20 ಜೋಡಿಗಳನ್ನು ಒಂದುಗೂಡಿಸಿದ ಪೊಲೀಸರು
Team Udayavani, Feb 16, 2023, 9:00 PM IST
ದಾಂಪತ್ಯದಲ್ಲಿ ಕಲಹ ಸಾಮಾನ್ಯ. ಅದೆಲ್ಲವನ್ನೂ ದಾಟಿ, ಅರಿತು-ಬೆರೆತು ಬಾಳಿದರೆ ಸ್ವರ್ಗಸುಖ ಎನ್ನುವ ಮಾತು ಸರ್ವಕಾಲಿಕ ಸತ್ಯ. ಆ ಸತ್ಯವನ್ನು 20 ಜೋಡಿಗಳಿಗೆ ಅರ್ಥಸಿ, 20 ಕುಟುಂಬವನ್ನು ಒಂದುಗೂಡಿಸಿ, ಅರ್ಥಪೂರ್ಣವಾಗಿ ಪ್ರೇಮಿಗಳ ದಿನಾಚರಣೆ ಆಚರಿಸಲು ಲುಧಿಯಾನ ಪೊಲೀಸರು ಕಾರಣೀಕರ್ತರಾಗಿದ್ದಾರೆ.
ಹೌದು ! “ಪೊಲೀಸ್ ವಿತ್ ಎ ಹಾರ್ಟ್’ ಎನ್ನುವ ಉಪಕ್ರಮದೊಂದಿಗೆ ಸಣ್ಣಪುಟ್ಟ ಕಲಹಗಳಿಂದ ಬೇರಾಗಲು ಇಚ್ಛಿಸಿದ್ದ 20 ಜೋಡಿಗಳಿಗೆ ಪೊಲೀಸರು ಫೆ.14ರಂದು ಕೌನ್ಸಿಲಿಂಗ್ ಕೊಡಿಸಿದ್ದಾರೆ. ಅಲ್ಲದೆ, ದಂಪತಿಗಳ ನಡುವಿನ ವೈಮನಸ್ಸು ಸರಿಪಡಿಸಿ, ಒಟ್ಟಿಗೆ ಸಮಯ ಕಳೆಯಲು ಮಲ್ಟಿಪ್ಲೆಕ್ಸ್ ಥಿಯೇಟರ್ನಲ್ಲಿ ಉಚಿತವಾಗಿ ಸಿನಿಮಾ ಟಿಕೆಟ್ ಕೂಡ ನೀಡಿದ್ದಾರೆ.
ದಂಪತಿಗಳನ್ನು ಒಂದು ಮಾಡುವ ಕಾರ್ಯಕ್ಕೆ ಮಲ್ಟಿಪ್ಲೆಕ್ಸ್ ಕೂಡ ಸಹಕರಿಸಿದ್ದು, ಪ್ರೇಮಿಗಳ ದಿನದ ಪೊಲೀಸರ ವಿನೂತನ ಆಚರಣೆ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ, ನೆಟ್ಟಿಗರ ಪ್ರಶಂಸೆಗೂ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.