Badminton Player: ಪಂದ್ಯಾವಳಿ ವೇಳೆ ಹೃದಯಾಘಾತಗೊಂಡು ಕುಸಿದು ಬಿದ್ದ ಬ್ಯಾಡ್ಮಿಂಟನ್ ಆಟಗಾರ
Team Udayavani, Jul 2, 2024, 4:22 PM IST
ಚೀನಾ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಚೀನಾ ಮತ್ತು ಜಪಾನ್ ನಡುವೆ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯುತ್ತಿದ್ದ ವೇಳೆ ಚೀನಾ ಆಟಗಾರ ಬ್ಯಾಡ್ಮಿಂಟನ್ ಕೋರ್ಟ್ ನಲ್ಲೇ ಕುಸಿದು ಪ್ರಾಣಬಿಟ್ಟಿದ್ದಾನೆ.
ಈ ಪಂದ್ಯದಲ್ಲಿ ಚೀನಾವನ್ನು ಝಾಂಗ್ ಝಿಜಿ ಪ್ರತಿನಿಧಿಸಿದರೆ ಜಪಾನ್ ತಂಡವನ್ನು ಕಜುಮಾ ಕವಾನಾ ಪ್ರತಿನಿಧಿಸಿದ್ದರು. ಪಂದ್ಯದ ವೇಳೆ ಚೀನಾ ಆಟಗಾರ ಹೃದಯಾಘಾತಗೊಂಡು ಅಂಗಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದೀಗ ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಪಂದ್ಯಾವಳಿ ಆಯೋಜಕರ ವಿರುದ್ಧ ವ್ಯಾಪಕ ಆಕ್ರೋಶವೂ ಹೊರಹೊಮ್ಮಿದೆ.
ಬ್ಯಾಡ್ಮಿಂಟನ್ ಅಂಗಳದಲ್ಲೇ ಹೃದಯಾಘಾತ:
ಭಾನುವಾರ ಸಂಜೆ ಜಪಾನ್‌ನ ಕಜುಮಾ ಕವಾನಾ ವಿರುದ್ಧದ ಸಿಂಗಲ್ಸ್ ಪಂದ್ಯದಲ್ಲಿ ಝಾಂಗ್ ಝಿಜಿ ಆಡುತ್ತಿದ್ದರು. ಮೊದಲ ಸುತ್ತಿನ ಪಂದ್ಯಾವಳಿ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಝಾಂಗ್ ಝಿಜಿ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ ಈ ವೇಳೆ ಮೈದಾನದಲ್ಲಿಯೇ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಬ್ಯಾಡ್ಮಿಂಟನ್ ಏಷ್ಯಾ ಮತ್ತು ಇಂಡೋನೇಷ್ಯಾದ ಬ್ಯಾಡ್ಮಿಂಟನ್ ಅಸೋಸಿಯೇಷನ್ (PBSI) ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Zimbabwe series; ಮತ್ತೆ ತಂಡದಲ್ಲಿ ಬದಲಾವಣೆ; ಟೀಂ ಇಂಡಿಯಾ ಸೇರಿದ ಮೂವರು ಯುವ ಆಟಗಾರರು
BREAKING: 17-year-old Chinese badminton player Zhang Zhijie has died of cardiac arrest after collapsing on the court during a tournament in Indonesia. pic.twitter.com/X5fg6GJVGH
— Wide Awake Media (@wideawake_media) July 1, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.