ಮೊಬೈಲ್ ಜಾಸ್ತಿ ಬಳಸಬೇಡ ಎಂದ ಪೋಷಕರು… ಸಿಟ್ಟಿಗೆದ್ದು ಜಲಪಾತಕ್ಕೆ ಜಿಗಿದ ಮಗಳು
Team Udayavani, Jul 21, 2023, 11:42 AM IST
ಛತ್ತೀಸ್‌ಗಢ: ಮೊಬೈಲ್ ಬಳಕೆ ಮಾಡದವರು ಯಾರು ಇದ್ದಾರೆ ಈಗಿನ ಕಾಲದಲ್ಲಿ, ಮೊಬೈಲ್ ಇದ್ದಾರೆ ಮತ್ತೇನು ಬೇಡ ಎಂಬಂತಾಗಿದೆ ಈಗಿನ ಜನರಿಗೆ, ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಮೊಬೈಲ್ ಬಳಸುವವರೇ, ಸಣ್ಣ ಮಕ್ಕಳು ಮೊಬೈಲ್ ಹಿಡಿದುಕೊಂಡಾಗ ಗದರಿಸುವ ಪೋಷಕರು ಕೊನೆಗೆ ತಾವು ಮಾಡುವುದು ಕೂಡ ಅದನ್ನೇ…
ಮೊಬೈಲ್ ಗೀಳಿಗೆ ಬಿದ್ದರೆ ಅದರಿಂದ ಹೊರ ಬರುವುದು ಭಾರಿ ಕಷ್ಟ ಅದರಂತೆ ಇಲ್ಲೊಬ್ಬಳು ಯುವತಿ ಅತಿಯಾಗಿ ಮೊಬೈಲ್ ಅನ್ನು ಅತಿಯಾಗಿ ಬಳಕೆ ಮಾಡುತ್ತಿದ್ದಾಳೆ ಎಂದು ಮೊಬೈಲ್ ಜಾಸ್ತಿ ಬಳಸಬೇಡ ಎಂದು ಸ್ವಲ್ಪ ಗದರಿಸಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವತಿ ನೊಂದು ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಜಲಪಾತಕ್ಕೆ ಹಾರಿದ ಪ್ರಸಂಗ ನಡೆದಿದೆ.
ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಈ ಘಟನೆ ಕಳೆದ ಮಂಗಳವಾರ ನಡೆದಿದ್ದು ಪೋಷಕರು ಮಗಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾಳೆ ಎಂದು ಬೈದಿದ್ದಾರೆ ಅಷ್ಟಕ್ಕೇ ಕೋಪಮಾಡಿಕೊಂಡ ಯುವತಿ ಮನೆಯೊಂದ ಹೊರ ಬಂದವಳು ಸೀದಾ ಚಿತ್ರಕೋಟೆ ಜಲಪಾತದ ಬಳಿ ಬಂದಿದ್ದಾಳೆ ಜಲಪಾತದ ಸುತ್ತ ಆಚೆ ಈಚೆ ತಿರುಗಾಡಿದ್ದಾಳೆ ಬಳಿಕ ಜಲಪಾತದ ಬಂಡೆಗಳ ಬಳಿ ತೆರಳಿ ನಿಂತು ಸುಮಾರು 90 ಅಡಿ ಆಳಕ್ಕೆ ಜಿಗಿದಿದ್ದಾಳೆ. ಅಷ್ಟೋತ್ತಿಗೆ ಜಲಪಾತ ವೀಕ್ಷಣೆಗೆ ಬಂದಿದ್ದ ಕೆಲವು ಮಂದಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ಯುವತಿ ಅಷ್ಟೋತ್ತಿಗಾಗಲೇ ಜಲಪಾತಕ್ಕೆ ಜಿಗಿದಿದ್ದಾಳೆ ಈ ಘಟನೆಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕೋಪದಿಂದ ಜಲಪಾತಕ್ಕೆ ಜಿಗಿದ ಯುವತಿಗೆ ನೀರಿಗೆ ಬಿದ್ದ ವೇಳೆ ಬಹುಶ ಜ್ಞಾನೋದಯವಾಗಿದೆ ನಾನು ಮಾಡಿದ್ದು ತಪ್ಪು ಎಂದು ಬಳಿಕ ಜೀವ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾಳೆ ಕೂಡಲೇ ಅಲ್ಲೇ ಇದ್ದ ಕೆಲ ಯುವಕರು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ಯುವತಿಯ ರಕ್ಷಣೆ ಮಾಡಿದ್ದಾರೆ.
ಬಳಿಕ ಯುವತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿ ಬಳಿಕ ಪೋಷಕರಿಗೆ ಒಪ್ಪಿಸಿದ್ದಾರೆ. ಪುಣ್ಯಕ್ಕೆ ಯುವತಿಯ ಆಯುಷ್ಯ ಚೆನ್ನಾಗಿತ್ತು ಹಾಗಾಗಿ ಅಷ್ಟು ಎತ್ತರದಿಂದ ಜಿಗಿದರೂ ಪಾರಾಗಿ ಬಂದಿದ್ದಾಳೆ, ಹಾಗಾಗಿ ಯಾವುದೇ ಕೋಪಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ತಾಳ್ಮೆ ಅತೀ ಅಗತ್ಯ.
girl jumps from a height of 90 foot into the Chitrakote Waterfalls after her parents scolded her for using mobile phone. She, however, survived the plunge and emerged a few metres away.#Chhattisgarh #chitrakotewaterfalls #mobile #waterfallspic.twitter.com/WEkVxJq8HN
— Priyathosh Agnihamsa (@priyathosh6447) July 19, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.