಗಿರುವ ಸುಭಾ(36) ಅವರು ವೈದ್ಯಕೀಯ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಾಣಬಹುದು.
ಆಗಿದ್ದೇನು ?
ಕಳೆದ ವಾರದಿಂದ ಸುಭಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿವಾಕರ್ ಆಸ್ಪತ್ರೆಯಲ್ಲಿ ಸುಭಾ ಅವರನ್ನು ಭೇಟಿಯಾಗಲು ಬಂದಿದ್ದರು ಅಲ್ಲದೆ ರೋಗಿಯ ಹಾಸಿಗೆಯಲ್ಲಿ ಕುಳಿತಿದ್ದರು ಎಂದು ವರದಿಯಾಗಿದೆ.
ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಯಾಗಿರುವ ವಿಶಾಲ್ ತನ್ನ ಕರ್ತವ್ಯದಲ್ಲಿದ್ದ ವೇಳೆ ಮಹಿಳಾ ವಾರ್ಡ್ ನಲ್ಲಿ ವ್ಯಕ್ತಿಯೊಬ್ಬ ಕುಳಿತಿರುವುದು ಕಂಡು ಬಂದಿದೆ, ಆ ವೇಳೆ ವಾರ್ಡ್ ಗೆ ಬಂದ ವಿದ್ಯಾರ್ಥಿ ಮಹಿಳಾ ರೋಗಿಯ ಜೊತೆಗಿದ್ದ ವ್ಯಕ್ತಿಯಲ್ಲಿ ಇದು ಮಹಿಳೆಯರ ವಾರ್ಡ್ ಇಲ್ಲಿ ಗಂಡಸರು ಇರುವಂತಿಲ್ಲ ಎಂದು ಹೇಳಿದ್ದಾನೆ ಇಷ್ಟು ಹೇಳಿದ ವಿಚಾರಕ್ಕೆ ಕೋಪಗೊಂಡ ವ್ಯಕ್ತಿ ವಿದ್ಯಾರ್ಥಿ ಜೊತೆ ಜಗಳಕ್ಕೆ ಮುಂದಾಗಿದ್ದಾನೆ. ಅಲ್ಲದೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ಶುರುವಾಗಿದೆ ಅಷ್ಟರಲ್ಲೇ ವ್ಯಕ್ತಿಯ ಜೊತೆಗಿದ್ದ ಮಹಿಳಾ ರೋಗಿ ವೈದ್ಯ ವಿದ್ಯಾರ್ಥಿಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ.
ಗಲಾಟೆ ಜೋರಾದ ಕಾರಣ ಆಸ್ಪತ್ರೆಯಲ್ಲಿದ್ದ ಇತರ ಸಿಬಂದಿ ಬಂದು ಜಗಳ ಬಿಡಿಸಿದ್ದಾರೆ, ಈ ಘಟನೆ ಅಲ್ಲಿನ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಅಲ್ಲದೆ ಘಟನೆ ಸಂಬಂಧ ವೈದ್ಯ ವಿದ್ಯಾರ್ಥಿಯ ದೂರಿನ ಮೇರೆಗೆ ಸುಭಾ ಮತ್ತು ಆಕೆಯ ಸ್ನೇಹಿತ ದಿವಾಕರ್ ಇಬ್ಬರನ್ನೂ ವೆಲ್ಲೂರು ತಾಲೂಕು ಪೊಲೀಸರು ಬಂಧಿಸಿದ್ದಾರೆ.
Update🚨
Two persons, including a 36-year-old woman patient, were arrested by the Vellore Taluk police on Monday (March 4, 2024) evening, for assaulting a second-year postgraduate medical student at the Government Medical College Hospital in Vellore.
This altercation was… pic.twitter.com/poUMDhGosR
— The Cancer Doctor (@DoctorHussain96) March 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.