Video: ಜಿಮ್ನಲ್ಲಿ ಭಾರ ಎತ್ತಲು ಹೋಗಿ ಕುತ್ತಿಗೆ ಮುರಿತ; ಯುವ ಜಿಮ್ ಟ್ರೈನರ್ ಮೃತ್ಯು
Team Udayavani, Jul 23, 2023, 1:08 PM IST
ಬಾಲಿ (ಇಂಡೋನೇಷ್ಯಾ): ಜಿಮ್ನಲ್ಲಿ ಭಾರ ಎತ್ತುವಾಗ ಕುತ್ತಿಗೆ ಮುರಿದು ಫಿಟ್ನೆಸ್ ಟ್ರೈನರ್ ಯೊಬ್ಬರು ಮೃತಪಟ್ಟಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜು.15 ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇಂಡೋನೇಷ್ಯಾದ 33 ವರ್ಷದ ಫಿಟ್ನೆಸ್ ಟ್ರೈನರ್ ಜಸ್ಟಿನ್ ವಿಕ್ಕಿ ಜಿಮ್ ನಲ್ಲಿ ಬಾರ್ಬೆಲ್ ಎತ್ತಲು ಹೋಗಿದ್ದಾರೆ. ಇದು 210ಕ ಕೆಜಿ ಇದ್ದು, ಶಕ್ತಿ ಮೀರಿ ಇದನ್ನು ಎತ್ತಲು ಜಸ್ಟಿನ್ ಯತ್ನಿಸಿದ್ದಾರೆ. ಭುಜದ ಮೇಲೆ ಭಾರೀ ಗಾತ್ರದ ಬಾರ್ಬೆಲ್ ಎತ್ತುವ ವೇಳೆ ಇಬ್ಬರು ಸಹಾಯಕರು ಅವರ ಹಿಂದೆ ನಿಂತಿದ್ದಾರೆ. ಆದರೆ ಭಾರ ಎತ್ತುವಾಗ ಕೂತು ಏಳುವ ವೇಳೆ ಬಾರ್ಬೆಲ್ ಸಹಾಯಕರ ಕೈಯಿಂದ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಅದು ಜಸ್ಟಿನ್ ಅವರ ಕುತ್ತಿಗೆ ಮೇಲಿಂದ ಜಾರಿದೆ. ಪರಿಣಾಮ ಜಸ್ಟಿನ್ ಅಲ್ಲೇ ಪ್ರಜ್ಞೆ ತಪ್ಪಿದ್ದಾರೆ.
ಅಪಘಾತದ ಪರಿಣಾಮವಾಗಿ ಜಸ್ಟಿನ್ ವಿಕ್ಕಿ ಅವರು ಕುತ್ತಿಗೆ ಮುರಿದು ಮತ್ತು ಅವರ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಪರ್ಕ ಹೊಂದಿದ ಪ್ರಮುಖ ನರಗಳಿಗೆ ಏಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ನಡೆಸಿದರೂ ಅವರು ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.