ಎನ್ ಕೌಂಟರ್‌ನಲ್ಲಿ ಬಲಿಯಾದ ಆರೋಪಿ: ತಂದೆಯ ಸ್ಥಾನದಲ್ಲಿ ಮಗಳ ಮದುವೆ ಮಾಡಿಸಿಕೊಟ್ಟ ಪೊಲೀಸರು
Team Udayavani, Mar 6, 2024, 3:59 PM IST
ಲಕ್ನೋ: ಸದಾ ಕರ್ತವ್ಯದಲ್ಲಿ ನಿರತರಾಗಿ ಕಾನೂನು ಸುವ್ಯವಸ್ಥೆಯನ್ನು ಕಾಯುವ ಪೊಲೀಸರು, ಇಲ್ಲೊಂದು ಬಡ ಕುಟುಂಬದ ಹೆಣ್ಣು ಮಗಳ ಮದುವೆಯನ್ನು ಮಾಡಿಸಿ ತಂದೆಯ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಉತ್ತರ ಪ್ರದೇಶದ ಜಲೌನ್ ಪೊಲೀಸರು ಎನ್ ಕೌಂಟರ್‌ನಲ್ಲಿ ಬಲಿಯಾದವನ ಮಗಳ ಮದುವೆಯನ್ನು ಮಾಡಿಸಿಕೊಟ್ಟಿದ್ದಾರೆ.
ಏನಿದು ಘಟನೆ: ಉತ್ತರ ಪ್ರದೇಶದ ಒರೈ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ ಕಾನ್ಸ್ ಸ್ಟೇಬಲ್ ಆಗಿ ನಿಯೋಜನೆಗೊಂಡಿದ್ದ ಭೇಡ್‌ಜಿತ್ ಸಿಂಗ್ ಅವರನ್ನು 2023 ರ ಮೇ 10 ರಂದು ಭೀಕರವಾಗಿ ಹತ್ಯೆ ಮಾಡಲಾಗಿತ್ತು.ಈ ಘಟನೆಯಾದ ನಾಲ್ಕು ದಿನಗಳಲ್ಲಿ ನೆರೆಯ ಜಲೌನ್ ಜಿಲ್ಲೆಯಲ್ಲಿ ಆರೋಪಿಗಳಾದ ರಮೇಶ್ ರೈಕ್ವಾರ್ ಮತ್ತು ಕಲ್ಲು ಅಹಿರ್ವಾರ್ ಅವರನ್ನು ಎನ್ ಕೌಂಟರ್ ಮಾಡಲಾಗಿತ್ತು.
ಈ ಘಟನೆಯಾದ ಬಳಿಕ ಪೊಲೀಸರು ತನಿಖೆಯ ವೇಳೆ ಮತ್ತಷ್ಟು ಮಾಹಿತಿ ಕಲೆಹಾಕಿದ್ದರು. ಎನ್ ಕೌಂಟರ್ ನಲ್ಲಿ ಹತ್ಯೆಯಾದ ರಮೇಶ್ ರೈಕ್ವಾರ್ ಅವರ ಕುಟುಂಬ ಅತ್ಯಂತ ಬಡತನದ ಸ್ಥಿತಿಯಲ್ಲಿದ್ದರು. ಎಲ್ಲಿಯವರೆಗೆ ಅಂದರೆ ಕುಟುಂಬದಲ್ಲಿ ಮದುವೆ ವಯಸ್ಸಿಗೆ ಬೆಳೆದ ಇಬ್ಬರು ಹೆಣ್ಣು ಮಕ್ಕಳಿದ್ದರು. ಈ ಸಮಯದಲ್ಲಿ ಪೊಲೀಸ್ ಮನಸ್ಸು ಕೂಡ ಕುಟುಂಬದ ಪರಿಸ್ಥಿತಿಯನ್ನು ನೋಡಿ ಕರಗುತ್ತದೆ.
ಎನ್ ಕೌಂಟರ್ ಆದ ರಮೇಶ್ ಅವರ ಪತ್ನಿಯ ಬಳಿ ಪೊಲೀಸರು ಆರ್ಥಿಕವಾಗಿ ನೆರವಾಗುವುದಾಗಿ ಹಾಗೂ ಇಬ್ಬರು ಪುತ್ರಿಯರ ಮದುವೆಯ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರು ಎಂದು ಜಲೌನ್ ಪೊಲೀಸ್ ಎನ್‌ಕೌಂಟರ್ ತಂಡದ ಭಾಗವಾಗಿದ್ದ ಸರ್ಕಲ್ ಆಫೀಸರ್ (ಸಿಒ) ಗಿರಿಜಾ ಶಂಕರ್ ತ್ರಿಪಾಠಿ ಹೇಳುತ್ತಾರೆ.
