

Team Udayavani, Jan 30, 2025, 5:23 PM IST
ಪಾಟ್ನಾ : ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಪಾಟ್ನಾದ ಗಾಂಧಿ ಘಾಟ್‌ನಲ್ಲಿ ನಡೆದ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಪ್ಪಾಳೆ ತಟ್ಟುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಗುರುವಾರ (ಜ 30) ನಡೆದ ಸಮಾರಂಭದ ದೃಶ್ಯ ಫೋನ್‌ನಲ್ಲಿ ಸೆರೆಹಿಡಿದು ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಶ್ರದ್ಧಾಂಜಲಿ ಸಲ್ಲಿಸುವ ವೇಳೆ ನಿತೀಶ್ ಕುಮಾರ್ ಒಬ್ಬರೇ ಚಪ್ಪಾಳೆ ತಟ್ಟಲು ಆರಂಭಿಸಿದರು. ಇದೆ ವೇಳೆ ಬಿಹಾರ ವಿಧಾನಸಭೆ ಸ್ಪೀಕರ್ ನಂದ್ ಕಿಶೋರ್ ಯಾದವ್ ಅವರು ಚಪ್ಪಾಳೆ ತಟ್ಟುವುದನ್ನು ನಿಲ್ಲಿಸುವಂತೆ ನಿತೀಶ್ ಕುಮಾರ್ ಅವರಿಗೆ ಸೂಕ್ಷ್ಮವಾಗಿ ಸೂಚಿಸಿದರು.
ಸಮಾರಂಭದಲ್ಲಿ ಸಶಸ್ತ್ರ ಪೊಲೀಸರು ಗೌರವ ವಂದನೆ ಸಲ್ಲಿಸಿ, ಎರಡು ನಿಮಿಷ ಮೌನ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಮೌನಾಚರಣೆಯನ್ನೂ ಮಾಡಲಾಯಿತು.
ये देखिए, आपको खुद पता लग जाएगा कि क्यों प्रशांत किशोर जी ने नीतीश कुमार की मानसिक स्थिति पर सवाल खड़े किए थे ।। और मुख्यमंत्री जी के बेहतर उपचार जल्द से जल्द करने की मांग की थी ।।
वीडियो आज का है , जब मुख्यमंत्री जी बापू को उनके पुण्य तिथि पर श्रद्धांजली देने गए थे , तब अचानक… pic.twitter.com/5aHO9VQNgD
— Aman Singh (@Amanmagahi) January 30, 2025
ಪ್ರಶಾಂತ್ ಕಿಶೋರ್ ಹೇಳಿದ್ದು ಸರಿಯಾಗಿದೆ ಎಂದ ಹಲವರು
“ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ”ನಿತೀಶ್ ಕುಮಾರ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿ, ಆದಷ್ಟು ಬೇಗ ಮುಖ್ಯಮಂತ್ರಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದ್ದರು. ಈ ಘಟನೆ ನಡೆದ ಬಳಿಕ ಅನೇಕರು ಪ್ರಶಾಂತ್ ಕಿಶೋರ್ ಹೇಳಿದ್ದು ಸರಿಯಾಗಿಯೇ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆರ್ ಜೆಡಿ, ಕಾಂಗ್ರೆಸ್ ಸೇರಿ ವಿಪಕ್ಷಗಳ ನಾಯಕರು ನಿತೀಶ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
Video: ಭಯವಾಗುತ್ತೆ, ಲಿಫ್ಟ್ ಒಳಗೆ ನಾಯಿ ತರಬೇಡಿ… ಬಾಲಕ ಬೇಡಿಕೊಂಡರೂ ಕೇಳದ ಮಹಿಳೆ
ತರಬೇತಿ ವೇಳೆ 270 ಕೆಜಿ ಭಾರದ ರಾಡ್ ಮೈಮೇಲೆ ಬಿದ್ದು ಚಿನ್ನದ ಪದಕ ವಿಜೇತೆಯ ದುರಂತ ಅಂತ್ಯ
Mahakumbh mela; 7 ಬೇಡಿಕೆಯಿಟ್ಟು ಪುಣ್ಯ ಸ್ನಾನ ಮಾಡಿದ ಚಿಕ್ಕಮಗಳೂರಿನ ಯುವಕ!
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
You seem to have an Ad Blocker on.
To continue reading, please turn it off or whitelist Udayavani.