Woman Biker: ನಿಯಮ ಉಲ್ಲಂಘನೆ, ತಪ್ಪು ಮಾಡಿಯೂ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಯುವತಿ
Team Udayavani, Sep 25, 2023, 10:50 AM IST
ಮುಂಬೈ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ಬೈಕ್ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ಸೆಪ್ಟೆಂಬರ್ 15 ರಂದು ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ನಡೆದ ಘಟನೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನೂಪುರ್ ಪಟೇಲ್ ಎಂಬ 26 ವರ್ಷದ ಮಹಿಳೆ ಮಧ್ಯಪ್ರದೇಶದ ಜಬಲ್‌ಪುರ ನಿವಾಸಿಯಾಗಿದ್ದು, ತನ್ನ ಸಹೋದರನನ್ನು ಭೇಟಿಯಾಗಲು ಪುಣೆಗೆ ತೆರಳಿದ್ದಳು. ಅಲ್ಲಿ ಆಕೆ ವರ್ಲಿಯಲ್ಲಿರುವ ಸೀ ಲಿಂಕ್ ಅನ್ನು ನೋಡಲು ಬಯಸಿದ್ದಳು, ಆದ್ದರಿಂದ ಆಕೆ ಮುಂಬೈಗೆ ಪ್ರಯಾಣಿಸಲು ತನ್ನ ಸಹೋದರನ ಮೋಟಾರ್ ಸೈಕಲ್ ಅನ್ನು ತೆಗೆದುಕೊಂಡು ಹೊರಟಿದ್ದಾಳೆ.
ವಿಷಯವೇನೆಂದರೆ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ಬೈಕಿಂಗ್‌ಗೆ ಅವಕಾಶವಿಲ್ಲ, ಆದರೆ ನೂಪುರ್ ಗೆ ಈ ವಿಚಾರ ತಿಳಿಯದೆ ಸಮುದ್ರ ಸೇತುವೆಯ ಮೇಲೆ ಬೈಕ್ ಸವಾರಿಗೆ ಮುಂದಾಗಿದ್ದಾಳೆ. ಈ ವೇಳೆ ಮಹಿಳೆಯನ್ನು ಟ್ರಾಫಿಕ್ ಪೊಲೀಸರು ತಡೆದಿದ್ದಾರೆ ಇದರಿಂದ ಕುಪಿತಗೊಂಡ ಮಹಿಳೆ ಟ್ರಾಫಿಕ್ ಪೊಲೀಸ್ ಗೆ ಮನಬಂದಂತೆ ಅವಾಜ್ ಹಾಕಿದ್ದಾಳೆ. ಮಹಿಳೆ ಮಾಡಿರುವ ತಪ್ಪನ್ನು ಪೊಲೀಸರು ಬಿಡಿಸಿ ಹೇಳಿದರೂ ಅದನ್ನು ಒಪ್ಪದ ಮಹಿಳೆ ಪೊಲೀಸರಿಗೆ ಗದರಿದ್ದಾಳೆ.
Mumbai: A 26-year-old woman from MP, identified as Nupur Patel was arrested by the police on September 15 for allegedly joyriding on her motorcycle — without a helmet — on the Bandra-Worli Sea Link, where two-wheelers are not permitted.
The situation became serious when the woman… pic.twitter.com/XID507kwLf— Free Press Journal (@fpjindia) September 24, 2023
ನೂಪುರ್ ಈ ನಗರಕ್ಕೆ ಹೊಸಬರು ಇಲ್ಲಿನ ರಸ್ತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಮತ್ತು ಸೀ ಲಿಂಕ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿದಿರಲಿಲ್ಲ. ಆದರೆ, ಸೀ ಲಿಂಕ್‌ನ ಪ್ರವೇಶ ದ್ವಾರದಲ್ಲಿರುವ ಸೂಚನಾ ಫಲಕವನ್ನೂ ಆಕೆ ನಿರ್ಲಕ್ಷಿಸಿದ್ದಾರೆ. ನೂಪುರ್ ಬೈಕ್ ಚಲಾಯಿಸುತ್ತಿರುವುದನ್ನು ಗಮನಿಸಿದ ಪೊಲೀಸರು ತಡೆದಿದ್ದಾರೆ ಈ ವೇಳೆ ಕುಪಿತಗೊಂಡ ಮಹಿಳೆ ಟ್ರಾಫಿಕ್ ಪೊಲೀಸರಿಗೆ ಮನಬಂದಂತೆ ಬೈದಿದ್ದಾಳೆ ಅಲ್ಲದೆ ಬೈಯುವ ಭರದಲ್ಲಿ ಪೊಲೀಸರ ಕೈಯನ್ನೇ ಕತ್ತರಿಸುವುದಾಗಿ ಹೇಳಿಕೊಂಡಿದ್ದಾಳೆ, ಈ ವೇಳೆ ಪೊಲೀಸ್ ಅಧಿಕಾರಿಗಳು ನೂಪುರ್ ಅವರ ಲೈಸೆನ್ಸ್ ಮತ್ತು ವಾಹನ ದಾಖಲೆಗಳನ್ನು ಕೇಳಿದಾಗ, ಅದಕ್ಕೂ ಸಹಕರಿಸಲಿಲ್ಲ, ಬಳಿಕ ಠಾಣೆಗೆ ಬರುವಂತೆ ಹೇಳಿದಾಗ ಅದಕ್ಕೂ ಒಪ್ಪದೆ ಅಸಭ್ಯವಾಗಿ ವರ್ತಿಸಿದ್ದಾಳೆ ಈ ವೇಳೆ ಸ್ಥಳಕ್ಕೆ ಮಹಿಳಾ ಸಿಬ್ಬಂದಿಯನ್ನು ಕರೆಸಿ ಬಳಿಕ ಠಾಣೆಗೆ ಕರೆದೊಯ್ದು ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Davanagere Bandh: ದಾವಣಗೆರೆ ಬಂದ್ ಗೆ ಅಭೂತಪೂರ್ವ ಬೆಂಬಲ… ಅಂಗಡಿ ಮುಂಗಟ್ಟು ಬಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.