Viral: ಎಲ್ಲರೆದುರು ಮಿಂಚಬೇಕೆಂದು ಎಲ್ ಇಡಿ ಲೆಹೆಂಗಾ ಧರಿಸಿ ಮಂಟಪಕ್ಕೆ ಬಂದ ವಧು.!
Team Udayavani, Sep 7, 2023, 1:32 PM IST
ಕರಾಚಿ: ಪ್ರತಿಯೊಬ್ಬರಿಗೂ ತಮ್ಮ ಮದುವೆಯಲ್ಲಿ ಸುಂದರವಾಗಿ ಕಾಣಬೇಕೆನ್ನುವ ಆಸೆಗಳಿರುತ್ತವೆ. ಕೆಲವರಿಗೆ ಮದುವೆಯಲ್ಲಿ ತಾವು ಅಂದುಕೊಂಡ ಬಟ್ಟೆಯನ್ನು ಧರಿಸುವ ಕನಸಿರುತ್ತದೆ. ಆದರೆ ಇಲ್ಲೊಂದು ವಧು ಧರಿಸಿರುವ ಮದುವೆಯ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕ್ ಮೂಲದ ಯುವತಿ ರಿಹ್ಯಾಬ್ ಡೇನಿಯಲ್ ಎಂಬಾಕೆ ತನ್ನ ಮದುವೆ ಸಮಾರಂಭದಲ್ಲಿ ಎಲ್ ಇಡಿ ಲೈಟ್ ವುಳ್ಳ ಲೆಹೆಂಗಾವನ್ನು ಧರಿಸಿಕೊಂಡು ಮದುವೆ ಮಂಟಪಕ್ಕೆ ಬಂದಿರುವುದು ವೈರಲ್ ಆಗಿದೆ.
ರಿಹ್ಯಾಬ್ ಅವರು ಮದುವೆಯಾಗುವ ಗಂಡಿಗೆ ಅವರ ಪತ್ನಿ ಎಲ್ಲರ ಎದುರು ಮಿಂಚುವ ಹಾಗೆ ಕಾಣಬೇಕೆನ್ನುವ ಆಸೆ ಇರುತ್ತದೆ. ಆ ಕಾರಣದಿಂದ ರಿಹಾಬ್ ಅವರಿಗೆ ಪತಿ ವಿಶೇಷವಾದ ಎಲ್ ಇಡಿ ಲೈಟ್ ವುಳ್ಳ ಲೆಹೆಂಗಾವನ್ನು ವಿನ್ಯಾಸ ಮಾಡಿ ಉಡುಗೊರೆಯಾಗಿ ನೀಡುತ್ತಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ರಿಹ್ಯಾಬ್ ಅವರು ಬರೆದುಕೊಂಡಿದ್ದಾರೆ. “ನನ್ನ ಮೆಹೆಂದಿಗೆ ನನ್ನ ಸೂಪರ್ ಡೂಪರ್ ಪತಿಯಿಂದ ನನ್ನ ಉಡುಪನ್ನು ವಿನ್ಯಾಸಗೊಳಿಸಲಾಗಿದೆ. ಅವರು ತಮ್ಮ ದೊಡ್ಡ ದಿನದಂದು ತನ್ನ ವಧು ದೀಪಗಳಿಂದ ಪ್ರಕಾಶಮಾನವಾಗಿ ಬೆಳಗಬೇಕೆಂದು ಬಯಸಿದ್ದರು. ಆದ್ದರಿಂದ ಅವರು ಈ ಉಡುಗೆಯನ್ನು ನನಗೆ ನೀಡಿದ್ದಾರೆ. ಮೊದಲು ಜನ ನನ್ನನ್ನು ಗೇಲಿ ಮಾಡುತ್ತಾರೆ ಎಂದು ಕೆಲವರು ಹೇಳಿದ್ದರು. ಆದರೆ ನಾನು ಅದನ್ನು ಹೆಮ್ಮೆಯಿಂದ ಧರಿಸಿದ್ದೇನೆ. ತಮ್ಮ ವಧುವಿಗಾಗಿ ಇಂತಹ ಪ್ರಯತ್ನವನ್ನು ಯಾರೂ ಮಾಡಿಲ್ಲ” ಎಂದು ಅವರು ಪತಿಯೊಂದಿಗೆ ಮದುವೆ ಮಂಟಪಕ್ಕೆ ಬರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
“ಐಡಿಯಾ ಚೆನ್ನಾಗಿತ್ತು ಆದರೆ ಅದನ್ನು ಸರಿಯಾಗಿ ಮಾಡಿಲ್ಲ. ಅವರು ಹೊಳೆಯುವ ಬಟ್ಟೆಯನ್ನು ಅಥವಾ ಉತ್ತಮವಾಗಿ ವಿನ್ಯಾಸಗೊಳಿಸಿದ ಯಾವುದನ್ನಾದರೂ ಬಳಸಿದರೆ ಅದು ಉತ್ತಮವಾಗಿರುತ್ತಿತ್ತು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಅವರ ಪತಿ ಎಲೆಕ್ಟ್ರಿಷಿಯನ್ ಆಘಿರಬಹುದೆಂದು ಮತ್ತೊಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.