Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ
ಮತಗಟ್ಟೆಯಲ್ಲಿ ಆಕರ್ಷಣೆಯ ಕೇಂದ್ರಬಿಂದು...!!
Team Udayavani, Apr 19, 2024, 5:43 PM IST
ಸಹರಾನ್ ಪುರ(ಉತ್ತರಪ್ರದೇಶ): ಸದ್ಯ ಸಾಮಾಜಿಕ ತಾಣದಲ್ಲಿ ಪ್ರತಿನಿತ್ಯವೂ ನಾನಾ ಕಾರಣಗಳಿಂದ ಯಾರಾದರೊಬ್ಬರು ವೈರಲ್ ಆಗುತ್ತಲೇ ಇರುತ್ತಾರೆ. ಲೋಕಸಭಾ ಚುನಾವಣೆ ವೇಳೆ ಪೋಲಿಂಗ್ ಏಜೆಂಟ್ ಆಗಿರುವ ಮಹಿಳೆಯೊಬ್ಬರು ಮತಗಟ್ಟೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿ ಭಾರಿ ಸುದ್ದಿಯಾಗಿದ್ದಾರೆ.
ಸಹರಾನ್‌ಪುರ ಲೋಕಸಭಾ ಚುನಾವಣೆಯಲ್ಲಿ ಗಂಗೋಹ್ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಯಲ್ಲಿ ಕರ್ತವ್ಯವನ್ನು ಮಾಡುತ್ತಿರುವ ಇಶಾ ಅರೋರಾ ಇತರ ಪೋಲಿಂಗ್ ಏಜೆಂಟರೊಂದಿಗೆ ಬೂತ್‌ಗೆ ಬಂದಾಗ ಅವರ ಮೊದಲ ವೀಡಿಯೊ ವೈರಲ್ ಆಗಿತ್ತು. ಇಶಾ ಅರೋರಾ ಮತಗಟ್ಟೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿ ಬಿಟ್ಟರು.
ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಇಶಾ ಅರೋರಾ ಅವರು ಮದರಿ ಎಂಬ ಕುಗ್ರಾಮದಲ್ಲಿ ಚುನಾವಣೆಯ ಕರ್ತವ್ಯ ನಿರ್ವಹಿಸುತ್ತಿದ್ದರಾದರೂ ಭಾರಿ ಸುದ್ದಿಯಾಗಿದ್ದಾರೆ. ಇಶಾ ಅರೋರಾ ಈ ಹಿಂದೆ ಎರಡು ಬಾರಿ ಚುನಾವಣ ಕರ್ತವ್ಯ ನಿರ್ವಹಿಸಿದ್ದಾರೆ.
ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿರುವ ಇಶಾ ‘ “ನೀವು ಯಾವುದೇ ಕರ್ತವ್ಯವನ್ನು ಪಡೆದರೆ ಸಮಯಪಾಲನೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ವಹಿಸಿಕೊಂಡಿದ್ದೇನೆ. ಕಾರ್ಯನಿರ್ವಹಣೆಯು ಸುಗಮವಾಗಿರಲು ಪ್ರತಿಯೊಬ್ಬರೂ ಸಮಯಪಾಲನೆ ಮಾಡಬೇಕು. ಇಲ್ಲದಿದ್ದರೆ ಇಷ್ಟು ದೊಡ್ಡ ಚುನಾವಣೆಗಳನ್ನು ನಡೆಸುವುದು ಸಾಧ್ಯವಿರಲಿಲ್ಲ. ವಿಡಿಯೋಗೆ ಬಂದಿರುವ ಪ್ರತಿಕ್ರಿಯೆ ವೀಕ್ಷಿಸಲು ನನಗೆ ಸಮಯ ಸಿಗಲಿಲ್ಲ. ಇದು ಚುನಾವಣ ಸಮಯ ಮತ್ತು ಸಮಯಕ್ಕೆ ಬರುವುದು ನನ್ನ ಕರ್ತವ್ಯ ಆದ್ದರಿಂದ ನಾನು ಕಾರ್ಯನಿರತನಾಗಿದ್ದೇನೆ. ನನ್ನ ಸಮಯಪ್ರಜ್ಞೆ ಮತ್ತು ಭಕ್ತಿಯಿಂದ ಇದು ವೈರಲ್ ಆಗಿದೆ ಎಂದೆನಿಸುತ್ತದೆ” ಎಂದರು.
#WATCH | Saharanpur, UP: Polling Agent Isha Arora says, “I think that if you get any duty, you should be punctual and that’s the reason I have assumed my duty on time. Every man and woman should be punctual to let the functioning be smooth.”
Regarding her video going viral, she… pic.twitter.com/Xo44vVeYyQ
— ANI (@ANI) April 19, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಪತ್ನಿ ಮುಂದೆ ʼಅಂಕಲ್ʼ ಎಂದು ಕರೆದಿದ್ದಕ್ಕೆ ಅಂಗಡಿಯಾತನನ್ನು ಥಳಿಸಿದ ವ್ಯಕ್ತಿ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Kerala: ಸರಣಿ ಅಪಘಾತ… ಅಪಾಯದಿಂದ ಪಾರಾದ ಕೇರಳ ಸಿಎಂ: ವಿಡಿಯೋ ವೈರಲ್
Challenge; ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ!
Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.