Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್.. ಕಾಲಿನಲ್ಲಿ ನೇತಾಡಿದ ಮಗು.!
Team Udayavani, Sep 22, 2024, 1:00 PM IST
ನವದೆಹಲಿ: ಇಂದಿನ ಇಂಟರ್ ನೆಟ್ ಯುಗದಲ್ಲಿ ಕ್ಷಣ ಮಾತ್ರದಲ್ಲಿ ಕೆಲವೊಂದು ವಿಚಾರಗಳು – ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ರೀಲ್ಸ್ ಗಳಂತೂ ಬಹಳ ವೇಗವಾಗಿ ಎಲ್ಲೆಡೆ ಶೇರ್ ಆಗುತ್ತವೆ.
ಅಪಾಯಕಾರಿ ಸಾಹಸದ ರೀಲ್ಸ್ (Reels) ಮಾಡಲು ಹೋಗಿ ಕಾಲು ಕಳೆದುಕೊಂಡವರು, ಪ್ರಾಣವನ್ನೇ ಕಳೆದುಕೊಂಡ ಘಟನೆಗಳನ್ನು ನಾವು ನೋಡಿದ್ದೇವೆ. ಇಂತಹ ಎಷ್ಟೇ ಘಟನೆಗಳು ನಡೆದರೂ ಹುಚ್ಚಾಟದ ರೀಲ್ಸ್ ಮಾಡುವುದನ್ನು ಮಾತ್ರ ಜನ ನಿಲ್ಲಿಸಲ್ಲ. ಇದೇ ರೀತಿಯ ಮತ್ತೊಂದು ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳೆಯೊಬ್ಬರು ತೆರೆದ ಬಾವಿ ಮೇಲೆ ಕುಳಿತು, ಹಾಡೊಂದಕ್ಕೆ ಲಿಪ್ ಸಿಂಕ್ ಮಾಡಿ, ರೀಲ್ಸ್ ಮಾಡಿದ್ದಾರೆ. ಆ ಮಹಿಳೆಯ ಕಾಲಿನಲ್ಲಿ ಮಗು ನೇತಾಡಿಕೊಂಡಿದೆ. ಸ್ವಲ್ಪ ಆಚೆ ಇಚೆ ಆದರೂ ಆ ಮಗು ಬಾವಿಗೆ ಬೀಳುವ ಸಾಧ್ಯತೆಯಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಮಹಿಳೆ ಮಗುವನ್ನು ನಿರ್ಲಕ್ಷ್ಯತನ ಮಹಿಳೆ ಹಿಡಿದುಕೊಂಡಿರುವ ಕ್ರಮಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಹಿಳೆ ಮಗುವನ್ನು ಕೊಲ್ಲಲು ಯತ್ನಿಸಿದ್ದಾಳೆ ಎಂದು ʼಎಕ್ಸ್ʼನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.
“ಕಾನೂನನ್ನು ದೂಷಿಸಬೇಡಿ. ಇದೊಂದು ಮೆಂಟಲ್ ಕೇಸ್! ರೀಲ್ಸ್ ಗಳು ಮಾನವನ ಮೆದುಳನ್ನು ನಾಶಪಡಿಸುತ್ತಿವೆ. ಇಂತಹ ಸನ್ನಿವೇಶಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
Family court in custody case: Only mother can love child more. Even more than father.
Le mother:#ParentalAlienation pic.twitter.com/mc1kl5ziFj— Raw and Real Man (@RawAndRealMan) September 18, 2024
ಇಂಥ ಮಹಿಳೆಯ ಮೇಲೆ ಕಾನೂನು ಕ್ರಮ ಆಗಬೇಕೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, ಇದು ಎಲ್ಲಿ ನಡೆದಿದೆ. ಯಾವಾಗ ಆಗಿದ್ದು, ಹಾಗೂ ಮಹಿಳೆಯ ಜತೆಗಿರುವ ಈ ಮಗು ಆಕೆಯ ಮಗುವೇ ಅಥವಾ ಬೇರೆಯವರದ್ದೇ ಎನ್ನುವುದರ ಬಗ್ಗೆ ಯಾವ ಮಾಹಿತಿಯೂ ತಿಳಿದು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.