Missing Parrot: ಗಿಳಿ ಕಾಣೆಯಾಗಿದೆ… ಹುಡುಕಿ ಕೊಟ್ಟವರಿಗೆ 10 ಸಾವಿರ ಬಹುಮಾನ
Team Udayavani, Aug 3, 2023, 3:48 PM IST
ಮಧ್ಯಪ್ರದೇಶ: ಇತ್ತೀಚಿನ ದಿನಗಳಲ್ಲಿ ಜನರಿಗೆ ಪ್ರಾಣಿಗಳ ಮೇಲೆ ಮೋಹ ಹೆಚ್ಚಾಗತೊಡಗಿದೆ, ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪ್ರಾಣಿಗಳ ಮುದ್ದಾದ ವಿಡಿಯೋಗಳಿಂದ ಜನರ ಮನಸ್ಸು ಪರಿವರ್ತನೆ ಮಾಡಿರುವುದು ಆಗಿರಬಹುದು. ಹಾಗಾಗಿ ತಮ್ಮ ಮುದ್ದಿನ ಸಾಕು ಪ್ರಾಣಿಗಳಿಗಾಗಿ ಮನೆ ಮಂದಿ ಏನು ಬೇಕಾದರೂ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಅವುಗಳನ್ನು ಹಚ್ಚಿಕೊಂಡಿರುತ್ತಾರೆ.
ಇದಕ್ಕೆ ಪೂರಕ ಉದಾಹರಣೆಯೇ ಮಧ್ಯಪ್ರದೇಶದ ದಾಮೋಹ್ ನಲ್ಲಿ ಗಿಳಿ ಕಾಣೆಯಾಗಿರುವುದು. ಮನೆ ಮಾಲೀಕ ಮುದ್ದಾದ ಗಿಳಿಯೊಂದನ್ನು ಸಾಕಿದ್ದು ಇದೀಗ ಅದು ಕಾಣೆಯಾಗಿದೆ ಹಾಗಂತ ಮನೆ ಮಾಲೀಕ ವಿಚಾರ ಅಲ್ಲಿಗೆ ಬಿಡಲಿಲ್ಲ ಅದನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಅಲ್ಲದೆ ಹುಡುಕಿ ಕೊಟ್ಟವರಿಗೆ ೧೦ ಸಾವಿರ ನಗದು ಬಹುಮಾನ ನೀಡುವುದಾಗಿ ಹೇಳಿ ನಗರ ತುಂಬಾ ಪೋಸ್ಟರ್ ಅಂಟಿಸಿದ್ದಾರೆ.
ಮಧ್ಯಪ್ರದೇಶದ ದಾಮೋಹ್‌ನಲ್ಲಿ ಸಾಕು ಗಿಳಿಯೊಂದು ನಾಪತ್ತೆಯಾಗಿರುವ ಬಗ್ಗೆ ಮನನೊಂದಿರುವ ಗಿಳಿಯ ಮಾಲೀಕರು ನಗರದೆಲ್ಲೆಡೆ ಗಿಳಿಯ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಗಿಳಿಯನ್ನು ಹುಡುಕಿಕೊಟ್ಟವರಿಗೆ 10 ಸಾವಿರ ಬಹುಮಾನ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.
ದಾಮೋಹ್‌ನ ಸಿಟಿ ಕೊತ್ವಾಲಿ ಹಿಂಭಾಗದ ಇಂದ್ರ ಕಾಲೋನಿಯಲ್ಲಿ ವಾಸಿಸುವ ಸೋನಿ ಕುಟುಂಬ ಕಳೆದ ಎರಡು ವರ್ಷಗಳಿಂದ ಗಿಣಿಯೊಂದನ್ನು ಸಾಕುತ್ತಿದ್ದರು ಎಷ್ಟರ ಮಟ್ಟಿಗೆ ಅದು ಮನೆಮಂದಿಯನ್ನು ಹಚ್ಚಿಕೊಂಡಿತ್ತು ಎಂದರೆ ಅದೂ ಕೂಡಾ ಮನೆಯ ಸದಸ್ಯರಲ್ಲಿ ಒಬ್ಬರು ಎಂಬಂತೆ ಮನೆಮಂದಿಗೆ ಹೊಂದಿಕೊಂಡಿತ್ತು.
ವಾಕಿಂಗ್ ಹೋದಾಗ ಕಣ್ಮರೆ:
ಮನೆಯ ಯಜಮಾನ ವಾಕಿಂಗ್ ಹೋಗುವಾಗ ಪಂಜರದಲ್ಲಿದ್ದ ಗಿಳಿಯನ್ನು ಹೊರತೆಗೆದು ತನ್ನ ಹೆಗಲ ಮೇಲೆ ಕೂರಿಸಿ ರಸ್ತೆಯಲ್ಲಿ ವಾಕಿಂಗ್ ಮಾಡುವ ವೇಳೆ ಬೀದಿ ನಾಯಿಗಳು ಗಿಳಿಯನ್ನು ನೋಡಿ ಬೊಗಳಲು ಆರಂಭಿಸಿದೆ ಹೀಗೆ ಹೆದರಿ ಮರದ ಮೇಲೆ ಕೂತ ಗಿಳಿ ಸಂಜೆಯಾದರೂ ಮನೆಗೆ ಬರಲೇ ಇಲ್ಲ ಬಳಿಕ ಮನೆಯ ಯಜಮಾನ ಹೊರಗೆ ಹೋಗಿ ಹುಡುಕಿದಾಗ ಗಿಳಿ ಎಲ್ಲೂ ಕಾಣಲಿಲ್ಲ ಇದರಿಂದ ಮನನೊಂದ ಮನೆ ಮಾಲೀಕ ಹಾಗೂ ಮನೆಯ ಸದಸ್ಯರು ಗಿಳಿಗಾಗಿ ಊರೆಲ್ಲಾ ಹುಡುಕಿದರು ಆದರೆ ಗಿಳಿ ಮಾತ್ರ ಪತ್ತೆಯಾಗಲಿಲ್ಲ.
ಗಿಳಿಯ ಕೊರಗಿನಲ್ಲಿ ಊಟ ಬಿಟ್ಟ ಮನೆ ಮಂದಿ ಬಳಿಕ ಕಾಣೆಯಾಗಿರುವ ಗಿಳಿಯ ಫೋಟೋ ಒಂದನ್ನು ಪೋಸ್ಟರ್ ಮಾಡಿ ನಗರದ ಎಲ್ಲಾ ಕಡೆ ಅಂಟಿಸಿ ಗಿಳಿ ಹುಡುಕಿ ಕೊಡುವಂತೆ ಆಗ್ರಹಿಸಿದ್ದಾರೆ ಜೊತೆಗೆ ಗಿಳಿಯನ್ನು ಹುಡುಕಿ ಕೊಟ್ಟವರಿಗೆ ೧೦ ಸಾವಿರ ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ ವಾಹನದಲ್ಲಿ ಮೈಕ್ ಕಟ್ಟಿ ಗಿಳಿ ಕಾಣೆಯಾಗಿರುವ ಬಗ್ಗೆ ನಗರ ತುಂಬಾ ಪ್ರಚಾರ ಮಾಡಿ ಹುಡುಕುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಬಿರುಗಾಳಿ ಬೀಸುವ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ
Parrot Goes Missing, Madhya Pradesh Man Offers ₹ 10,000 Cash Reward https://t.co/8aqm25zDM7 pic.twitter.com/AfX5aBFKS7
— NDTV (@ndtv) August 2, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.