West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ರಕ್ಷಿಸಲು ಯಾರೂ ಬರುವುದಿಲ್ಲ, ಮಮತಾ ಬ್ಯಾನರ್ಜಿಗೂ ಆಗುವುದಿಲ್ಲ..
Team Udayavani, Apr 24, 2024, 1:20 PM IST
ಕೋಲ್ಕತಾ: ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ಮಂಗಳವಾರ ಪಶ್ಚಿಮ ಬಂಗಾಳದ ಬಸಿರ್‌ಹತ್‌ನಲ್ಲಿ ನ್ಯಾಯಾಲಯದ ವಿಚಾರಣೆಯ ನಂತರ ಮಗಳನ್ನು ಭೇಟಿಯಾದ ವೇಳೆ ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದೆ.
ಬಸಿರ್‌ಹತ್‌ನಲ್ಲಿರುವ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಷಹಜಹಾನ್‌ನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದಿಂದ ಹೊರಗೆ ಬರುತ್ತಿದ್ದಾಗ ಮಗಳನ್ನು ನೋಡಿ ಕಣ್ಣೀರು ಹಾಕಲಾಗಿದೆ.
ಷಹಜಹಾನ್ ಪೊಲೀಸ್ ವ್ಯಾನ್‌ನಲ್ಲಿ ಕುಳಿತು ತನ್ನ ಮಗಳೊಂದಿಗೆ ಕೆಲ ನಿಮಿಷದ ಮಾತುಕತೆಯ ಬಳಿಕ ರ ಕಣ್ಣೀರು ಒರೆಸುವುದನ್ನು ತೋರಿಸಿದೆ.
ಮಹಿಳೆಯರು ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣ ಆರೋಪ ಮಾಡಿದ ನಂತರ ಭಾರಿ ರಾಜಕೀಯ ಕೋಲಾಹಲ , ಸಂಘರ್ಷದ ಬಳಿಕ ಷಹಜಹಾನ್ ನನ್ನು ಬಂಧಿಸಲಾಗಿತ್ತು.
ಬಿಜೆಪಿ ವ್ಯಂಗ್ಯ
ಷಹಜಹಾನ್ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟಿಎಂಸಿ ಮಾಜಿ ನಾಯಕನ ವಿರುದ್ಧ ವ್ಯಂಗ್ಯವಾಡಿದ್ದಾರೆ.
‘ಮಮತಾ ಬ್ಯಾನರ್ಜಿಯವರ ಪೋಸ್ಟರ್ ಬಾಯ್ – ಅತ್ಯಾಚಾರಿ ಶೇಖ್ ಷಹಜಹಾನ್ ಸಮಾಧಾನಿಸಲಾಗದ ಮಗುವಿನಂತೆ ಅಳುತ್ತಿದ್ದಾನೆ. ಕ್ರಿಮಿನಲ್ ಅನುಬ್ರೊತೋ ಮೊಂಡಲ್ ಜೈಲಿನಲ್ಲಿದ್ದಾನೆ.ಬಂಗಾಳದಾದ್ಯಂತ ಭಯೋತ್ಪಾದನೆಯ ಆಳ್ವಿಕೆಯನ್ನು ಬಿಚ್ಚಿಟ್ಟ ಸೌಕತ್ ಮೊಲ್ಲಾ, ಜಹಾಂಗೀರ್ ಖಾನ್ ಮತ್ತು ಇತರರಿಗೆ ಇದೆ ಗತಿಯಾಗುತ್ತದೆ. ಕಾನೂನು ಕೈಗೆತ್ತಿಕೊಂಡಾಗ ಅವರನ್ನು ರಕ್ಷಿಸಲು ಯಾರೂ ಬರುವುದಿಲ್ಲ. ಖಚಿತವಾಗಿ ಮಮತಾ ಬ್ಯಾನರ್ಜಿಗೂ ಆಗುವುದಿಲ್ಲ.ಮಂತ್ರಿಗಳನ್ನು ಉಳಿಸಲೂ ಸಾಧ್ಯವಾಗಲಿಲ್ಲ. ಕಾಲ ಚಕ್ರ ತಿರುಗುತ್ತಿದೆ.” ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
The swag has disappeared. Mamata Banerjee’s poster boy – rapist Sheikh Shahjahan is weeping like an inconsolable child. Criminal Anubroto Mondal is in jail. This is the fate that awaits the likes of Saokat Mollah, Jehangir Khan and others, who have unleashed a reign of terror… pic.twitter.com/IUYzcO03YZ
— Amit Malviya (मोदी का परिवार) (@amitmalviya) April 23, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.