Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
Team Udayavani, Nov 27, 2024, 6:05 PM IST
ಉತ್ತರಪ್ರದೇಶ: ಮದುವೆ ಮೆರವಣಿಗೆಯ ಸಂಭ್ರಮದಲ್ಲಿ ಕಾರಿನ ಸನ್‌ರೂಫ್ ನಲ್ಲಿ ನಿಂತು ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟು ಹೋದ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ.
ಸಹರಾನ್‌ಪುರದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಂಡೇವಾಡ ಗ್ರಾಮದಲ್ಲಿ ಕಳೆದ ಶುಕ್ರವಾರ(ನ.22) ರಂದು ಘಟನೆ ನಡೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ಅಸಲಿಗೆ ಮದುವೆಯ ಮೆರವಣಿಗೆ ನಡೆಯುತ್ತಿತ್ತು ಈ ವೇಳೆ ಮೆರವಣಿಗೆಯಲ್ಲಿ ಬಂದ ಯುವಕರ ತಂಡದ ಸದಸ್ಯನೋರ್ವ ಕಾರಿನ ಸನ್‌ರೂಫ್ ಮೂಲಕ ನಿಂತು ಸ್ಕೈ ಶಾಟ್ ಸಿಡಿಸಿದ್ದಾನೆ ಈ ವೇಳೆ ಪಟಾಕಿ ಕಿಡಿ ಯುವನ ಕೈಗೆ ತಾಗುತ್ತಿದ್ದಂತೆ ಕೈಯಲ್ಲಿದ್ದ ಸ್ಕೈ ಶಾಟ್ ನ ಪೆಟ್ಟಿಗೆಯನ್ನು ಬಿಟ್ಟು ಬಿಟ್ಟಿದ್ದು ಅದು ಕಾರಿನ ಒಳಗೆ ಬಿದ್ದು ಕಾರಿನ ಒಳಗೆ ಸಿಡಿಯಲು ಆರಂಭಿಸಿದೆ. ಈ ವೇಳೆ ಕಾರಿನ ಒಳಗಿದ್ದ ಯುವಕರು ಹೊರ ಓಡಿ ಬಂದಿದ್ದಾರೆ ಆದರೆ ಪಟಾಕಿ ಮಾತ್ರ ಸಿಡಿಯುತ್ತಲೇ ಇತ್ತು ಅಲ್ಲಿದ್ದ ಯುವಕರು ಏನೂ ಮಾಡಲಾರದೇ ಓಡಾಡುತ್ತಿರುವುದು ಕಂಡು ಬಂದಿದೆ.
A car caught fire after a man recklessly burst firecrackers throughs its sunroof. The incident was reported from the #Saharanpur area of #UttarPradesh.
It was during a wedding celebration that people were engaged in bursting firecrackers, however, they did so in a risky manner.… pic.twitter.com/fdBL8FIEcM
— Hate Detector 🔍 (@HateDetectors) November 27, 2024
ಮಾಹಿತಿ ಪ್ರಕಾರ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು ಕಾರಿನ ಸೀಟು ಸೇರಿ ಒಳ ಭಾಗ ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದ್ದು ಇನ್ನು ಪ್ರಕರಣ ದಾಖಲಿಸಕೊಂಡ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡು ಕೃತ್ಯ ಎಸಗಿದ ಯುವಕರಿಗೆ ದಂಡ ವಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.