

Team Udayavani, Jan 30, 2025, 12:55 PM IST
ಕೋಲ್ಕತ್ತ: ಕಾಲೇಜಿನ ತರಗತಿಯಲ್ಲೇ ಪ್ರಾಧ್ಯಾಪಕಿಯೋರ್ವರು ತನ್ನ ಕಾಲೇಜಿನ ವಿದ್ಯಾರ್ಥಿಯನ್ನು ವಿವಾಹವಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದೀಗ ಭಾರಿ ಚರ್ಚೆಗೂ ಕಾರಣವಾಗಿದೆ.
ಪಶ್ಚಿಮ ಬಂಗಾಳದ ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ (MAKAUT) ಈ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಇಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕಿಯೊಬ್ಬರು ಅದೇ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗುತ್ತಿರುವುದು ಕಾಣಬಹುದು ಅಲ್ಲದೆ ಪ್ರಾಧ್ಯಾಪಕಿ ವಧುವಿನಂತೆ ವೇಷಭೂಷಣಗಳನ್ನು ಧರಿಸಿರುವುದು ಕಾಣಬಹುದು, ಇದಾದ ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಹೂಮಾಲೆಗಳನ್ನು ಹಾಕುವುದು ಹಣೆಗೆ ಸಿಂಧೂರ ಇಡುವುದು ಕಾಣಬಹುದಾಗಿದೆ.
ಮದುವೆಗೆ ಮೂವರ ಸಾಕ್ಷಿ:
ವಿಡಿಯೋ ಜೊತೆಗೆ ಕೈಯಲ್ಲೇ ಬರೆದಿರುವ ‘ಮದುವೆ ಪ್ರಮಾಣಪತ್ರ’ ಕೂಡ ವೈರಲ್ ಆಗಿದ್ದು, ಅದರಲ್ಲಿ ಮೂವರು ಸಾಕ್ಷಿಗಳ ಸಹಿ ಹಾಗೂ ವಿದ್ಯಾರ್ಥಿ ಮತ್ತು ಶಿಕ್ಷಕರ ಸಹಿ ಇದೆ ಎಂದು ಹೇಳಲಾಗಿದೆ.
A lady Professor in MAKAUT is ‘getting married’ to her young student in the office. pic.twitter.com/coXaVGH7s7
— Abir Ghoshal (@abirghoshal) January 29, 2025
ವಿಡಿಯೋ ವೈರಲ್ ಬೆನ್ನಲೇ ತನಿಖೆಗೆ ಆದೇಶ:
ಇನ್ನು ಪ್ರಾಧ್ಯಾಪಕಿಯೊಬ್ಬರು ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿಯನ್ನು ರಜೆಯ ಮೇಲೆ ಕಳುಹಿಸಿಕೊಟ್ಟಿದ್ದಾರೆ ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಸದಸ್ಯರ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದೆ ಅಲ್ಲದೆ ಪ್ರಾಧ್ಯಾಪಕಿಯಿಂದ ಸ್ಪಷ್ಟನೆಯನ್ನೂ ಕೇಳಿದೆ.
ಇದೊಂದು ನಾಟಕ ಎಂದ ಪ್ರಾಧ್ಯಾಪಕಿ:
ಇನ್ನು ವೈರಲ್ ಆಗಿರುವ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ ಪ್ರಾಧ್ಯಾಪಕಿ, ನಾನು ಮನೋವಿಜ್ಞಾನದ ಪ್ರಾಧ್ಯಾಪಕಿಯಾಗಿದ್ದ ಕಾರಣ ಇದೊಂದು ಪಠ್ಯದ ಭಾಗವಾಗಿದ್ದು ಅದಕ್ಕಾಗಿ ಮದುವೆಯ ನಾಟಕವಾಡಿದ್ದೇವೆ ಅದು ಬಿಟ್ಟರೆ ಬೇರೇನು ಇಲ್ಲ, ಇದು ನನ್ನ ಹೆಸರು ಹಾಳು ಮಾಡಲು ಕಾಣದ ಕೈಗಳು ಈ ರೀತಿ ವಿಡಿಯೋ ವೈರಲ್ ಮಾಡಿದೆ ಅವರ ವಿರುದ್ಧ ದೂರು ನೀಡುವುದಾಗಿ ಪ್ರಾಧ್ಯಾಪಕಿ ಹೇಳಿದ್ದಾರೆ.
ಸದ್ಯ ಸಮಿತಿಯಿಂದ ತನಿಖೆ ನಡೆಯುತ್ತಿದ್ದು ಯಾವ ರೀತಿಯ ವರದಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
Racket: ಕಾರವಾರ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಪಾಕ್ ಗೆ ನೀಡುತ್ತಿದ್ದ ಮತ್ತೋರ್ವನ ಬಂಧನ
Delhi stampede: ರೈಲ್ವೆ ಇಲಾಖೆಗೆ ದೆಹಲಿ ಹೈ ಕೋರ್ಟ್ ತೀವ್ರ ತರಾಟೆ!
Chhaava ಎಫೆಕ್ಟ್:ಸಂಭಾಜಿ ಮಹಾರಾಜ್ ಕುರಿತು ಆಕ್ಷೇಪಾರ್ಹ ಮಾಹಿತಿ: ವಿಕಿಪಿಡಿಯಾಗೆ ನೋಟಿಸ್
Mahakumbh; ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲ ಆಚಮನಕ್ಕೂ ಯೋಗ್ಯ: ಯೋಗಿ
Bantwal: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತ್ಯು
Sandalwood: ಹೊಸ ಚಿತ್ರಕ್ಕೆ ಚಿಕ್ಕಣ್ಣ ರೆಡಿ
Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
You seem to have an Ad Blocker on.
To continue reading, please turn it off or whitelist Udayavani.