ಬೀದಿ ನಾಯಿಯೊಂದಿಗೆ ಅಪ್ರಾಪ್ತ ಮಕ್ಕಳ ಮದುವೆ ಮಾಡಿಸಿದ ಗ್ರಾಮಸ್ಥರು: ಕಾರಣವೇ ವಿಚಿತ್ರ
Team Udayavani, Apr 19, 2023, 9:47 AM IST
ಭುವನೇಶ್ವರ್: ದೇಶದಲ್ಲಿ ನಂಬಿಕೆಗಳು ಎಷ್ಟು ಇದೆಯೋ, ಅಷ್ಟೇ ದೊಡ್ಡಮಟ್ಟದಲ್ಲಿ ಇಂದಿಗೂ ಕೆಲ ಗ್ರಾಮೀಣ ಪ್ರದೇಶದಲ್ಲಿ ಆಚರಣೆಯ ಸಲುವಾಗಿ ಮೂಡನಂಬಿಕೆಗಳು ಜೀವಂತವಾಗಿದೆ. ಮಕ್ಕಳನ್ನು ದುಷ್ಟ ಶಕ್ತಿಗಳಿಂದ ದೂರಮಾಡುವ ಸಲುವಾಗಿ ನಾಯಿಗಳೊಂದಿಗೆ ವಿವಾಹ ಮಾಡಿಸಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಸೊರೊ ಬ್ಲಾಕ್‌ನ ಬಂಧ್‌ಸಾಹಿ ಗ್ರಾಮದ ಹೋ ಬುಡಕಟ್ಟು ಜನಾಂಗದವರಾದ ಸಿಂಗ್‌ಗಳಲ್ಲಿ ಒಂದು ನಂಬಿಕೆಯಿದೆ. ಅದು ಏನೆಂದರೆ ಸಣ್ಣ ಮಕ್ಕಳ ದವಡೆಯಲ್ಲಿ ಮೇಲಿನ ಹಲ್ಲು ಮೊದಲು ಹುಟ್ಟಿದರೆ ಅದು ಅಶುಭವೆಂದು ನಂಬಲಾಗುತ್ತದೆ. ಹಾಗಾದರೆ ಮಕ್ಕಳಿಗೆ ಕೆಡುಕುಗಳು ಆಗುತ್ತವೆ ಎನ್ನುವುದನ್ನು ಈ ಬುಡಕಟ್ಟ ಜನಾಂಗದ ನಂಬಿಕೆ. ಮಕ್ಕಳಿಗೆ ಸಂಭವಿಸಬಹುದಾದ ಅಪಾಯವನು ಹೋಗಲಾಡಿಸುವ ವಿಧಾನವೆಂದರೆ ಆ ಮಕ್ಕಳನ್ನು ನಾಯಿಯೊಂದಿಗೆ ಮದುವೆ ಮಾಡಿಸಬೇಕು. ಹಾಗೆ ಮಾಡಿದರೆ ಮಕ್ಕಳಿಗೆ ಬರುವ ಅಪಾಯ ಆ ನಾಯಿಗಳಿಗೆ ಬರುತ್ತದೆ ಎನ್ನುವುದು ಈ ಬುಡಕಟ್ಟು ಜನಾಂಗದ ನಂಬಿಕೊಂಡು ಬಂದಿರುವ ಹಳೆಯ ನಂಬಿಕೆ.
ಈ ಕಾರಣದಿಂದಾಗಿ ಇಬ್ಬರು ಅಪ್ರಾಪ್ತ ಮಕ್ಕಳ ಮದುವೆಗಾಗಿ ಎರಡು ಬೀದಿ ನಾಯಿಗಳನ್ನು ಹುಡುಕಿದ್ದಾರೆ. ಅದರಂತೆ 11 ವರ್ಷದ ಬಾಲಕ ತಪನ್ ಸಿಂಗ್ (ದಾರಿ ಸಿಂಗ್‌ನ ಮಗ) ಹೆಣ್ಣು ನಾಯಿಯನ್ನು ಮದುವೆಯಾಗಿದ್ದರೆ, 7 ವರ್ಷದ ಲಕ್ಷ್ಮಿಯನ್ನು (ಬುಟುನ ಮಗಳು) ಗಂಡು ನಾಯಿಯೊಂದಿಗೆ ಮದುವೆ ಮಾಡಸಿದ್ದಾರೆ. ಈ ಮದುವೆ ಮಕ್ಕಳನ್ನು ದುಷ್ಟ ಶಕ್ತಿಗಳಿಂದ ದೂರವಿಡುತ್ತದೆ ಎನ್ನುವುದು ಅವರ ನಂಬಿಕೆ.
ಮದುವೆಯ ಆಚರಣೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ನಡೆಯಿತು. ಮದುವೆ ಶಾಸ್ತ್ರೋಕ್ತವಾಗಿ ನಡೆದ ನಂತರ ಆಗಬಹುದಾದ ಅನಿಷ್ಟವು ನಾಯಿಗಳಿಗೆ ಹೋಗುತ್ತದೆ ಎಂದು ಸಮುದಾಯವು ನಂಬುತ್ತದೆ. ಇದು ವೈಜ್ಞಾನಿಕವಾಗಿ ಯಾವುದೇ ಅರ್ಥವನ್ನು ಹೊಂದಿಲ್ಲ. ಆದರೆ ಹಿರಿಯರು ನಂಬಿಕೊಂಡು ಬಂದಿದ್ದರಿಂದ ಇದು ಮುಂದುವರೆದಿದೆ ಎಂದು ಗ್ರಾಮದ 28 ವರ್ಷದ ಪದವೀಧರ ಸಾಗರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.