Meerut ಬಾಹುಬಲಿ ಸಮೋಸಾ ಸವಾಲು: 30 ನಿಮಿಷಗಳಲ್ಲಿ ತಿನ್ನಿ, 71 ಸಾವಿರ ರೂ.ಗೆಲ್ಲಿ!
Team Udayavani, Jun 18, 2023, 3:40 PM IST
ಮೀರತ್: ಬರೋಬ್ಬರಿ 12 ಕೆ.ಜಿಯಷ್ಟು ತೂಕದ ಬೃಹತ್ ಸಮೋಸಾವನ್ನು ಕತ್ತರಿಸುವ ಮೂಲಕ ನಿಮ್ಮ ಜನ್ಮದಿನವನ್ನು ಆಚರಿಸುತ್ತೀರಾ?!, ಇಲ್ಲವಾದರೆ 30 ನಿಮಿಷಗಳಲ್ಲಿ ಡೀಪ್ ಫ್ರೈ ಮಾಡಿದ ಜನಪ್ರಿಯ ತಿನಿಸನ್ನು ತಿಂದು 71,000 ರೂ.ಗೆಲ್ಲುತ್ತೀರಾ?, ಇಲ್ಲಿದೆ ನಿಮಗೆ ಅವಕಾಶ.
ಲಾಲ್ಕುರ್ತಿ ಮೂಲದ ಕೌಶಲ್ ಸ್ವೀಟ್ಸ್‌ನ ಮೂರನೇ ತಲೆಮಾರಿನ ಮಾಲಕ ಶುಭಂ ಕೌಶಲ್ ಅವರು ಸಮೋಸಾ ಮೂಲಕ ಗಮನ ಸೆಳೆಯಲು ಹೊಸ ಐಡಿಯಾ ಮಾಡಲು ಬಯಸಿದ್ದರು. 12 ಕಿಲೋಗ್ರಾಂ ತೂಗುವ ‘ಬಾಹುಬಲಿ’ ಸಮೋಸಾವನ್ನು ತಯಾರಿಸುವ ಆಲೋಚನೆ ಅವರಿಗೆ ಹೊಳೆಯಿತು.ಜನರು ‘ಬಾಹುಬಲಿ’ ಸಮೋಸಾಗಳನ್ನು ಆರ್ಡರ್ ಮಾಡುತ್ತಾರೆ ಮತ್ತು ಸಾಂಪ್ರದಾಯಿಕ ಕೇಕ್ ಬದಲಿಗೆ ತಮ್ಮ ಹುಟ್ಟುಹಬ್ಬದಂದು ಅದನ್ನು ಕತ್ತರಿಸಲು ಬಯಸುತ್ತಿದ್ದಾರೆ ಎಂದು ಕೌಶಲ್ ಹೇಳಿದರು.
ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನೀರ್ ಮತ್ತು ಡ್ರೈ ಫ್ರೂಟ್ಸ್ ತುಂಬಿದ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿ 71,000 ರೂಪಾಯಿ ಗೆಲ್ಲುವ ಸವಾಲು ಕೂಡ ಜನರ ಮುಂದಿಡಲಾಗಿದೆ ಎಂದು ಅವರು ಹೇಳಿದರು.
ವಿಶೇಷವೆಂದರೆ ದೈತ್ಯ ಸಮೋಸಾವನ್ನು ತಯಾರಿಸಲು ಕೌಶಲ್ ಅವರ ಅಂಗಡಿಯಲ್ಲಿ ಬಾಣಸಿಗರಿಗೆ ಸುಮಾರು ಆರು ಗಂಟೆಗಳು ಬೇಕಾಗುತ್ತದೆ.
ಪ್ಯಾನ್‌ನಲ್ಲಿ ಸಮೋಸಾವನ್ನು ಕರಿಯಲು ಕೇವಲ 90 ನಿಮಿಷಗಳು ಮತ್ತು ಮೂವರ ಪ್ರಯತ್ನಗಳು ಬೇಕಾಗುತ್ತವೆ.
12 ಕೆಜಿ ತೂಕದ ಸಮೋಸಾದ ಬೆಲೆ ಸುಮಾರು 1,500 ರೂ., ‘ಬಾಹುಬಲಿ’ ಸಮೋಸಾಗಳಿಗೆ ಇದುವರೆಗೆ ಸುಮಾರು 40-50 ಆರ್ಡರ್‌ಗಳು ಬಂದಿವೆ ಎಂದು ಕೌಶಲ್ ಹೇಳಿದ್ದಾರೆ. ಈ ಸಮೋಸಾ ದೇಶದಲ್ಲೇ ಅತಿ ದೊಡ್ಡದಾಗಿದೆ ಎಂದು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Speeding Truck : ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ…
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.