ಅದ್ಧೂರಿಯಾಗಿ ಮದುವೆ ಮಾಡಿಸಿಕೊಟ್ಟ ಪೊಲೀಸರು: ಇತ್ತೀಚೆಗೆ ರಮೇಶ್ ಅವರ ಪತ್ನಿ ತಾರಾ ಗಿರಿಜಾ ತ್ರಿಪಾಠಿ ಅವರನ್ನು ಭೇಟಿಯಾಗಿ ತನ್ನ ಮಗಳು ಶಿವಾನಿ ಅವರ ಮದುವೆ ನಿಗದಿಯಾಗಿದೆ ಎಂದು ಹೇಳಿದ್ದರು. ಇದಾದ ಬಳಿಕ ಜಲೌನ್ ಪೊಲೀಸರು ಎಲ್ಲಾ ಜೊತೆಯಾಗಿ ಮದುವೆ ಮಾಡಿಸುವ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ.
ರಮೇಶ್ ಅವರ ಪುತ್ರಿ ಮದುವೆಗಾಗಿ ಪೊಲೀಸರು ಹಣವನ್ನು ಸಂಗ್ರಹಿಸಲು ಶುರು ಮಾಡುತ್ತಾರೆ. ಸ್ಥಳವನ್ನು ಕಾಯ್ದಿರಿಸಿ, ಬೈಕು ಸೇರಿದಂತೆ ಮನೆಯ ಉಡುಗೊರೆಗಳು ಮತ್ತು ಇತರ ಸರಕುಗಳಿಗೆ ವ್ಯವಸ್ಥೆ ಮಾಡಿದೆವು. ಆಹಾರ, ಉಪಹಾರ ಮತ್ತು ಆಭರಣಗಳ ವ್ಯವಸ್ಥೆಯನ್ನೂ ಮಾಡಿ ಮದುವೆಗೆ ಸಿದ್ದರಾದೆವು ಎಂದು ತ್ರಿಪಾಠಿ ಹೇಳುತ್ತಾರೆ.
ಅದರಂತೆ ಮಾರ್ಚ್ 2 ರಂದು ಒರೈಯ ಜಾಂಕಿ ಪ್ಯಾಲೇಸ್ ನಲ್ಲಿ ವಿವಾಹವನ್ನು ನೆರವೇರಿಸುತ್ತಾರೆ. ಮದುವೆಗೆ ಬಂದ ದಿಬ್ಬಣವನ್ನು ಪೊಲೀಸರೇ ಸ್ವಾಗತಿಸುತ್ತಾರೆ. ಮದುವೆ ಬಳಿಕ ತಂದೆ ಸ್ಥಾನದಲ್ಲಿ ನಿಂತು ಪೊಲೀಸರು ನವ ದಂಪತಿಗೆ ಆಶೀರ್ವಾದವನ್ನು ನೀಡಿದ್ದಾರೆ.
“ಜಲೌನ್ ಪೊಲೀಸರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ನನ್ನ ಪತಿಯನ್ನು ನಾನು ಕಳೆದುಕೊಂಡಾಗ, ನಾವು ಕಡು ಬಡತನದಲ್ಲಿ ಬದುಕುತ್ತಿದ್ದೇವೆ ಮತ್ತು ಮದುವೆಯಾಗಲು ಇಬ್ಬರು ಹೆಣ್ಣುಮಕ್ಕಳು ಇರುವುದರಿಂದ ನನ್ನ ಜೀವನವನ್ನು ಕೊನೆಗೊಳಿಸಲು ನಾನು ಯೋಚಿಸಿದ್ದೆ. ನಮ್ಮ ಬೆಂಬಲಕ್ಕೆ ನಿಂತು ನಮಗೆ ಸಹಾಯ ಮಾಡಿದ ಜಲೌನ್ ಪೊಲೀಸರಿಗೆ ಧನ್ಯವಾದಗಳು. ಪೊಲೀಸರು ಕುಟುಂಬಕ್ಕೆ ಸಹಾಯವನ್ನು ನೀಡಿದ್ದು ಮಾತ್ರವಲ್ಲದೆ ನನ್ನ ಹೆಣ್ಣುಮಕ್ಕಳ ಮದುವೆಯನ್ನು ಆಯೋಜಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಅವರು ತಮ್ಮ ಭರವಸೆಯನ್ನು ಪೂರೈಸಿದ್ದಾರೆ” ಎಂದು ತಾರಾ ರೈಕ್ವಾರ್
“ನನ್ನ ಜೀವನದುದ್ದಕ್ಕೂ ಪಾಲಿಸು ಇಂತಹ ಸುಂದರ ನೆನಪುಗಳನ್ನು ಪಡೆಯುತ್ತೇನೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ” ಎಂದು ನವ ವಧು ಶಿವಾನಿ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.