Instagram reel ಹುಚ್ಚಾಟ ; 100 ಅಡಿಯಿಂದ ನೀರಿಗೆ ಧುಮುಕಿದ ಯುವಕನ ಅಂತ್ಯ!
ಬಿದ್ದ ಕೂಡಲೇ ಈಜಲು ಆರಂಭಿಸಿದನಾದರೂ... ವಿಡಿಯೋ ವೈರಲ್
Team Udayavani, May 22, 2024, 8:15 AM IST
ಸಾಹಿಬ್‌ಗಂಜ್(ಜಾರ್ಖಂಡ್): ಜಿಲ್ಲೆಯಲ್ಲಿ 18 ವರ್ಷದ ಯುವಕನೊಬ್ಬ ಇನ್‌ಸ್ಟಾಗ್ರಾಮ್ ರೀಲ್ ಮಾಡಲು 100 ಅಡಿ ಎತ್ತರದಿಂದ ಆಳವಾದ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಪ್ರಾಣಕಳೆದುಕೊಂಡಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ತೌಸಿಫ್ ಎಂಬಾತ ಸೋಮವಾರ ಸಂಜೆ ಹುಚ್ಚು ಸಾಹಸಕ್ಕಿಳಿದು ಸುಮಾರು 100 ಅಡಿ ಎತ್ತರದಿಂದ ಕ್ವಾರಿ ಕೆರೆಗೆ ಹಾರಿದ್ದಾನೆ. ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಆತನ ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ.
ಸ್ಥಳೀಯರು ನಮಗೆ ವಿಚಾರ ತಿಳಿಸಿದರು. ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಬಳಿಕ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕ ನೀರಿಗೆ ಜಿಗಿದಿರುವುದನ್ನು ಆತನ ಸ್ನೇಹಿತ ರೆಕಾರ್ಡ್ ಮಾಡಿದ್ದಾರೆ. ನೀರಿಗೆ ಬಿದ್ದ ಕೂಡಲೇ ಈಜಲು ಆರಂಭಿಸಿದನಾದರೂ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.