ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್
ಶಂಕು ಸ್ಥಾಪನೆಗೆ ಮೆರವಣಿಗೆಯಲ್ಲಿ ಬಂದು, ಅನ್ನದಾನಕ್ಕೆ ಹಣ ನೀಡಿದ ಮುಸ್ಲಿಮರು
Team Udayavani, May 29, 2024, 12:53 PM IST
ತಮಿಳುನಾಡು: ನಮ್ಮದು ಶಾಂತಿ ಸಹಬಾಳ್ವೆಯ ಭಾರತ. ಆದರೆ ಇತ್ತೀಚಿನ ವರ್ಷಗಳಲ್ಲಿ ಸೌಹಾರ್ದತೆ ಎನ್ನುವುದು ಮರೆಯಾಗುತ್ತಾ ಬರುತ್ತಿದೆ. ಚುನಾವಣೆ, ರಾಜಕೀಯ ನಡುವೆ ಧರ್ಮ ಧರ್ಮಗಳ ನಡುವಿನ ಸಾಮರಸ್ಯ ಮರೀಚಿಕೆ ಆಗುತ್ತಾ ಬರುತ್ತಿದೆ ಎನ್ನುವುದು ಬೇಸರದ ಸಂಗತಿ.
ಹಿಂದೂವಾಗಲಿ ಅಥವಾ ಮುಸ್ಲಿಂ ಆಗಲಿ ನಾವೆಲ್ಲ ಸಹೋದರರಂತೆ ಬಾಳಿದರೆ ಸಾಮರಸ್ಯ, ಶಾಂತಿಯಿಂದ ಬದುಕಬಹುದು. ಎಲ್ಲೋ ಒಂದು ಕಡೆ ಯಾವುದೋ ಒಂದು ಕೋಮಿನ ಜನ ಮಾಡುವ ತಪ್ಪಿಗೆ ಇಡೀ ಸಮುದಾಯವನ್ನೇ ದ್ವೇಷದ ದೃಷ್ಟಿಯಿಂದ ನೋಡುವ ಇಂದಿನ ಸಮಾಜದಲ್ಲಿ ಸಹೋದರತ್ವ ಎನ್ನುವುದು ಮಾತಿಗಷ್ಟೇ ಸೀಮಿತವಾಗಿ ಬಿಟ್ಟಿದೆ.
ಆದರೆ ತಮಿಳುನಾಡಿನಲ್ಲಾದ ಈ ಹಿಂದೂ – ಮುಸ್ಲಿಂ ಬಾಂಧವ್ಯದ ಈ ಘಟನೆ ಇಂದಿನ ಸಮಾಜಕ್ಕೆ ಉದಾಹರಣೆಯಾಗಿ ನಿಲ್ಲುವಂಥದ್ದು.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಪಡಿಯೂರು ಬಳಿಯ ಒಟ್ಟಪಾಳ್ಯಂ ಪ್ರದೇಶದಲ್ಲಿ ಸುಮಾರು 300 ಕುಟುಂಬಗಳಿವೆ. ಹಿಂದೂ – ಮುಸ್ಲಿಂ ಜೊತೆಯಾಗಿದ್ದರೂ ಈ ಪ್ರದೇಶದಲ್ಲಿ ಒಂದು ಮಸೀದಿಯಿದೆ. ಆದರೆ ದೇವಸ್ಥಾನವಿಲ್ಲ.
ರೋಸ್ ಗಾರ್ಡನ್ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರೇ ವಾಸವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಇಲ್ಲಿ ಕೆಲ ಹಿಂದೂ ಕುಟುಂಬಗಳು ಬಂದು ನೆಲೆಕಂಡಿದೆ. ಈ ಕುಟುಂಬಗಳ ಮನೆಯಲ್ಲಿ ದೇವರ ಫೋಟೋವಿದೆ ಹೊರತು, ಪೂಜಿಸಲು ದೇವಾಲಯ ಈ ಪ್ರದೇಶದಲ್ಲಿರಲಿಲ್ಲ. ಈ ಕಾರಣದಿಂದ ಹಿಂದೂ ಕುಟುಂಬಗಳು ಜೊತೆಯಾಗಿ ದೇವಸ್ಥಾನವನ್ನು ನಿರ್ಮಿಸಲು ಯೋಜನೆಯೊಂದನ್ನು ಹಾಕಿಕೊಂಡು ಸೂಕ್ತ ಜಾಗವನ್ನು ಹುಡುಕಲು ಪ್ರಾರಂಭಿಸುತ್ತಾರೆ.
