ಒಂದೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಬಂತು 11.41 ಕೋಟಿ ರೂ. ಕರೆಂಟ್ ಬಿಲ್.!
Team Udayavani, Feb 14, 2023, 10:32 AM IST
ಹೈದರಾಬಾದ್: ಸಾಮಾನ್ಯವಾಗಿ ಒಂದು ಮನೆಗಳಿಗೆ ಎಷ್ಟು ಕರೆಂಟ್ ಬಿಲ್ ಬರಬಹುದು. 1 ಸಾವಿರ ಹೆಚ್ಚೆಂದೆರೆ ಒಂದು 500 ರೂ. ಹೆಚ್ಚು. ಅದಕ್ಕಿಂತ ಹೆಚ್ಚು ಕರೆಂಟ್ ಬಿಲ್ ಬರುವುದು ಕಡಿಮೆ. ಆದರೆ ತೆಲಂಗಾಣದ ಗ್ರಾಮ ಪಂಚಾಯತ್ ವೊಂದಕ್ಕೆ ಬಂದಿರುವ ಒಂದು ತಿಂಗಳ ಕರೆಂಟ್ ಬಿಲ್ ನ ಮೊತ್ತ ಕೇಳಿದರೆ ಒಮ್ಮೆ ಬೆಚ್ಚಿ ಬೀಳುವುದು ಗ್ಯಾರೆಂಟಿ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಕೊತ್ತಪಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಕಳೆದ ತಿಂಗಳ ಅಂದರೆ ಜನವರಿ ತಿಂಗಳ ಕರೆಂಟ್ ಬಿಲ್ ನ ಮೊತ್ತ ನೋಡಿ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಒಂದು ತಿಂಗಳ ಕರೆಂಟ್ ಬಿಲ್ ಒಂದೆರೆಡು ಸಾವಿರ ರೂ.ವಲ್ಲ ಬರೋಬ್ಬರಿ 11.41 ಕೋಟಿ ರೂ.
ಇದನ್ನೂ ಓದಿ: ಕಾರು ತಡೆಯಲು ಯತ್ನಿಸಿದ ಟ್ರಾಫಿಕ್ ಪೇದೆಯನ್ನೇ ಎಳೆದೊಯ್ದ ಚಾಲಕ: ವಿಡಿಯೋ ವೈರಲ್
ಇಷ್ಟು ದೊಡ್ಡ ಪ್ರಮಾಣದ ಕರೆಂಟ್ ಬಿಲ್ ಮೊತ್ತ ನೋಡಿ ಗ್ರಾ.ಪಂ ಸದಸ್ಯರು ಅಚ್ಚರಿಗೊಂಡಿದ್ದು, ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪರಿಶೀಲಿಸಿದಾಗ ಇದು ತಾಂತ್ರಿಕ ದೋಷದಿಂದ ಉಂಟಾದ ಎಡವಟ್ಟು ಕ್ಷಮಿಸಿ ಎಂದಿದ್ದಾರೆ.
ಈ ವಿಚಾರ ತಿಳಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.