Stolen: ಕಂಪೆನಿಯವರ ಸೋಗಿನಲ್ಲಿ ಬಂದು ಮೊಬೈಲ್ ಟವರನ್ನೇ ಕಳ್ಳತನ ಮಾಡಿಕೊಂಡು ಹೋದ ಗ್ಯಾಂಗ್!
Team Udayavani, Apr 15, 2023, 11:29 AM IST
ಪಾಟ್ನಾ: ಹಣವನ್ನು ಕಳ್ಳತನ ಮಾಡಿಕೊಂಡು ಹೋಗುವುದನ್ನು ಕೇಳಿದ್ದೇವೆ. ಎಟಿಎಂ ಮೆಷಿನ್ ನನ್ನೇ ಎತ್ತಿಕೊಂಡು ಹೋಗುವ ಘಟನೆಗಳನ್ನೂ ಕೇಳಿದ್ದೇವೆ. ಆದರೆ ಇಲ್ಲೊಂದು ಕಳ್ಳರ ಗ್ಯಾಂಗ್ ಇಡೀ ಮೊಬೈಲ್ ಟವರ್ ನ್ನೇ ಕಳ್ಳತನ ಮಾಡಿ ಹೋಗಿದ್ದಾರೆ.!
ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಕಳ್ಳರು ಸಂಪೂರ್ಣ ಮೊಬೈಲ್ ಟವರನ್ನೇ ಕದ್ದಿದ್ದಾರೆ ಎಂದು ಪೊಲೀಸರು ಶುಕ್ರವಾರ (ಏಪ್ರಿಲ್ 14 ರಂದು) ತಿಳಿಸಿದ್ದಾರೆ.
ನಗರದ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರಮಜೀವಿ ನಗರದಲ್ಲಿರುವ ಮನೀಶಾ ಕುಮಾರಿ ಎಂಬುವವರ ಮನೆಯ ಬಳಿ ಜಿಟಿಎಎಲ್ ಕಂಪನಿಗೆ ಸೇರಿದ ಮೊಬೈಲ್ ಟವರ್ ಅಳವಡಿಸಲಾಗಿತ್ತು. ಕಳೆದ ಕೆಲ ಸಮಯದ ಹಿಂದೆ ಇದನ್ನು ಆಳವಡಿಸಲಾಗಿತ್ತು.
ಇದನ್ನೂ ಓದಿ: Juhu to Andheri: ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನು ಬೆನ್ನಟ್ಟಿ ಸೆರೆಹಿಡಿದ ಯುವತಿ…
ಜಿಟಿಎಎಲ್ ಕಂಪನಿಯ ಸಿಬ್ಬಂದಿಗಳು ದರ ಪರಿಶೀಲನೆಗೆ ಇತ್ತೀಚೆಗೆ ಬಂದಿದ್ದಾರೆ. ಆದರೆ ಅಲ್ಲಿದ್ದ ಮೊಬೈಲ್ ಟವರ್ ಇಲ್ಲದ್ದನ್ನು ನೋಡಿ ಒಮ್ಮೆ ಶಾಕ್ ಆಗಿದ್ದಾರೆ. ಕಂಪನಿಯ ಅಧಿಕಾರಿ ಶಹನವಾಜ್ ಅನ್ವರ್ ಜಿಲ್ಲೆಯ ಸದರ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡು ಮನೀಶಾ ಕುಮಾರಿ ಅವರ ಬಳಿ ವಿಚಾರಣೆ ನಡೆಸಿದ್ದಾರೆ. ಆಗ ಅವರು ಕಳೆದ ಕೆಲ ಸಮಯದ ಹಿಂದೆ ಕೆಲ ಜನರು ಟವರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾವು ಟವರ್ ಕಂಪೆನಿ ಅವರೆಂದು ತೆಗೆದಿದ್ದಾರೆ. ಆ ಬಳಿಕ ಅದನ್ನು ಪಿಕ್ ಅಪ್ ವಾಹನದಲ್ಲಿ ಅವರು ಹಾಕಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಉಪಕರಣ, ಜನರೇಟರ್ ಸೆಟ್, ಶೆಲ್ಟರ್ ಮತ್ತು ಸ್ಟೆಬಿಲೈಸರ್ ಸಹ ಸ್ಥಳದಿಂದ ಕಾಣೆಯಾಗಿದೆ. ಇವೆಲ್ಲರ ಒಟ್ಟು ಮೌಲ್ಯ ಸುಮಾರು 4.5 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೊಲೀಸರ ತನಿಖೆ ಮುಂದುವೆರೆದಿದೆ.
ಬಿಹಾರದಲ್ಲಿ ಮೊಬೈಲ್ ಟವರ್ ಕಳ್ಳತನವಾಗಿರುವ ಘಟನೆ ನಡೆದಿರುವುದು ಇದು ಎರಡನೇ ಬಾರಿಗೆ. ಈ ಹಿಂದೆಯೂ ಇದೇ ಮಾದರಿಯಲ್ಲಿ ಪಾಟ್ನಾದ ಸಬ್ಜಿ ಬಾಗ್ ಪ್ರದೇಶದಲ್ಲಿ ಮೊಬೈಲ್ ಟವರ್ ಕಳ್ಳತನವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.