Video: ತ್ರಿವರ್ಣ ಧ್ವಜ ಹಿಡಿಯುತ್ತಲೇ ಹೃದಯಾಘಾತವಾಗಿ ವೇದಿಕೆಯಲ್ಲಿ ಕುಸಿದು ಬಿದ್ದ ವ್ಯಕ್ತಿ
Team Udayavani, Jun 1, 2024, 4:24 PM IST
ಇಂದೋರ್: ದೇಶಭಕ್ತಿ ಗೀತೆಗೆ ರಾಷ್ಟ್ರ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದುಬಿದ್ದು ಯೋಧನ ಧಿರಿಸು ಧರಿಸಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಇಂದೋರ್‌ನಲ್ಲಿ ಶುಕ್ರವಾರ(ಮೇ.31 ರಂದು) ನಡೆದಿದೆ.
ಬಲ್ವಿಂದರ್ ಸಿಂಗ್ ಛಾಬ್ರಾ ಮೃತ ವ್ಯಕ್ತಿ.
ನಗರದ ಫುಟಿ ಕೋಠಿ ಪ್ರದೇಶದ ಅಗ್ರಸೇನ್ ಧಾಮ್‌ನಲ್ಲಿ ಆಸ್ತಾ ಯೋಗ ಕ್ರಾಂತಿ ಅಭಿಯಾನ ಎಂಬ ಗುಂಪಿನಿಂದ ಉಚಿತ ಯೋಗ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಲ್ವಿಂದರ್ ಅವರನ್ನು ಕರೆಯಲಾಗಿತ್ತು. ಬಲ್ವಿಂದರ್ ಹಲವು ಕಾರ್ಯಕ್ರಮಗಳಿಗೆ ಸಾಂಸ್ಕೃತಿಕವಾಗಿ ಮನರಂಜನೆ ನೀಡಲು ಹೋಗುತ್ತಾರೆ. ಹಾಗಾಗಿ ಈ ಯೋಗ ಶಿಬಿರಕ್ಕೆ ಅವರನ್ನು ಕರೆಯಲಾಗಿತ್ತು ಎಂದು ವರದಿ ತಿಳಿಸಿದೆ.
ವೇದಿಕೆಯಲ್ಲಿ ಬಲ್ವಿಂದರ್ ಯೋಧನ ಸಮವಸ್ತ್ರವನ್ನು ಧರಿಸಿ ದೇಶಭಕ್ತಿ ಗೀತೆ ‘ಮಾ ತುಜೆ ಸಲಾಮ್’ ಹಾಡಿಗೆ ರಾಷ್ಟ್ರ ಧ್ವಜವನ್ನು ಹಿಡಿದು ನೆರೆದಿದ್ದ ಜನರತ್ತ ಕೈ ಬೀಸುತ್ತಿದ್ದರು. ದೇಶ ಭಕ್ತಿಯ ಹಾಡಿಗೆ ನೃತ್ಯ ಮಾಡುತ್ತಿದ್ದ ಬಲ್ವಿಂದರ್ ಇದ್ದಕ್ಕಿದ್ದಂತೆ ಸ್ವಲ್ಪ ಕುಸಿದು ಬೀಳುವಂತೆ ಆಗಿದ್ದಾರೆ.
ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿಯುತ್ತಲೇ ಬಲ್ವಿಂದರ್ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಆದರೆ ಅವರು ಕುಸಿದು ಬಿದ್ದಿರುವುದು ನೃತ್ಯದ ಒಂದು ಭಾಗವೆಂದುಕೊಂಡಿದ್ದ ಅಲ್ಲಿರುವ ಜನರು ಚಪ್ಪಾಳೆಯನ್ನು ತಟ್ಟುತ್ತಲೇ ಇದ್ದರು.
ಆದರೆ ಇದಾದ ಕೆಲ ಸಮಯದ ಬಳಿಕ ಬಲ್ವಿಂದರ್ ಅವರಿಗೆ ಹೃದಯಾಘಾತವಾಗಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಬಲ್ವಿಂದರ್ ಈ ಹಿಂದೆ 2008 ರಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು.
Video Shows Retired Soldier Dancing With Tricolour on Patriotic Song Dies of Heart Attack in Indore#ViralVideo #SoldierDiesOfHeartAttack #HeartAttack #Indore #MadhyaPradesh #SoldierDiesOfHeartAttackhttps://t.co/kxIXi51UUF pic.twitter.com/xYuO0wd6vv
— Republic (@republic) May 31, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ
Viral Video: ಮದ್ಯ ಸೇವಿಸಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜಿಸಿದ ಪೊಲೀಸ್ ಪೇದೆ.!
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.