UP: ಆಹಾರ ನೀಡುತ್ತಿದ್ದವನ ಅಂತಿಮ ವಿಧಿಗಳಲ್ಲಿ ಪಾಲ್ಗೊಂಡ ಕೋತಿ: ವೈರಲ್ ವಿಡಿಯೋ
40 ಕಿ.ಮೀ ಅಂತಿಮಯಾತ್ರೆಯಲ್ಲಿ ಸಾಗಿ ಬಂದು ಕಣ್ಣೀರು ಸುರಿಸಿತು
Team Udayavani, Oct 13, 2023, 6:52 PM IST
ಮ್ರೋಹಾ: ‘ಅನ್ನದಾತೋ ಸುಖೀಭವ’ ಎನ್ನುವ ಆಶಯವನ್ನು ಮನುಷ್ಯನಿಗಿಂತಲೂ ಹೆಚ್ಚಾಗಿ ಪ್ರಾಣಿಗಳು ತಮ್ಮ ಜೀವನದಲ್ಲಿ ಅನ್ವಯಿಸಿಕೊಂಡಿವೆ ಎನ್ನುವುದಕ್ಕೆ ಸಾಕ್ಷಿ ಈ ಘಟನೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಿರಂತರವಾಗಿ ಕೋತಿಯೊಂದಕ್ಕೆ ಆಹಾರವನ್ನು ನೀಡುತ್ತಿದ್ದ ರಾಮಕುನ್ವರ್ ಸಿಂಗ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.
ಎಲ್ಲಾ ಅಂತಿಮ ವಿಧಿವಿಧಾನಗಳು ಮತ್ತು ಕಾರ್ಯಗಳ ಸಮಯದಲ್ಲಿ ವ್ಯಕ್ತಿಯ ಮೃತದೇಹದ ಪಕ್ಕದಲ್ಲಿದ್ದ ಕೋತಿಯು ಅಂತಿಮ ನಮನ ಸಲ್ಲಿಸಿದ್ದು ಎಲ್ಲರ ಮನಕಲುಕಿತು. ಮೃತನ ಕುಟುಂಬದೊಂದಿಗೆ ಮೃತದೇಹದ ಪಕ್ಕದಲ್ಲಿ ಕುಳಿತಿದ್ದ ಕೋತಿಯು ದುಃಖದಿಂದ ಅಳುತ್ತಿತ್ತು. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
इससे बड़ी निःस्वार्थ प्रेम की मिसाल क्या हो सकती है. एक व्यक्ति रोज़ इस बन्दर को खाना खिलाता था. उस व्यक्ति की मृत्यु पर ये बन्दर बिलख-बिलख कर रोया. घर से घाट तक के सारे संस्कारों में शामिल रहा. ये वीडियो अमरोहा के थाना डिडौली जोया कस्बे का बताया जा रहा है. #viralvideo pic.twitter.com/M13afMIpWf
— Rana Yashwant (@RanaYashwant1) October 12, 2023
ಶವವನ್ನು ಅಂತ್ಯಕ್ರಿಯೆಯ ಸ್ಥಳಕ್ಕೆ ಸಾಗಿಸುವಾಗ ಅದನ್ನು ಒಂಟಿಯಾಗಿ ಬಿಡಲು ನಿರಾಕರಿಸಿದ ಕೋತಿ ಜತೆಯಲ್ಲೇ ಬಂದಿದೆ. ಸುಮಾರು 40 ಕಿ.ಮೀ ಪ್ರಯಾಣಿಸಿದೆ. ಕಳೆದ ಎರಡು ತಿಂಗಳಿನಿಂದ ಸಿಂಗ್ ಕೋತಿಗೆ ನಿತ್ಯವೂ ಎಂಬಂತೆ ಬ್ರೆಡ್ ತಿನ್ನಿಸುತ್ತಿದ್ದರು. ಪ್ರತಿನಿತ್ಯ ಪರಸ್ಪರ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಮಂಗಳವಾರ ಬೆಳಗ್ಗೆ ಸಿಂಗ್ ನಿಧನ ಹೊಂದಿದ ಬಳಿಕ ಕೋತಿ ಎಂದಿನಂತೆ ಸ್ಥಳಕ್ಕೆ ಭೇಟಿ ನೀಡಿದಾಗ ಆಘಾತಕಾರಿ ಸುದ್ದಿ ತಿಳಿದು ಕಣ್ಣೀರು ಹಾಕಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಚಿತೆಯ ಬಳಿ ಬಹಳ ಹೊತ್ತು ಕಾದ ಕೋತಿ ಅಂತ್ಯಕ್ರಿಯೆಯ ಎಲ್ಲಾ ವಿಧಿವಿಧಾನಗಳಲ್ಲಿ ಭಾಗವಹಿಸಿತು. ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಪಶುಗಳ ಪ್ರೀತಿ ಮತ್ತು ನಿಷ್ಠೆಗೆ ಈ ಘಟನೆ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.