ಆದರೆ ಹಿಂದೂ ಕುಟುಂಬಗಳಿಗೆ ಗಣೇಶ ದೇವಸ್ಥಾನವನ್ನು ಕಟ್ಟಲು ಸೂಕ್ತವಾದ ಜಾಗ ಸಿಕ್ಕಿರಲಿಲ್ಲ. 20 ವರ್ಷಗಳ ಹಿಂದೆ ಮುಸ್ಲಿಂ ಕುಟುಂಬವೊಂದು ಜಾಗವನ್ನು ಖರೀದಿ ಮಾಡಿತ್ತು. ಆ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಖಾಲಿಯಾಗಿತ್ತು. 10 ಹಿಂದೂ ನಿವಾಸಿಗಳು ರೋಸ್ ಗಾರ್ಡನ್ ಮುಸ್ಲಿಂ ಜಮಾತ್ ಬಳಿ ತಮಗೆ ಆ ಲೇಔಟ್ ಜಾಗದಲ್ಲಿ ಒಂದು ಭೂಮಿ ದೇವಸ್ಥಾನ ನಿರ್ಮಾಣಕ್ಕೆ ನೀಡಿಯೆಂದು ಮನವಿಯನ್ನು ಮಾಡಿದ್ದಾರೆ.
ಹಿಂದೂಗಳ ಮನವಿಯನ್ನು ಜಮಾತ್ ನಲ್ಲಿ ಒಪ್ಪಿ, ಊರಿನ ಮುಸ್ಲಿಮರು ಗಣೇಶ ದೇವಸ್ಥಾನ ನಿರ್ಮಿಸಲು 6 ಲಕ್ಷ ಮೌಲ್ಯದ 3 ಸೆಂಟ್ಸ್ ಭೂಮಿಯನ್ನು ಹಿಂದೂಗಳಿಗೆ ದಾನವಾಗಿ ನೀಡಿದ್ದಾರೆ.
ಭಾನುವಾರ(ಮೇ.26 ರಂದು) ದೇವಸ್ಥಾನದ ಶಂಕು ಸ್ಥಾಪನೆ ನೆರವೇರಿದೆ. ಈ ಸಮಾರಂಭಕ್ಕೆ ಮುಸ್ಲಿಮರು ಮೆರವಣಿಗೆ ಮೂಲಕ ಹಣ್ಣು ಹಂಪಲು ಹಾಗೂ ಇತರೆ ಅಗತ್ಯ ಸಾಮಾಗ್ರಿಗಳನ್ನು ಹಿಂದೂಗಳ ಗಣೇಶ ದೇವಸ್ಥಾನಕ್ಕೆ ನೀಡಿದ್ದಾರೆ. ಹಿಂದೂಗಳು ಶಂಕುಸ್ಥಾಪನೆಗೆ ಬಂದ ಮುಸ್ಲಿಮರನ್ನು ಹೂ ಹಾರ ಹಾಕಿ ಸ್ವಾಗತಿಸಿದ್ದಾರೆ. ಇದಲ್ಲದೆ ಶಂಕು ಸ್ಥಾಪನೆಯ ಅನ್ನ ಪ್ರಸಾದವನ್ನು ಮುಸ್ಲಿಂಮರು ಜೊತೆಯಾಗಿ ಸವಿದಿದ್ದಾರೆ.
ಸ್ಥಳೀಯರು ಮತ್ತು ಪಂಚಾಯತ್ ಅಧ್ಯಕ್ಷರು ದೇಣಿಗೆ ಮೂಲಕ 10 ಲಕ್ಷ ರೂ. ನೀಡಿದ್ದಾರೆ. ಕುಂಭಾಭಿಷೇಕ ಸಮಾರಂಭದಲ್ಲಿ ಮುಸ್ಲಿಂ ಬಾಂಧವರು ಅನ್ನದಾನಕ್ಕೆ 30,000 ರೂಪಾಯಿಗಳನ್ನು ನೀಡಿದ್ದಾರೆ.
ಹಿಂದೂ – ಮುಸ್ಲಿಮರ ನಡುವಿನ ಸಹೋದರತ್ವದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
🚨 A group of Muslims donated land for the construction of Vinayagar temple at Oottapalayam, Tamil Nadu. 🤝 pic.twitter.com/hFqzhxuwDS
— Indian Tech & Infra (@IndianTechGuide) May 28, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.