10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Team Udayavani, Jan 13, 2025, 10:21 AM IST
ಜೈಪುರ: ನಿಗದಿತ ನಿಲ್ದಾಣದಲ್ಲಿ ಇಳಿಯಬೇಕಾದ ನಿವೃತ್ತ ಅಧಿಕಾರಿಯೊಬ್ಬರು ಮುಂದಿನ ನಿಲ್ದಾಣದಲ್ಲಿ ಇಳಿದ ಸಂದರ್ಭದಲ್ಲಿ ಬಸ್ ಕಂಡಕ್ಟರ್ ಹೆಚ್ಚುವರಿಯಾಗಿ 10 ರೂ. ಕೇಳಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಈ ಘಟನೆ ಕಳೆದ ಶುಕ್ರವಾರ(ಜ.10) ನಡೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ ಅಲ್ಲದೆ ಘಟನೆಗೆ ಸಂಬಂಧಿಸಿ ಬಸ್ ಕಂಡಕ್ಟರ್ ನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ:
ನಿವೃತ್ತ ಅಧಿಕಾರಿ ಆರ್ಎಲ್ ಮೀನಾ ಅವರು ಆಗ್ರಾ ರಸ್ತೆಯಲ್ಲಿರುವ ಕನೋಟಾ ಬಸ್ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಮೀನಾ ಅವರಿಗೆ ಬಸ್ ನಿಲ್ದಾಣದ ಅರಿವಿಲ್ಲದೆ ಇಳಿಯಲಿಲ್ಲ ಬದಲಾಗಿ ಮುಂದಿನ ನಿಲ್ದಾಣವಾದ ನೈಲಾದಲ್ಲಿ ಇಳಿಯಲು ಯತ್ನಿಸಿದ್ದಾರೆ ಈ ವೇಳೆ ಬಸ್ ಕಂಡಕ್ಟರ್ ಹೆಚ್ಚುವರಿ 10 ರೂ. ನೀಡುವಂತೆ ಹೇಳಿದ್ದಾರೆ ಇದಕ್ಕೆ ಮೀನಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಜೊತೆಗೆ ಕಂಡಕ್ಟರ್ ನಿವೃತ್ತ ಅಧಿಕಾರಿಯನ್ನು ಮೊದಲು ತಳ್ಳಿದ್ದಾರೆ ಇದರಿಂದ ಕೋಪಗೊಂಡ ನಿವೃತ್ತ ಅಧಿಕಾರಿ ಕಂಡಕ್ಟರ್ ಗೆ ಕಪಾಳಮೋಕ್ಷ ಮಾಡಿದ್ದಾರೆ ಇದರಿಂದ ಸಿಟ್ಟಿಗೆದ್ದ ಕಂಡಕ್ಟರ್ ನಿವೃತ್ತ ಅಧಿಕಾರಿಯ ಮೇಲೆ ಮನಬಂದಂತೆ ಥಳಿಸಿದ್ದಾರೆ.
View this post on Instagram
ಇದಾದ ಒಂದು ದಿನದ ಬಳಿಕ ಅಂದರೆ ಶನಿವಾರ(ಜ.11) ನಿವೃತ್ತ ಅಧಿಕಾರಿ ಕನೋಟಾ ಪೊಲೀಸ್ ಠಾಣೆಯಲ್ಲಿ ಬಸ್ ಕಂಡಕ್ಟರ್ ಘನಶ್ಯಾಮ್ ಶರ್ಮಾ ವಿರುದ್ಧ ದೂರು ನೀಡಿದ್ದಾರೆ, ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ಕಂಡಕ್ಟರ್ ತಪ್ಪು ಎಸಗಿರುವುದು ದೃಢವಾಗಿದೆ ಅಲ್ಲದೆ ಘಟನೆಗೆ ಸಂಬಂಧಿಸಿ ಕರ್ತವ್ಯದ ವೇಳೆ ದುರ್ವರ್ತನೆ ತೋರಿದ ಆರೋಪದ ಮೇಲೆ ಜೈಪುರ ಸಿಟಿ ಟ್ರಾನ್ಸ್ಪೋರ್ಟ್ ಸರ್ವಿಸಸ್ ಲಿಮಿಟೆಡ್ ಆರೋಪಿ ಕಂಡಕ್ಟರ್ನನ್ನು ಅಮಾನತುಗೊಳಿಸಿದೆ.
ಇದನ್ನೂ ಓದಿ: Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
UP Government; ಹೆಲ್ಮೆಟ್ ಹಾಕದಿದ್ದರೆ ಪೆಟ್ರೋಲ್ ಇಲ್ಲ: ಉತ್ತರ ಪ್ರದೇಶ ಸರಕಾರ ಆದೇಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.