Video: ಪ್ರಿಯತಮೆ ಭೇಟಿ ವೇಳೆ ಸಿಕ್ಕಿಬಿದ್ದ; ಮನೆಯವರ ಕಣ್ತಪ್ಪಿಸಲು ಕೂಲರ್‌ಯೊಳಗೆ ಅವಿತ.!
Team Udayavani, Nov 5, 2023, 1:15 PM IST
ಜೈಪುರ: ಪ್ರಿಯಕರನೊಬ್ಬ ರಹಸ್ಯವಾಗಿ ಪ್ರಿಯತಮೆಯ ಮನೆಗೆ ಭೇಟಿ ನೀಡಲು ಹೋದ ಸಂದರ್ಭದಲ್ಲಿ ಮನೆಯವರ ಕೈಗೆ ಸಿಕ್ಕಿಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್ ಟಾಪಿಕ್ ಆಗಿದೆ.
ಯುವಕನೊಬ್ಬ ರಾತ್ರಿಯ ವೇಳೆ ಯುವತಿಯ ಮನೆಗೆ ಭೇಟಿಗೆಂದು ಬಂದಿದ್ದಾನೆ. ಮನೆಯವರಿಗೆ ಗೊತ್ತಾಗದಾಗೆ ರಹಸ್ಯವಾಗಿ ಯುವಕ ತನ್ನ ಪ್ರಿಯತಮೆಯೊಂದಿಗೆ ಮಾತನಾಡುತ್ತಿದ್ದ. ಆದರೆ ಇದೇ ವೇಳೆ ಯುವತಿಯ ಮನೆಯವರು ಕೋಣೆಯೊಳಗೆ ಬಂದಿದ್ದಾರೆ. ಈ ಇಕ್ಕಟ್ಟಿನ ಸ್ಥಿತಿಯಲ್ಲಿ ಯುವಕನಿಗೆ ಏನು ಮಾಡೋದೆಂದು ಗೊತ್ತಾಗದೆ, ಕೂಡಲೇ ಕೋಣೆಯಲ್ಲಿದ್ದ ಕೂಲರ್ ನೊಳಗೆ ನುಸುಳಿ ಕೂತಿದ್ದಾನೆ.
ಕೂಲರ್ ನ ಹಿಂದಿನ ಪಾರ್ಟ್ ನ್ನು ತೆಗೆದು ಅದರೊಳಗೆ ಅವಿತುಕೊಂಡು ಕೂತಿದ್ದಾನೆ. ಇತ್ತ ಯುವತಿಯ ಮನೆಯವರು ಅತ್ತಿತ್ತ ಹುಡುಕಿ ಕೊನೆಗೆ ಕೂಲರ್ ನ್ನು ಸರಿದು ನೋಡಿದ ವೇಳೆ ಅದರೊಳಗೆ ಯುವಕ ಇರುವುದನ್ನು ನೋಡಿದ್ದಾರೆ. ಈ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಇಲ್ಲಿಗೆಯೇ ವಿಡಿಯೋ ಮುಕ್ತಾಯವಾಗಿದ್ದು, ಮುಂದೇನಾಯಿತೆಂದು ತಿಳಿದಿಲ್ಲ.
ಈ ವಿಡಿಯೋ ಬಗ್ಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ. “ಆತ ಕೂಲರ್ ನಲ್ಲಿ ಹೇಗೆ ಫಿಟ್ ಆದ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ “ಸಿಕ್ಕಿ ಬಿದ್ದ ಪಾಪ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
Kalesh b/w a Guy and girl family over he came to meet her at night and her family caught him inside cooler in Rajasthan pic.twitter.com/bepkikh2Di
— Ghar Ke Kalesh (@gharkekalesh) November 4, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.